ಬಸ್ ನಿಲ್ದಾಣದ ಮುಂದುಗಡೆ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ವೇತುವೆ ನಿರ್ಮಾಣ -ಅಮ್ಜದ್ ಪಟೇಲ್

Get real time updates directly on you device, subscribe now.

ಕೊಪ್ಪಳ ನಗರಸಭೆಯ 2025-2026 ನೇ ಸಾಲಿನ ಆಯ-ವ್ಯಯ ಮುಂಗಡ ಪತ್ರ

ನಗರಸಭಾ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದ್ಧೇನು? Complete Speach

 

ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ   ರಾಜಶೇಖರ ಹಿಟ್ನಾಳರವರೇ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ   ರಾಘವೇಂದ್ರ ಹಿಟ್ನಾಳರವರೇ, ವಿಧಾನ ಪರಿಷತ್ ಶಾಸಕರಾದ ಶ್ರೀಮತಿ ಹೇಮಲತಾ ನಾಯಕ ರವರೇ, ಕೊಪ್ಪಳ ನಗರಸಭೆಯ ಉಪಾಧ್ಯಕ್ಷರೇ, ಹಾಗೂ ಎಲ್ಲ ಗೌರವಾನ್ವಿತ ಸದಸ್ಯರುಗಳೇ,

ಕೊಪ್ಪಳ ನಗರಸಭೆಯ 2025-2026 ನೇ ಸಾಲಿನ ಆಯ-ವ್ಯಯ ಮುಂಗಡ ಪತ್ರ ಚರ್ಚೆಗಾಗಿ ತಮ್ಮೆಲ್ಲರನ್ನು ಆಹ್ವಾನಿಸಿದ್ದು, ತಾವು ಸಭೆಗೆ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಕ್ಕೆ ತಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಸಾಂಪ್ರದಾಯಕವಾಗಿ ಪ್ರತಿ ವರ್ಷದ ಮುಂಗಡ ಪತ್ರವನ್ನು ಜನೇವರಿ ತಿಂಗಳಲ್ಲಿಯೇ ಅಥವಾ ಆರ್ಥಿಕ ವರ್ಷದ ಅಂತ್ಯದ ಒಳಗೆ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಲೆಕ್ಕಪತ್ರ ಶಾಖೆಯ ಖಾಯಂ ಸಿಬ್ಬಂದಿಯ ಕೊರತೆ, ಮತ್ತು ಇತ್ತೀಚೆಗೆ ನೂತನವಾಗಿ ಬಂದಂತಹ ಸಿಬ್ಬಂದಿಗೆ ಈ ಬಗ್ಗೆ ಸರಿಯಾದ ತರಬೇತಿ ಇಲ್ಲದ ಕಾರಣ ಮುಂಗಡ ಪತ್ರ ಸಿದ್ಧತೆ ಮಾಡಲು ವಿಳಂಬವಾಗಿರುವುದಕ್ಕೆ ವಿಷಾಧ ವ್ಯಕ್ತಪಡಿಸಲಾಗಿದೆ.

ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ ನಿಯಮ (287) ರ ಪ್ರಕಾರ ಹಾಗೂ ಕರ್ನಾಟಕ ಮುನ್ಸಿಫಲ್ ಬಜೆಟ್ ರೂಲ್ಸ್ 2006 ರ ಅನುಗುಣವಾಗಿ ಪ್ರತಿ ಆರ್ಥಿಕ ವರ್ಷದ ಆಯ-ವ್ಯಯ ಮುಂಗಡ ಪತ್ರವನ್ನು ಸಿದ್ದಪಡಿಸಿ ನಗರಸಭೆಯ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಸ್ವೀಕೃತವಾಗುವ ಆದಾಯದ ಮೂಲಗಳು, ಮತ್ತು ವೆಚ್ಚವಾಗಬಹುದಾದ ನಿರೀಕ್ಷಿತ ವ್ಯಯಗಳನ್ನು ಸೇರ್ಪಡೆ ಮಾಡಬೇಕಾಗುತ್ತದೆ. ಈ ಅಂದಾಜನ್ನು ಹಿಂದಿನ ಆರ್ಥಿಕ ವರ್ಷದ ಡಿಸೆಂಬರ್ ವರೆಗೆ ಸ್ವೀಕೃತವಾದ ಆದಾಯ ಮತ್ತು ವೆಚ್ಚಗಳ ಆಧಾರದ ಮೇಲೆ ಸಿದ್ದಪಡಿಸಲಾಗುತ್ತದೆ.

