ಮಳೆಯ ನಡುವೆಯೂ ಸಂಭ್ರಮದಿoದ ನಡೆದ ಗಂಡುಗಲಿ ಕುಮಾರರಾಮನ ಜಾತ್ರೆ 

Get real time updates directly on you device, subscribe now.

ಗಂಡುಗಲಿ ಕುಮಾರರಾಮ. ದೆಹಲಿ ಸುಲ್ತಾನನ ಸೈನ್ಯವನ್ನು ಸಮರ್ಥವಾಗಿ ಎದುರಿಸಿ, ನಾಡಿಗಾಗಿ ಹಾಗೂ ತಾಯಿಗೆ ಕೊಟ್ಟ ಮಾತಿನಂತೆ ಪರಸ್ತಿçÃಯರ ಮೇಲೆ ಕೈ ಮಾಡದೇ ಪ್ರಾಣವನ್ನೇ ಅರ್ಪಿಸಿದ ಕಡುಗಲಿ, ಪರನಾರಿ ಸಹೋದರ ಗಂಡುಗಲಿ ಕುಮಾರರಾಮ. ಕಾಲಚಕ್ರದಲ್ಲಿ ಉರುಳಿ ರಾಮ, ರಾಮನಾಥದೇವರಾಗಿ, ಕುಮ್ಮಟರಾಮ ಹೆಸರುಗಳಲ್ಲಿ ಕರ್ನಾಟಕದೆಲ್ಲೆಡೆ ಗುಡಿ ಸ್ಥಾಪಿತವಾದವು. ಗುಡಿಗಳಲ್ಲಿ ಗಂಡುಗಲಿ ಕುಮಾರರಾಮನಿಗೆ ಸಂಬAಧಿಸಿದ ಆಚರಣೆಗಳು ನಡೆಯುತ್ತಲೇ ಇರುತ್ತವೆ. ಪ್ರತಿವರ್ಷ ನಡೆಯುವಂತೆ ಕುಮ್ಮಟದುರ್ಗದ ಬೆಟ್ಟದಲ್ಲಿರುವ ಜಟ್ಟಂಗಿರಾಮನ ದೇವಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಾತ್ರೆ ಮಳೆಯ ನಡುವೆಯೂ ಸಡಗರ ಸಂಭ್ರಮದಿAದ ಜರುಗಿತು.
ಐತಿಹಾಸಿಕ ಜಾತ್ರೆಯ ಹಿನ್ನೆಲೆ
ಕುಮ್ಮಟದುರ್ಗದಲ್ಲಿರುವ ಜಟ್ಟಂಗಿ ರಾಮನ ದೇವಾಲಯದಲ್ಲಿ ಸಾಲಾಗಿ ಇಟ್ಟಿರುವ ಹನ್ನೆರಡು ಗುಂಡುಗಳಿವೆ. ಇವು ಕುಮಾರರಾಮನ ಮತ್ತು ಇತರರ ಶಿರಗಳೆಂದು ಹೇಳಲಾಗುತ್ತದೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಕುಮ್ಮಟದುರ್ಗಕ್ಕೆ ಹೊಂದಿಕೊAಡಿರುವ ಜಬ್ಬಲಗುಡ್ಡದಲ್ಲಿ ನಾಲ್ಕು, ಸಮೀಪದಲ್ಲಿರುವ ಇಂದರಗಿಯಲ್ಲಿ ಆರು ಹಾಗೂ ಮಲ್ಲಾಪುರದಲ್ಲಿ ಎರಡು, ಕುಮಾರರಾಮ ಮತ್ತು ಹೋಲ್ಕಿರಾಮನ ರುಂಡಗಳ ಮರದ ಪ್ರತಿಮೆಗಳಿವೆ. ಇಂದರಗಿಯಲ್ಲಿರುವ ಆರು ರುಂಡ ಶಿಲ್ಪಗಳನ್ನು ಕುಮಾರರಾಮ, ಹೋಲ್ಕಿರಾಮ, ಬೈಚಪ್ಪ, ಕಾಟಣ್ಣ, ಕಂಪಿಲರಾಯ, ಭಾವಸಂಗಮನವು