ಕೋಮಲಾಪೂರ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಪಾಟೀಲ್ ಅಮಾನತ್ತು
ದ್ವಜಾರೋಹಣ ಮಾಡುವ ಸಂದರ್ಬದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರ ಇಡದೇ ಅವಮಾನ ಮಾಡಿದ ಕೋಮಲಾಪೂರ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಪಾಟೀಲ್ ರವರನ್ನು ಡಿಡಿಪಿಐ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ..
ಈ ಕುರಿತು ಆದೇಶ ಹೊರಡಿಸಿರುವ ಡಿಡಿಪಿಐ
ಜಗದೀಶ ಪಾಟೀಲ ಮುಖ್ಯಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಮಲಾಪುರ ತಾ: ಕುಕನೂರು ಜಿಲ್ಲಾ ಕೊಪ್ಪಳ ನಿಮ್ಮ ಮೇಲಿನ ಆರೋಪವು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಶಿಸ್ತು ಪ್ರಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಶ್ರೀಶೈಲ ಎಸ್ ಬಿರಾದಾರ ಕರ್ನಾಟಕ ನಾಗರೀಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ & ಮೇಲನವಿ) 1957ರ ನಿಯಮ 10(1) ಅಡಿಯಲ್ಲಿ ಇಲಾಖಾ ವಿಚಾರಣೆ: ಕಾಯ್ದಿರಿಸಿ, ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆಮಾನತ್ತುಗೊಳಿಸಿ ಆದೇಶಿಸಿದೆ. ಸದರಿ ನೌಕರರು ಕರ್ನಾಟಕ ಸೇವಾ ನಿಯಮ 98 ರ ಪ್ರಕಾರ ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ. ನೀವು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ. ಹಾಗೂ ಸದರಿ ಆದೇಶವನ್ನು ಆವರ ಮೂಲ ಸೇವಾ ಪುಸ್ತಕದಲ್ಲಿ ನಮೂದಿಸಿ ಅವರ ದೃಢೀಕೃತ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ ಎಂದು ಶೈಲ ಎಸ್ ಬಿರಾದಾರ) ಉಪನಿರ್ದೇಶಕರು (ಆಡಳಿತ) ಹಾಗೂ ಶಿಸ್ತು ಪಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ, ಆದೇಶ ಹೊರಡಿಸಿದ್ದಾರೆ
Comments are closed.