ಕೊಪ್ಪಳ ನಗರ ಪ್ರಾಕೃತಿಕವಾಗಿ ಅತ್ಯಂತ ಐತಿಹಾಸಿಕ ಹಿನ್ನೆಲೆ ಹೊಂದಿದ ಪ್ರದೇಶವಾಗಿರುವುದು ತಮಗೆಲ್ಲ ತಿಳಿದ ವಿಚಾರ. ಇಲ್ಲಿಯ ನೈಸರ್ಗಿಕ ಸಂಪತ್ತು, ಮತ್ತು ಗವಿಮಠ, ಜೈನ ಬಸದಿಗಳು, ಐತಿಹಾಸಿಕ ಕುರುಹುಗಳನ್ನು ಸಾರುತ್ತದೆ. 2011 ರ ಜನಗಣತಿಯ ನಂತರ ಮತ್ತೆ ಜನಗಣತಿ ಆಗಿರುವುದಿಲ್ಲ. ಆದರೆ, ಜನಸಾಂದ್ರತೆ ಮತ್ತು ನಗರಕ್ಕೆ ವಲಸೆ ಬರುವ ಸಾರ್ವಜನಿಕರ ಕಾರಣಗಳಿಂದ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರದ ಅನೇಕ ಯೋಜನೆಗಳಲ್ಲಿ ಮತ್ತು ನಗರಸಭೆಯ ನಿಧಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದರೂ ಸಾರ್ವಜನಿಕರ ನಿರೀಕ್ಷೆ, ಅಭಿವೃದ್ಧಿ ಕೆಲಸಗಳ ಬಗ್ಗೆ ಇದ್ದೇ ಇದೆ.

ನಗರದಲ್ಲಿ ಮುಖ್ಯ ರಸ್ತೆಯ ವಿಭಜಕದ ಮೇಲೆ ಇರುವ ವಿದ್ಯುತ್ ಕಂಬಗಳಿಗೆ ಕೊಪ್ಪಳ ಜಾತ್ರೆಯಿಂದ ಅಲಂಕಾರ ಸಾರ್ವಜನಿಕರ ಮೆಚ್ಚುಗೆ ಪಡೆದಿರುವುದು ತಮಗೆಲ್ಲ ತಿಳಿದ ವಿಷಯ. ಅದೇ ರೀತಿಯಾಗಿ ಕಡು ಬಿಸಿಲಿನಲ್ಲಿ ವಾಹನಗಳ ಸಂಚಾರಕರಿಗೆ ಸಿಗ್ನಲ್ ಪಾಯಿಂಟ್‌ಗಳಲ್ಲಿ ತೊಂದರೆಯಾಗುವುದನ್ನು ಗಮನಿಸಿ ನೆರಳನ್ನು ಕಲ್ಪಿಸುವ ಕ್ರಮವಹಿಸಲಾಗಿದೆ. ಇದು ಕೂಡ ವಾಹನ ಸಂಚಾರಿಗಳ ಸಂತಸಕ್ಕೆ ಕಾರಣವಾಗಿದೆ.

 

1) ನಗರಸಭೆ 2025-2026 ನೇ ಸಾಲಿನಲ್ಲಿ ಗವಿಮಠದ ಹತ್ತಿರ ಹೂವಿನಾಳ ಕ್ರಾಸ್‌ದಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಅಲ್ಲಿನ ವೃತ್ತ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

2) ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹುಲಿ ಕೆರೆಯನ್ನು ಅಭಿವೃದ್ಧಿ ಮಾಡಿ ಪ್ರವಾಸಿಗರ ಆಕರ್ಷಣಾ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಿದೆ.

