ಸೇವಾ ನಿವೃತ್ತ ಪೋಲಿಸರಿಗೆ ಆತ್ಮೀಯ ಬೀಳ್ಕೋಡುಗೆ

Get real time updates directly on you device, subscribe now.

ಕೊಪ್ಪಳ : ಪೊಲೀಸ್ ಇಲಾಖೆಯಲ್ಲಿ ೧೮ ರಿಂದ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳನ್ನು ಆತ್ಮೀಯ ವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಪೊಲೀಸ್ ಇಲಾಖೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳ ಪಿಎಸ್‌ಐ ಸಂಚಾರಿ ಠಾಣೆಯ ಶ್ರೀಶೈಲ್ ರಾವ್ ಕುಲ ಕರ್ಣಿ, ಕೊಪ್ಪಳದ ಎಆರ್‌ಎಸ್‌ಐ ಡಿಎಆರ್ ಘಟಕದ ಗೋಪಾಲ್ ಸಿಂಧೆ. ಗಂಗಾವತಿ ಸಂಚಾರಿ ಠಾಣೆ ಯ ಎಎಸ್‌ಐ ಹಮೀದ್ ಹುಸೇನ್, ಕನಕಗಿರಿ ಠಾಣೆಯ ಎಎಸ್‌ಐ ಲಕ್ಷ್ಮಪ್ಪ, ಕೊಪ್ಪಳ ನಗರ ಠಾಣೆಯ ಎಎಸ್‌ಐ ದೊಡ್ಡಪ್ಪ, ಯಲಬುರ್ಗಾ ಸಿಎಚ್‌ಸಿ ಲಕ್ಷ್ಮಣ್ ಮುಧೋಳ್ ಇವರನ್ನು ಜಿಲ್ಲಾ ಪೊಲೀಸ್ ವತಿ ಯಿಂದ ಜಿಲ್ಲಾ ಪೊಲೀಸ್ ಕಚೇರಿ ಯಲ್ಲಿ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿ ಆತ್ಮೀಯ ವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮ್.ಎಲ್ ಅರಸಿದ್ದಿ, ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ಹೇಮಂತಕುಮಾರ್, ಪಿಐ ಶಿವರಾಜ್, ಪಿಐ Zಂದ್ರಪ್ಪ ಉಪ್ಪಾರ, ನಿವೃತ್ತಿ ಹೊಂದುತ್ತಿರುವ ಅಧಿಕಾರಿಗಳ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!