ಮುನಿರಾಬಾದ್: ಎಂ.ಎಸ್.ಟಿ.ಸಿ. ಘಟಕದ ಅನುಪಯುಕ್ತ ಟೆಂಪೋ ಟ್ರಾವೆಲರ್ ವಾಹನದ ಇ-ಹರಾಜು
: ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ಅನುಪಯುಕ್ತ ಟೆಂಪೋ ಟ್ರಾವೆಲರ್ ವಾಹನವನ್ನು ಎಂ.ಎಸ್.ಟಿ.ಸಿ. ಅಮಿಟೆಡ್ ಮೂಲಕ ಇ-ಹರಾಜು ಮಾಡಲಾಗುತ್ತಿದೆ.
ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ಟೆಂಪೋ ಟ್ರಾವೆಲರ್, ವಾಹನ ಸಂಖ್ಯೆ ಕೆ.ಎ 1, ಜಿ 3978 (KA-01-G-3978) ವಾಹನ ತಯಾರಿಕೆ ವರ್ಷ 2003 ಆಗಿದ್ದು, ಈ ಅನುಪಯುಕ್ತ ಪೊಲೀಸ್ ವಾಹನವನ್ನು ಭಾರತದ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಅಮಿಟೆಡ್. ನಂ: 19/5, 3ನೇ ಮಹಡಿ, ಕರೀಂ ಟವರ್, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-52 ರವರ ಮೂಲಕ ವಿಲೇವಾರಿ ಮಾಡುವುದರಿಂದ ಆಸಕ್ತಿ ಇರುವ ಬಿಡ್-ದಾರರು ಮೆಃ ಎಂ.ಎಸ್.ಟಿ.ಸಿ. ಲಿಮಿಟೆಡ್ ನಲ್ಲಿ ನೋಂದಾಯಿಸಿಕೊಂಡು (www.mistcindia.co.in) ಮೇ. 27 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ನಡೆಯುವ “ಇ-ಹರಾಜು”ವಿನಲ್ಲಿ ಷರತ್ತುಗಳಿಗೆ ಒಳಪಟ್ಟು ಬಿಡ್ ನಲ್ಲಿ ಭಾಗವಹಿಸಬಹುದಾಗಿದೆ.
ಇ-ಹರಾಜಿನ ಷರತ್ತು ಮತ್ತು ನಿಬಂಧನೆಗಳನ್ನು ಎಂ.ಎಸ್.ಟಿ.ಸಿ. ಪೋರ್ಟಲ್ ನಲ್ಲಿ ತಿಳಿದು ನಂತರ E-Auction ನಲ್ಲಿ ಭಾಗವಹಿಸಬೇಕು. ಯಾವುದೇ ನಿಬಂಧನೆಗಳನ್ನು ತಿಳಿಯದೇ ಭಾಗವಹಿಸಿ ನಂತರ ತಪ್ಪೆಸಗಿದಲ್ಲಿ ಅದಕ್ಕೆ ಮುನಿರಾಬಾದನ ಕೆ.ಎಸ್.ಆರ್.ಪಿ., ತರಬೇತಿ ಶಾಲೆಯ ಪ್ರಾಂಶುಪಾಲ ಯಾವುದೇ ಜವಾಬ್ದಾರರಲ್ಲ. ಷರತ್ತು ಮತ್ತು ನಿಬಂಧನೆಗಳಿಗೆ ಸಂಬಂಧಿಸಿದಂತೆ ಯಾವುದೇ ವಾದ/ವಿವಾದ ಉದ್ಭವಿಸಿದಲ್ಲಿ
ಕರ್ನಾಟಕ ರಾಜ್ಯದ ಡಿಜಿ. ಮತ್ತು ಐಜಿಪಿ, ರವರು ನೀಡುವ ನಿರ್ಣಯವೇ ಅಂತಿಮವಾಗಿರುತ್ತದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುನಿರಾಬಾದನ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಡಿಜಿ. ಮತ್ತು ಐಜಿಪಿ, ರವರು ನೀಡುವ ನಿರ್ಣಯವೇ ಅಂತಿಮವಾಗಿರುತ್ತದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುನಿರಾಬಾದನ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.