ಕಮಲ್ ಹಾಸನ್ ಕ್ಷಮೆ ಕೇಳುವವರೆಗೂ ಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Get real time updates directly on you device, subscribe now.

ಕನ್ನಡ ಭಾಷೆಗೆ ಅವಮಾನ ಮಾಡಿದ ನಟ ಕಮಲ್ ಹಾಸನ್‌ರವರು ನಟಿಸಿರುವ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ಜಯ ಕರ್ನಾಟಕ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಳ್ಳಾರಿ ರಾಮಣ್ಣ ನಾಯಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಮಲ್ ಹಾಸನ್ ಕೇವಲ ಒಬ್ಬ ನಟ ಮಾತ್ರ. ಅವರು ಯಾವುದೇ ಸಂಶೋಧನೆಯಲ್ಲಿ, ಸಾಹಿತ್ಯದಲ್ಲಿ ತೊಡಗಿಕೊಂಡವರಲ್ಲ. ಅವರಿಗೆ ಭಾಷೆಗಳ ಇತಿಹಾಸ, ಪ್ರಾಚೀನತೆ ವಿಷಯದಲ್ಲಿ ಜ್ಞಾನ ಕಡಿಮೆ ಇದೆ. ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನವಿಲ್ಲದೇ ಮಾತನಾಡಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಒಬ್ಬ ನಟನಾಗಿ ತಮ್ಮ ಕ್ಷೇತ್ರದ ಬಗ್ಗೆ ಜ್ಞಾನವಿದ್ದಷ್ಟು ಮಾತನಾಡಬೇಕೆ ಹೊರತು, ಈ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅಲ್ಲ. ಅವರ ಉದ್ಧಟತನದ ಮಾತುಗಳಿಂದ ನಾಡಿನ ಸಮಸ್ತ ಕನ್ನಡಿಗರಿಗೆ ಅವಮಾನವಾಗಿದ್ದು, ಆದರೆ ಕಮಲ್ ಹಾಸನ್ ಕ್ಷಮೆ ಕೇಳುವುದಿಲ್ಲ ಎಂದು ಮೊಂಡತನ ಮಾಡುತ್ತಿದ್ದಾರೆ. ಕಾರಣ ನಮ್ಮ ಸರ್ಕಾರ ಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸಿದರು ಹಾಗೂ ಅವರು ಕರ್ನಾಟಕಕ್ಕೆ ಬರುವದನ್ನು ನಿರ್ಬಂಧಿಸಬೇಕು. ಅಂದಾಗಲೇ ಮತ್ತೊಮ್ಮೆ ಯಾರೂ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡದಿರಲು ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!