ಜಾನಪದ ಒಂದು ಪಾರಂಪರಿಕ ಜ್ಞಾನ-ಡಾ ಜೀವನಸಾಬ್ ಬಿನ್ನಾಳ

ಜನರ ಪಾರಂಪರಿಕ ಜ್ಞಾನ,ತಿಳುವಳಿಕೆ ,ಸಂಸ್ಕೃತಿ , ಪಳೆಯುಳಿಕೆಯ ಒಟ್ಟು ಹೂರಣವೇ ಜಾನಪದವಾಗಿದ್ದು ಜನರೇ ತಲಮಾರಿನಿಂದ ತಲಮಾರಿಗೆ ಹರಿದು ಹಂಚಿಕೊಂಡ ಬಂದ ಶ್ರೀಮಂತ ಸಂಸ್ಕೃತಿಯಾಗಿದೆ, ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಒಡಗೂಡಿ ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆಯ ಸಮಾರಂಭದಲ್ಲಿ ಜಾನಪದ ಸಾಹಿತ್ಯ ಮತ್ತು ಬದುಕು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಡಾ. ಜೀವನ್ ಸಾಬ್ ಬಿನ್ನಾಳ ಮಾತನಾಡಿದರು
ಜನಪದರು ಅಕ್ಷರ ಕಲಿಯದಿದ್ದರೂ ತಮ್ಮ ಆಂತರ್ಯದ ವಿವೇಚನೆ ವಿವೇಕಗಳ ಮೂಲಕ ಸಮಷ್ಟಿ ಪ್ರಜ್ಞೆಯ ಭಾಗವಾಗಿ ಜಾನಪದ ಸಂಸ್ಕೃತಿಯನ್ನು ಕಟ್ಟಲ್ಪಟ್ಟರು, ಕಾಯಕ ಶ್ರಮ ಸಂಸ್ಕೃತಿಯ ಸಂದರ್ಭದಲ್ಲಿ ಹುಟ್ಟಿಕೊಂಡ ಈ ಸಂಸ್ಕೃತಿಯು ಆಧುನಿಕತೆಯ ಕೊಡತಕ್ಕೆ ಸಿಕ್ಕಿ ನಲಗುತ್ತಿದೆ, ಕೃಷಿ ಸಂಬಂಧಿತ ಆಚರಣೆಗಳು ಹಬ್ಬ ಹರಿದಿನಗಳಲ್ಲಿ ಕಡಿಮೆಯಾಗುತ್ತಿರುವ ವೈವಿಧ್ಯಮಯ ಆಚರಣೆಗಳು ಜಾನಪದವನ್ನ ಮಂಕಾಗಿಸಿದೆ,
1946 ಆಗಸ್ಟ್ 22ರಂದು ಬ್ರಿಟಿಷ್ ವಿದ್ವಾಂಸನಾದ ವಿಲಿಯಂ ತಾನ್ಸನ್ನು ಪತ್ರಿಕೆಗೆ ಬರದ ಲೇಖನದಲ್ಲಿ ಫೋಕ್ಲೋರ್ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದನು, ಫೋಕ್ ಎಂದರೆ ಜನ, ಲೋರ್ ಎಂದರೆ ಜನರ ಅರಿವು ತಿಳುವಳಿಕೆ ಜ್ಞಾನ ಎಂಬ ಅರ್ಥ ನೀಡುತ್ತದೆ, ಇದರ ಸವಿನೆನಪಿಗಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಭಾರತದ ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಜಾನಪದ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಾರೆ.
ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಉಡುಗೆ ತೊಡೆಗೆ ಆಚಾರ ವಿಚಾರಗಳಲ್ಲಿರುವ ಉತ್ತಮ ಅಂಶಗಳನ್ನು ಯುವಜನರು ಅರಿಯಬೇಕಿದೆ, ಆ ಮೂಲಕ ಜಾನಪದ ಪರಂಪರೆಯು ನವ ಪೀಳಿಗೆಯನ ತಲುಪುವುದರ ಮೂಲಕ ಗಟ್ಟಿಯಾಗಿ ಉಳಿಯುವ ಸಂದರ್ಭಗಳು ಸೃಷ್ಟಿಯಾಗುವುದು ಅತ್ಯಗತ್ಯ ಎಂದರು, ಜನಪದರು ತಮ್ಮ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವುದರ ಜೊತೆಗೆ ಸಾಮರಸ್ಯ ಭಾವೈಕ್ಯತೆ ಸೋದರತ್ವವನ್ನು ಗಟ್ಟಿಗೊಳ್ಳುವ ಕಾರ್ಯ ಮಾಡಿದೆ ಎಂದರು ಸಮಾರಂಭವನ್ನು ಉದ್ಘಾಟಿಸಿದ ಶ್ರೀ ಶರಣಪ್ಪ ವಡಿಗೇರಿಯವರು ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೀರೇಶ ಬಂಗಾರಶೆಟ್ಟರು ಮಾತನಾಡಿ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ಕನ್ನಡ ಸಮೃದ್ಧವಾಗಿ ಬೆಳೆಯಬಲ್ಲದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ ಎಸ್ ವಿ ದಾಣಿ ಅವರು ಮಾತನಾಡಿ ಜನಪದ ಜನರ ಬದುಕಿನೊಂದಿಗೆ ಸಾಗಿದ ಸಾಹಿತ್ಯವಾಗಿದೆ ಜನರ ಬದುಕು ಮತ್ತು ಜಾನಪದವನ್ನು ಪ್ರತ್ಯೇಕಿಸಲು ಅಸಾಧ್ಯ ಜನರು ಹುಟ್ಟಿದ ಮೇಲೆ ಅವರ ಹುಟ್ಟಿನೊಂದಿಗೆ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿಯು ಬೆಳೆದು ಬಂದಿದೆ ಅದನ್ನು ಪೋಷಿಸುವ ಕಾರ್ಯ ನಿರಂತರವಾಗಿ ಸಾಗಬೇಕು ಎಂದರು.
ಸಮಾರಂಭದಲ್ಲಿ ಜನಪದ ಕಲಾವಿದರಾದ ಶಿವಪ್ಪ ಡೊಳ್ಳಿನ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತರಾದ ವಾಲ್ಮೀಕಿಯಪ್ಪ ಯಕ್ಕರನಾಳ ಉಪಸ್ಥಿತರಿದ್ದರು ಕನ್ನಡ ಉಪನ್ಯಾಸಕರಾದ ಸೋಮಲಿಂಗಪ್ಪ ನಿರ್ವಹಿಸಿ ವಂದಿಸಿದರು
Comments are closed.