3) ಶೇ 24.10% ರ ಕಾರ್ಯಕ್ರಮದಲ್ಲಿ ಪ.ಜಾತಿ ಮತ್ತು ಪ.ಪಂಗಡದ ಜನರಿಗೆ ವೈಯಕ್ತಿಕ ಘಟಕದಲ್ಲಿ ಅನಾರೋಗ್ಯ ಪೀಡಿತರಿಗೆ ಆರೋಗ್ಯ ಭಾಗ್ಯ ಕಾರ್ಯಕ್ರಮದ ಮೂಲು ವೈದ್ಯಕೀಯ ವೆಚ್ಚ ಭರಿಸಲು ಪ್ರಾತಿನಿಧ್ಯ ನೀಡುವುದು. ಹಾಗೆಯೇ ಶೇ. 7.25% ರ ಕಾರ್ಯಕ್ರಮದಲ್ಲಿ ಇತರೇ ವರ್ಗದ ಬಡ ಜನರಿಗೆ ಈ ಸೌಲಭ್ಯಗಳನ್ನು ವಿಸ್ತರಣೆ ಮಾಡುವುದು.

4) ನಗರದಲ್ಲಿ ಆಗಾಗ ಕಾಣಿಸುವ ಆಕಸ್ಮಿಕ ಅಗ್ನಿ ಅವಘಡಗಳಿಗೆ ತಕ್ಷಣವೇ ಸ್ಪಂದಿಸಲು ನಗರಸಭೆಯಿಂದ ತಾತ್ಕಾಲಿಕ ಪರಿಹಾರ ಭಾಗ್ಯ ಕಲ್ಪಿಸುವುದು.

5) ನಗರದಲ್ಲಿ ಅನೇಕ ಜಲ ಸಂಪನ್ಮೂಲಗಳಾದ ಐತಿಹಾಸಿಕ ಭಾವಿಗಳು ಮುಚ್ಚಿಹೋಗಿದ್ದು, ಇತ್ತೀಚೆಗೆ ಚಾಂದ್‌ಕುಂಟಾ ಭಾವಿಯನ್ನು ಸ್ವಚ್ಛ ಮಾಡಿದಾಗ ಅಲ್ಲಿನ ಐತಿಹಾಸಿಕ ಕುರುಹುಗಳು ಮೆರಗು ತಂದಿದೆ. ಅದೇ ರೀತಿಯಲ್ಲಿ ಅನೇಕ ಕೆರೆಗಳು ಮುಚ್ಚಿ ಹೋಗಿದ್ದು, ಅವುಗಳನ್ನು ಪುನಶ್ಚತನಗೊಳಿಸಲು ಕ್ರಮವಹಿಸುವುದು.

6) ಈಶ್ವರ ಪಾರ್ಕ, ಪಾಂಡುರಂಗ ದೇವಸ್ಥಾನದ ಹಿಂದುಗಡೆ ಇರುವ ಉದ್ಯಾನವನ, ಪದಕಿ ಲೇಔಟ್, ಹಾಗೂ ಅಗಡಿ ಅಂದಣ್ಣನವರ ಮನೆಯ ಹಿಂದುಗಡೆ ಉದ್ಯಾನವನಕ್ಕಾಗಿ ಮೀಸಲಿರಿಸಿದ ಬೃಹತ್ ಉದ್ಯಾನವನ ಜಾಗೆಯನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಮವಹಿಸುವುದು.

7) ಬಸ್ ನಿಲ್ದಾಣದ ಮುಂದುಗಡೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ್ದುಪಾದಾಚಾರಿಗಳ , ರಸ್ತೆಯನ್ನು  ಪಾದಾಚಾರಿಗಳಿಗೆ ಹಿತದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ವೇತುವೆ ನಿರ್ಮಿಸಲು ಕ್ರಮವಹಿಸುವುದು.