ಎಂದು ಹೇಳಲಾಗುತ್ತದೆ. ಇಂದಿಗೂ ಪ್ರತಿವರ್ಷ ಹುಲಿಗೆಮ್ಮನ ಜಾತ್ರೆಗೆ ಒಂದುದಿನ ಮುಂಚೆ ಮಲ್ಲಾಪುರ, ಇಂದರಗಿ, ಜಬ್ಬಲಗುಡ್ಡದಲ್ಲಿನ ಮರದ ರುಂಡ ಶಿಲ್ಪಗಳು ಕುಮ್ಮಟದುರ್ಗದಲ್ಲಿರುವ ಜಟ್ಟಂಗಿರಾಮನ ದೇವಾಲಯ ಪ್ರವೇಶಿಸುತ್ತವೆ. ಒಂದು ರಾತ್ರಿ ಕುಮಾರರಾಮನ ಗೊಂದಲಿಗರ ಪದ, ಚೌಡ್ಕಿ ಪದ, ಜನಪದ ಹಾಡುತ್ತ ತಮ್ಮ ಆಚರಣೆಗಳನ್ನು ಮಾಡುತ್ತಾರೆ. ಮರುದಿನ ಅಲ್ಲಿಂದ ಪೂಜೆ ಮಾಡಿದ ಅಕ್ಕಿಪಡಿ ಬಂದ ಮೇಲೆಯೇ ಹುಲಿಗೆಮ್ಮನ ಜಾತ್ರೆಯ ಕಾರ್ಯಗಳು ಪ್ರಾರಂಭವಾಗುತ್ತವೆ. ಇದು ಅಂದಿನಿAದಲೂ ನಡೆದುಕೊಂಡು ಬಂದ ಪದ್ದತಿಗಳಲ್ಲೊಂದು. ಕುಮ್ಮಟದುರ್ಗದ ಜಟ್ಟಂಗಿರಾಮನ ದೇವಾಲಯದದಲ್ಲಿ ಕುಮಾರರಾಮನ ಜಾತ್ರೆ ದಿನದಂದು. ಮಕ್ಕಳ ಭಾಗ್ಯ ಕರುಣಿಸಲೆಂದು ಹರಕೆ ಕಟ್ಟುತ್ತಾರೆ. ಚಿಕ್ಕಮಕ್ಕಳ ಜವಳ ತೆಗೆಸುವುದು, ಬಾಸಿಂಗ ಬಿಡುವುದು ದೀಡ ನಮಸ್ಕಾರ ಹಾಕುವ ಪದ್ಧತಿ ಅಂದಿನಿAದ ಇಂದಿಗೂ ತಪ್ಪದೇ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಮೇ ೨೦-೨೦೨೫ ರಂದು ಇಂದರಗಿ ಮಲ್ಲಾಪುರ, ಜಬ್ಬಲಗುಡ್ಡದ ಎಲ್ಲ ಮರದ ಮುಖಗಳು ಕುಮ್ಮಟದುರ್ಗದವನ್ನೇರಿ ಜಾತ್ರೆ ಮಾಡಿ ಅಲ್ಲಿಂದ ಅಕ್ಕಿಪಡಿ ಹುಲಗೆಮ್ಮನಿಗೆ ತಲುಪಿತು. ಕುಮಾರರಾಮನ ಜಾತ್ರೆ ಆದ ಮರುದಿನವೇ ಹುಲಿಗೆಮ್ಮನ ಜಾತ್ರೆ ನಡೆಯುತ್ತದೆ ಎನ್ನುವಂತೆ ಇದಿನ ಹುಲಿಗೆಮ್ಮನ ಜಾತ್ರೆಯೂ ನಡೆಯುತ್ತಿದೆ. ಇಲ್ಲಿ ಜಾತ್ರೆಯ ದಿನದಂದು ನಡೆಯುವ ನೀರಗೂಳು ಅನ್ನು ನಡೆದವರೆಲ್ಲರೂ ಪಡೆದು ತಮ್ಮ ಕೃಷಿಭೂಮಿಯಲ್ಲಿ ಹಾಕಿದರೆ ಬೆಳೆ ಉತ್ತಮವಾಗಿ ಬರುವುದಲ್ಲದೆ, ದನ ಕರುಗಳಿಗೆ ಯಾವುದೇ ರೋಗ, ಖಾಯಿಲೆ ಬರುವುದಿಲ್ಲ ಎನ್ನುವುದು ಜನರ ನಂಬಿಕೆ.
