ಉತ್ತಮ ಮೌಲ್ಯಗಳಿಗೆ ಬೆಲೆ ಕೊಡಬೇಕು- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

Get real time updates directly on you device, subscribe now.

– ಉತ್ತಮ ಮೌಲ್ಯಗಳಿಗೆ ಬೆಲೆ ಕೊಡುವ ಮೂಲಕ ವಿಚಿದ್ರಕಾರಿ ಮನಸ್ಥಿತಿಯಿಂದ ನಾವು ದೂರ ಇರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನವನ್ನು ಜಿಲ್ಲಾ ‌ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ‌ಇಲಾಖೆಯ‌ ಅಧಿಕಾರಿ ‌ಮತ್ತು ಸಿಬ್ಬಂದಿಗಳಿಗೆ ಬೊಧಿಸಿ ಮಾತನಾಡಿದರು.

ನಮ್ಮ ‌ಎದುರಿನಲ್ಲಿ ನಡೆಯುವ ಯಾವುದೇ ಅಹಿತಕರ‌ ಘಟನೆಗಳನ್ನು ನಾವು ನೋಡಿಕೊಂಡು ಸುಮ್ಮನೆ ನಿಲ್ಲುವುದು ಅಪರಾಧವಾದಂತೆ. ಅವುಗಳನ್ನು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಗಾಂಧೀಜಿಯವರು ಹುಟ್ಟಿದ ನಾಡು ನಮ್ಮದು ನಾವು ಶಾಂತಿಗೆ ಮೊದಲ ಆಧ್ಯತೆ ನೀಡುತ್ತೆವೆ ಎಂದು ಹೇಳಿದರು.

ಪ್ರತಿವರ್ಷ ಮೇ. 21 ರಂದು ಭಯೋತ್ಪಾದನಾ ‌ವಿರೋಧಿ ದಿನವನ್ನು ಆಚರಣೆ ಉದ್ದೇಶ ನಮ್ಮ ‌ಸಹಭಾಂದವರಲ್ಲಿ ಶಾಂತಿ. ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು ಮತ್ತು ‌ಮಾನವ ಜೀವಕ್ಕೆ ಹಾಗೂ ‌ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ದ ಹೋರಾಡಲು ನಾವೆಲ್ಲರೂ ‌ಪಣ ತೊಡುವದಾಗಿದೆ ಎಂದರು.

ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲರ ಶಕ್ತಿ ಸಾಮರ್ಥ್ಯದಿಂದ ಎದುರಿಸಬೇಕಿದೆ. ನಮ್ಮ ‌ಭಾರತವು ವೈವಿಧ್ಯಮಯದಿಂದ ಕೂಡಿದ ನಾಡಾಗಿದ್ದು ನಾವೆಲ್ಲರೂ ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆಯಿಂದ ಬಾಳಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಡಳಿತ ಭವನದ ‌ಜಿಲ್ಲಾ ಮಟ್ಟದ ‌ವಿವಿಧ ಇಲಾಖೆಯ ಅಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!