ಮೇ.24 ರಂದು ಶ್ರೀ ಶಿವದಾಸಿಮಯ್ಯನವರ ಜಯಂತೋತ್ಸವ : ವೀರೇಶ ಬೆಟಗೇರಿ

Get real time updates directly on you device, subscribe now.


ಕೊಪ್ಪಳ : ಕೊಪ್ಪಳ ಜಿಲ್ಲಾ ಶಿವಸಿಂಪಿ ಸಮಾಜ ವತಿಯಿಂದ ಪ್ರಪ್ರಥಮ ಬಾರಿಗೆ ಮೇ 24ರಂದು ಶನಿವಾರ ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಶ್ರೀ ಶಿವದಾಸಿಮಯ್ಯನವರ ಜಯಂತೋತ್ಸವ ಹಾಗೂ ನೂತನ ಕೊಪ್ಪಳ ಜಿಲ್ಲಾ ಶಿವಸಿಂಪಿ ಸಮಾಜದ ಉದ್ಘಾಟನಾ ಸಮಾರಂಭ ಜರುಗುವುದು ಎಂದು ಜಿಲ್ಲಾ ಶಿವಸಿಂಪಿ ಸಮಾಜದ ಅಧ್ಯಕ್ಷ ವೀರೇಶ್ ಕುಮಾರ್ ಬೆಟಗೇರಿ ಹೇಳಿದರು.
ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅಂದು ಬೆಳಿಗ್ಗೆ 7 ಗಂಟೆಗೆ ಕುಲಗುರು ಶ್ರೀ ಶಿವದಾಸಿಮಯ್ಯನವರ ಭಾವಚಿತ್ರ ಹಾಗು ಕುಂಭ ಮೆರವಣಿಗೆ ಗವಿಮಠದಿಂದ ಬಸವೇಶ್ವರ ಮೂಲಕ ಶ್ರೀಮಹಾಂತಯ್ಯನ ಮಠ ಕಲ್ಯಾಣ ಮಂಟಪದವರೆಗೆ ಜರುಗುವುದು.
ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕುಕನೂರಿನ ಶ್ರೀಮಹಾದೇವ ಮಹಾಸ್ವಾಮಿಗಳು ವಹಿಸುವರು.
ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ನೆರವೇರಿಸುವರು, ಭಾವಚಿತ್ರಕ್ಕೆ ಮಾಜಿ ಸಂಸದ ಸಂಗಣ್ಣ ಕರಡಿ, ಆರ್ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ್ ರಾಜೂರು ಪುಷ್ಪಾರ್ಚನೆ ಮಾಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜಿಲ್ಲಾ ಶಿವಸಿಂಪಿ ಸಮಾಜದ ಅಧ್ಯಕ್ಷ ವೀರೇಶ್ ಕುಮಾರ್ ಬೆಟಗೇರಿ ವಹಿಸುವರು.
ಗುರುತಿನ ಚೀಟಿಯನ್ನು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಬಿಡುಗಡೆಗೊಳಿಸುವರು.
ಸಮಾಜದ ಗೌರವಾಧ್ಯಕ್ಷ ಶಿವಪುತ್ರಪ್ಪ ಸಿಂಪಿ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ಟಿ ಎ ಪಿ ಸಿ ಎಂ ಎಸ್ ಉಪಾಧ್ಯಕ್ಷ ಚಂದ್ರಕಾಂತ್ ಮಹಾಂತಯ್ಯನ ಮಠ, ನಗರ ಠಾಣೆ ಪಿಐ ಜಯಪ್ರಕಾಶ್, ಬಸವರಾಜಪ್ಪ ಮೆರವಣಿಗೆ, ಈರಪ್ಪ ಶಿರೋಳ, ಎಂ.ಎ. ದೇಸಾಯಿ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ಡಾ. ವೀರಣ್ಣ ಶಿರೂರು, ವಿರುಪಾಕ್ಷಪ್ಪ ಶಿವಸಿಂಪಿ ಮತ್ತಿತರು ಪಾಲ್ಗೊಳ್ಳುವರು.
ಹಿರೇಜಂತಕಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೀರಭದ್ರಪ್ಪ ಗೊಂಡಬಾಳ ಅವರಿಂದ ವಿಶೇಷ ಉಪನ್ಯಾಸ ಜರುಗುವುದು ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾ ಶಿವಸಿಂಪಿ ಸಮಾಜದ ಗೌರವಾಧ್ಯಕ್ಷ ಶಿವಪುತ್ರಪ್ಪ ಸಿಂಪಿ, ಉಪಾಧ್ಯಕ್ಷ ಮಹಾದೇವಪ್ಪ ಶಿವಸಿಂಪರ್, ಪ್ರಧಾನ ಕಾರ್ಯದರ್ಶಿ ರಾಚಪ್ಪ ಗೊಂಡಬಾಳ, ಸಂ. ಕಾರ್ಯದರ್ಶಿ ಬಸವರಾಜ್ ಅಂಗಡಿ, ಖಜಾಂಚಿ ಬಸವರಾಜ್ ಸಿಂಪಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!