ಕರ್ನಾಟಕದ ಹಲವಾರು ಕಡೆ ಕುಮಾರರಾಮನ ಜಾತ್ರೆ ಆಚರಣೆಗಳು
ಕುಮ್ಮಟದುರ್ಗವು ಪತನವಾದ ನಂತರ ಕರ್ನಾಟಕದ ಬೇರೆ ಬೇರೆ ಕಡೆ ಪಲಾಯನ ಮಾಡಿರಬಹುದು. ಕುಮಾರರಾಮನ ಜಾತ್ರೆ ಉತ್ಸವಗಳು ಹಲವುಕಡೆ ಇನ್ನು ಪ್ರಚಲಿತದಲ್ಲಿವೆ. ಬಹುಶ ಕುಮ್ಮಟದಿಂದ ಪಲಾಯನ ಮಾಡಿದ ಜನರು ತಮ್ಮ ಅರಸನಾದ ಕುಮಾರರಾಮನನ್ನು ದೈವಾಂಶ ಸಂಭೂತನೆAದು ನಂಬಿ, ಅವನ ಪ್ರತಿಮೆಗಳಿಗೆ ಸ್ಥಾಪಿಸಿ ಪೂಜಿಸುವುದರ ಮೂಲಕ ತಮ್ಮ ಗತವಲಸೆಯ ಕುರುಹನ್ನು ಉಳಿಸಿಕೊಂಡಿದ್ದಾರೆ.ಕುಮ್ಮಟದುರ್ಗವಷ್ಟೇ ಅಲ್ಲದೇ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿಯಲ್ಲಿ ಕುಮಾರರಾಮನ ಗುಡಿಯಿದೆ. ಇಲ್ಲಿಯೂ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾಳಗೊಂಡನಕೊಪ್ಪ ದಲ್ಲಿ ಗ್ರಾಮದಲ್ಲಿ ಒಂದAಕಣದ ಕುಮಾರರಾಮನ ದೇವಾಲಯವಿದೆ. ಬಳ್ಳಾರಿ ಜಿಲ್ಲೆಯ ದರೋಜಿ ಬಳಿಯ ರಾಂಪುರದಲ್ಲಿ ಚೆಂಡಿನಾಟ ಉತ್ಸವ ನಡೆಯುತ್ತದೆ. ಈ ಆಚರಣೆಗಳಲ್ಲಿ ಕುಮಾರರಾಮನ ಜೀವನದ ಮುಖ್ಯ ಘಟನೆಗಳನ್ನು ಪುನರಭಿನಯಿಸುವ ರೀತಿ ಎದ್ದು ಕಾಣುತ್ತದೆ. ಸೊಂಡೊರಿನಿAದ ಮೊಳಕಾಲ್ಮೂರಿನವರೆಗೂ ಬಹುತೇಕ ಗ್ರಾಮಗಳಲ್ಲಿ ಕುಮಾರರಾಮನ ದೇವಾಲಯಗಳಿವೆ. ಅದರಲ್ಲಿ ಪ್ರಮುಖವಾಗಿ ದೇವಗಿರಿ, ಮೆಟ್ರಿಕಿ ಹಳ್ಳಿಯಲ್ಲಿ ರಾಮದೇವರ ಜಾತ್ರೆ ಬೇಸಿಗೆಯಲ್ಲಿ ನಡೆಯುತ್ತದೆ. ಕುಮಾರರಾಮನ ತೆಲೆಹೊತ್ತು ಕುಣಿಯುವುದು ಈ ಊರಿನ ಜನ ಕಾಲಾಟ ಎನ್ನುತ್ತಾರೆ. ಸೊರಬ ತಾಲ್ಲೂಕಿನ ಪ್ರದೇಶದಲ್ಲಿ ದೊಡ್ಡಬಾಗಿಲು ದೇವರ ಹಬ್ಬ ನಡೆಯುತ್ತಿದ್ದು ಅಲ್ಲಿ ಕುಮಾರರಾಮ, ಕಂಪಿಲರಾಯ ಜೊತೆಗಾರರ ತೆಲೆಗಳನ್ನು ಮೆರವಣಿಗೆ ಮಾಡಿ ಪೂಜಿಸಲಾಗುತ್ತದೆ. ತೀರ್ಥಹಳ್ಳಿಯ ತಾಲ್ಲೂಕಿನ ಹೊಸನಗರ ಪರಿಸರದಲ್ಲಿ ದೊಂಬರ ಹಬ್ಬ ಆಚರಣೆಯಲ್ಲಿ ಕುಮಾರರಾಮನ ತೆಲೆಯನ್ನು ಆರಾಧಿಸುವ ಪದ್ಧತಿಯಿದೆ. ಹೊನ್ನಾವರ ತಾಲ್ಲೂಕಿನ ಅಣಿಲಗೋಡು ಗ್ರಾಮದಲ್ಲಿ ಶೂಲದ ಹಬ್ಬ ಕುಮಾರರಾಮನ ಜಾತ್ರೆ ನಡೆಯುತ್ತದೆ. ಜಾತ್ರೆಯ ದಿನ ಶೂಲದ ಕಂಬಗಳನ್ನು ಏರಿ ಜನ ವಿಜಯೋತ್ಸವ ಆಚರಿಸುತ್ತಾರೆ. ಕುಮಾರರಾಮನ ಹೆಸರಿನಲ್ಲಿ ಹರಕೆಹೊತ್ತು ಸಂತಾನಭಾಗ್ಯ ಇಷ್ಟಾರ್ಥ ಸಿದ್ಧಿ ಕೋರುವರು. ಇವುಗಳಲ್ಲದೆ ಶಂಕರಿಕೊಪ್ಪ ಸೊರಬ ತಾಲೂಕು, ಬೇಡಕಣಿ ಸಿದ್ಧಾಪೂರ ತಾಲೂಕು , ಮೂಡೂರು, ಮಲ್ಲಂದ, ಶಿರಕೋಡ ಹಾನಗಲ್ ತಾಲೂಕು ಹಾಗೂ ,ಮೂಡ್ಲೂರು ಹಿರೇಕೆರೂರ ತಾಲೂಕಿನಲ್ಲಿ ದೇವಾಲಯಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿನ ಅಗಳಕುಪ್ಪೆಯಲ್ಲಿರುವ ಕುಮ್ಮಟರಾಮ ದೇವಸ್ಥಾನದಲ್ಲಿ ಪ್ರತಿವರ್ಷ ಸಂಕ್ರಮಣದAದು ಜಾತ್ರೆ ನಡೆಯುತ್ತದೆ.
ಕೊಪ್ಪಳ ಜಿಲ್ಲೆಯ ಕುಮ್ಮಟದುರ್ಗ ,ಬಂಡೆಕುಮ್ಮಟ,ಹಳೆ ಕುಮ್ಮಟ, ಹೇಮಗುಡ್ಡ, ಬಳ್ಳಾರಿ ಜಿಲ್ಲೆಯ ಸಂಡೂರು, ದರೋಜಿ, ಚಿತ್ರದುರ್ಗ ಜಿಲ್ಲೆಯ ಜಟ್ಟಂಗಿ ರಾಮೇಶ್ವರ ದೇವಾಲಯ ಮತ್ತಿತರ ಸಂಬAಧಿತ ಆಚರಣೆಯ ಸ್ಥಳಗಳನ್ನು ಸೇರಿಸಿಕೊಂಡು ಕುಮಾರರಾಮ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚಿಸುವ ಅಗತ್ಯವಿದೆ. ಐತಿಹಾಸಿಕ, ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ವರೆಗೂ ಆ ಕೆಲಸ ಆಗದಿರುವುದು ವಿಷಾದನೀಯ. ಈ ಭಾಗದ ಜನಪ್ರತಿನಿಧಿಗಳು, ಸಂಶೋಧಕರು ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ ಕುಮಾರರಾಮ ಪ್ರಾಧಿಕಾರ ರಚಿನೆಯಾಗಬೇಕಿದೆ.

Get real time updates directly on you device, subscribe now.

Comments are closed.

error: Content is protected !!