8) ಹಂದಿ ಕೆರೆ, ಮೋತಿ ಕೆರೆ ಕೆರೆಗಳನ್ನು ಅಮೃತ 2 ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯದಿಂದ ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡುವ ಮೂಲಕ ಮನರಂಜನಾ

 

ಕೇಂದ್ರವನ್ನಾಗಿ ಪರಿವರ್ತಿಸುವುದು. ಹಾಗೆಯೇ ಅವುಗಳನ್ನು ಪುನಶ್ಚತನಗೊಳಿಸುವುದರಿಂದ ಅಂತರ್ಜಲ ಹೆಚ್ಚಳಕ್ಕೆ ಕ್ರಮ ವಹಿಸುವುದು.

9) ಜಿಲ್ಲಾ ಕೇಂದ್ರ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಅದರ ವಿಸ್ತರಣೆ ಅಗತ್ಯ ಎಂದು ಕಂಡು ಬಂದಿದೆ. ಈಗಾಗಲೇ ಭಾಗ್ಯನಗರ ಶೂನ್ಯ ಅಂತರದಲ್ಲಿದ್ದು, ಅನೇಕ ಬಡಾವಣೆಗಳಲ್ಲಿ ನಗರಸಭೆ ಸೇವೆಯನ್ನು ನೀಡುತ್ತಿದ್ದರೂ ಆ ಆಸ್ತಿಗಳು ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಹೋಗಿವೆ. | ಇದಕ್ಕೆ ಹಿಂದಿನವರ ನಿರ್ಲಕ್ಷ ಸಹ ಕಾರಣವಾಗಿರಬಹುದು. (ಓವರ್‌ಲ್ಯಾಂಪಿಂಗ್ ಆಗಿದೆ) ಜಿಲ್ಲಾಧಿಕಾರಿಗಳ ಕಛೇರಿ, ಮೆಡಿಕಲ್ ಕಾಲೇಜ್, ಜಿಲ್ಲಾ ಆಸ್ಪತ್ರೆ, ಹೀಗೆ ಅನೇಕ ಸರ್ಕಾರದ ಕಛೇರಿಗಳು ಯಾವ ವ್ಯಾಪ್ತಿಗೆ ಎಂಬ ಗೊಂದಲವಿದೆ. ಇದಲ್ಲದೇ ಅನೇಕ ಪಕ್ಕದ ಗ್ರಾಮಗಳು ಉದಾಹರಣೆಗೆ ಕಿಡದಾಳ, ಬಸಾಪೂರ, ಚಿಲವಾಡಗಿ, ಟಣಕನಕಲ್, ಓಜಿನಹಳ್ಳಿ, ದದೇಗಲ್‌, ಮಂಗಳಾಪೂರ, ಗುನ್ನಳ್ಳಿ, ಹೊರತಟ್ನಾಳ, ಬಹದ್ದೂರಬಂಡಿ, ಹೊಸಳ್ಳಿ, ಹೂವಿನಾಳ, ಚುಕ್ಕನಕಲ್, ಹೀಗೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಾಂತರ ಪ್ರದೇಶಗಳನ್ನು ಸೇರ್ಪಡೆ ಮಾಡಿ, ನಗರಸಭೆಯ ವ್ಯಾಪ್ತಿಯ ವಿಸ್ತರಣೆ ಮಾಡುವುದರ ಮೂಲಕ ಗ್ರೇಡ್-1 ನಗರಸಭೆಗೆ ನಿಯಮಾನುಸಾರ ಪ್ರಸ್ತಾವನೆ ಕಳುಹಿಸಲು ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸುವುದು.

ನಗರಸಭೆಯ ಸಂಪನ್ಮೂಲಗಳ ಆಧಾರದ ಮೇಲೆ ಅದರ ವೆಚ್ಚವನ್ನು ನಿರೀಕ್ಷಿಸಬೇಕಾಗಿದ್ದು, 2025-2026 ನೇ ಸಾಲಿಗೆ ಈ ಕೆಳಗಿನಂತೆ ಆದಾಯವನ್ನು ನಿರೀಕ್ಷಿಸಲಾಗಿದೆ.

1

2

ರಾಜಸ್ವ (ರೆವಿನ್ಯೂ ಸ್ವೀಕೃತಿಗಳಿಂದ)

2. 36,46,06,000-00

ಬಂಡವಾಳ ಖಾತೆಯಿಂದ ಇತರೇ ಮೂಲಗಳಿಂದ

. 7,65,00,000-00

ಅಸಾಧಾರಣ ಸ್ವೀಕೃತಿಗಳು

. 6,77,55,278-00

4

ಒಟ್ಟು ಸ್ವೀಕೃತಿಗಳು

. 50,88,61,278-00

ಸರ್ಕಾರ ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಅನಧೀಕೃತ ಬಡಾವಣೆಗಳಲ್ಲಿರುವ ಆಸ್ತಿಗಳಿಗೆ ಬಿ ಖಾತೆ ನೀಡಲು ತಿಳಿಸಿದ್ದು, ಈಗಾಗಲೇ ಈ ಕುರಿತು ಸಾರ್ವಜನಿಕರಿಗೆ ಸಾಕಷ್ಟು ಪ್ರಚಾರ ಮಾಡಲಾಗಿದೆ. ಮತ್ತು ನಗರದ ವಾರ್ಡ ಪ್ರಾದೇಶಿಕವಾರು ನಮೂನೆ-3 ನ್ನು ವಿತರಣೆ ಮಾಡುವ ಬಗ್ಗೆ ಶಿಭಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಂದಾಯ ಮೂಲದಿಂದ ಹೆಚ್ಚು ಆದಾಯವನ್ನು ನಿರೀಕ್ಷಿಸಲಾಗಿದೆ. ಈ ದಿಸೆಯಲ್ಲಿ ಎಲ್ಲಾ ಸಿಬ್ಬಂದಿಗಳ ಸಭೆಯನ್ನು ಕರೆದು ಸಿದ್ಧತೆ ಮಾಡಲಾಗಿದೆ. ಆದಾಯ ಮೂಲದ ಆಧಾರದ ಮೇಲೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಚಿಂತನೆಯನ್ನು ಮಾಡಲಾಗಿದೆ. ಜೊತೆಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಲಾಗಿದೆ. ಒಟ್ಟಾರೆ ನಗರಸಭೆಗೆ ಉಳಿತಾಯವಾಗುವಂತಹ ಒಂದು ಪ್ರಗತಿಪರ ಮತ್ತು ಸಾರ್ವಜನಿಕರಿಗೆ ಯಾವುದೇ ಹೆಚ್ಚಿನ ಹೊರೆ ಇಲ್ಲದ ಒಂದು ಉತ್ತಮ ಮುಂಗಡ ಪತ್ರವನ್ನು ಸಿದ್ಧಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಗೌರವಾನ್ವಿತ ಎಲ್ಲಾ ಸದಸ್ಯರು ಸದರಿ ಮುಂಗಡ ಪತ್ರಕ್ಕೆ ಅನುಮೋದನೆ ನೀಡುವಂತೆ ನಗರಸಭೆಯ ಅಧ್ಯಕ್ಷನಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಮುಂಗಡ ಪತ್ರದ ದಾರಿಯಲ್ಲಿ ನಗರದ ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯತ್ತ ಸಾಗಲಿ ಎಂದು ತಮ್ಮೆಲ್ಲರ ಪರವಾಗಿ ಆಶಿಸುತ್ತೇನೆ.

Get real time updates directly on you device, subscribe now.

Comments are closed.

error: Content is protected !!