ವಕ್ಪ್ ತಿದ್ದುಪಡಿ ಕಾಯಿದೆ ವಿರೋಧಿಸಿ ಕೊಪ್ಪಳದಲ್ಲಿ ಮೇ.೩ ರಂದು ಬೃಹತ್ ಪ್ರತಿಭಟನೆ


ಕೊಪ್ಪಳ, ಮೇ. ೦೧: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಈ ಕಾಯ್ದೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿ ವತಿಯಿಂದ ಕೊಪ್ಪಳ ನಗರದಲ್ಲಿ ಮೇ. ೩ ರಂದು ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮ ಗುರು ಹಾಗೂ ಯುಸೂಪಿ ಯ ಮಸೀದಿಯ ಖತೀಬ್ ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ವ ತಸ್ಕಿನಿ ಹೇಳಿದರು,
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ ಮೂಲಭೂತ ಅಂಶಗಳ ವಿರುದ್ಧವಾಗಿ ಮುಸ್ಲಿಮರ ನ್ಯಾಯಯುತವಾದ ಆಸ್ತಿಗಳಾದ ಮಸ್ಟಿದ್, ದರ್ಗಾ, ಈದ್ಗಾ, ಖಬ್ರಸ್ಥಾನಗಳಿಗೆ ದಕ್ಕೆ ಮತ್ತು ಮುಸ್ಲಿಂರ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವ ವಕ್ಪ್ ತಿದ್ದುಪಡಿ ಕಾಯಿದೆ ೨೦೨೫ ಯನ್ನು ಜಾರಿ ಮಾಡಿರವ ಕ್ರಮವು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಕಸಿದುಕೊಳ್ಳುವದಾಗಿದೆ ಇದನ್ನು ನಾವು ಬಲವಾಗಿ ಖಂಡಿಸಿ, ಇದರ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು
ನಗರಸಭಾ ಅಧ್ಯಕ್ಷ, ಮುಸ್ಲಿಂ ಸಮಾಜದ ಮುಖಂಡರಾದ ಅಮ್ಜದ್ ಪಟೇಲ್ ಮಾತನಾಡಿ ವಕ್ಪ್ ಆಸ್ತಿ ಅಂದರೆ ದಾನಿಗಳು ಮುಸ್ಲಿಮ್ ಸಮುದಾಯದ ಸಾಮೂಹಿಕ ಕೆಲಸಗಳಿಗೆ ದಾನ ಮಾಡಿದ ಆಸ್ತಿಗಳು. ಸದರಿ ಆಸ್ತಿಗಳನ್ನು ಯಾರು ದುರುಪಯೋಗ ಮಾಡಬಾರದು ಎಂದು ಸರ್ಕಾರದ ಅಡಿಯಲ್ಲಿ ಬರುವ ವಕ್ಪ್ ಎಂಬ ಸರ್ಕಾರಿ ಮಂಡಳಿಯಲ್ಲಿ ನೊಂದಣಿ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಯನ್ನು ಮುಸ್ಲಿಮರೆ ಇಸ್ಲಾಂ ಧರ್ಮದ ಆಚರಣೆಗಳ ಅನುಗುಣವಾಗಿ ಮಾಡುತ್ತಾರೆ ಇದು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಮೂಲಭೂತ ಹಕ್ಕು ಸಂವಿಧಾನದ ಆರ್ಟಿಕಲ್ ೨೬ ರ ಪ್ರಕಾರ ಭಾರತದ ಯಾವುದೇ ಧರ್ಮೀಯರು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ದತ್ತಿದಾನಗಳನ್ನು ಮಾಡಲು ತಮ್ಮದೇ ಆದ ಸಂಸ್ಥೆಗಳನ್ನು ರಚಿಸಿಕೊಂಡು ನಿರ್ವಹಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮುಸ್ಲಿಮ್ ಸಮಾಜದ ಮುಖಂಡ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಪಾಶಾ ಕಾಟನ್ ಮಾತನಾಡಿ, ಮೇಲ್ನೋಟಕ್ಕೆ ಸೆಕ್ಯುಲಾರ್ ಕ್ರಮವೆಂದು ಕಾಣುವ ಈ ತಿದ್ದುಪಡಿಗಳು ಅನ್ಯಾಕ್ರಮಣ ದುರುದ್ದೇಶವನ್ನೇ ಹೊಂದಿರುವುದು ಸ್ಪಷ್ಟ, ಏಕೆಂದರೆ ಮುಸ್ಲಿಂ ಧಾರ್ಮಿಕ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಕಡ್ಡಾಯ ಮಾಡುವ ಮೋದಿ ಸರ್ಕಾರ ಅದೇ ನಿರ್ಬಂಧವನ್ನು ಹಿಂದೂ, ಜೈನ, ಸಿಖ್, ಕ್ರಿಸ್ಟಿಯನ್ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಾಹಣೆಗಳಲ್ಲೂ ಆಯಾ ಧರ್ಮದವರಲ್ಲದವರನ್ನು ಏಕೆ ಕಡ್ಡಾಯ ಮಾಡುವುದಿಲ್ಲ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಕೋಮುವಾದಿ ಪಕ್ಷಪಾತ ಮತ್ತು ತಾರತಮ್ಯ ಎದ್ದು ಕಾಣುತ್ತದೆ. ಸ್ವಾತಂತ್ರ್ಯಾ ನಂತರದಲ್ಲಿ ೧೯೫೪ ರಲ್ಲಿ ವಕ್ಪ್ ಕಾಯಿದೆಯೊಂದು ಜಾರಿಯಾಯಿತು. ಅದಾದ ನಂತರದಲ್ಲಿ ಪ್ರಧಾನವಾಗಿ ೧೯೯೫ ರಲ್ಲಿ ಒಂದು ಸಮಗ್ರವಾದ ವಕ್ಪ್ ಕಾಯಿದೆ ಜಾರಿಯಾಯಿತು. ಇದು ಪ್ರಧಾನ ಕಾಯಿದೆಯಾಗಿದ್ದು ಮೋದಿ ಸರ್ಕಾರ ಈ ಕಾಯಿದೆಗೆ ಅಮೂಲಾಗ್ರವಾದ ತಿದ್ದುಪಡಿಯನ್ನು ತಂದಿದೆ ಎಂದು ಹೇಳಿದರು.
ಕೆಎಂಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಸಮಾಜದ ಮುಖಂಡರಾದ ಕೆ.ಎಂ.ಸೈಯದ್ ಮಾತನಾಡಿ ಸದರಿ ಕಾಯ್ದೆ ತಿದ್ದುಪಡಿ ಮಾಡಿರುವ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು, ಮೇ ೩ರಂದು ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದರಲ್ಲಿ ತಾಲೂಕಿನ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಲಿದ್ದಾರೆ. ಜೊತೆಗೆ ಪ್ರಗತಿಪರ ಸಂಘಟನೆಗಳು ವಿವಿಧ ಸಮಾಜದ ಬಂಧುಗಳೂ ಸಹ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಯುವ ಮುಖಂಡ ಸಲೀಂ ಮಂಡಲಗೇರಿ ಮಾತನಾಡಿ, ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರವು ಮುಸ್ಲಿಂರನ್ನು ಗುರುಯಾಗಿರಿಸಿಕೊಂಡು ಧಮನೀಯಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಖಂಡನೀಯವಾದುದ್ದು, ಇಂತಹ ಕ್ರಮಗಳು ದೇಶವಾಸಿಗಳ ಭಾವನೆಗಳಿಗೆ ಮಾತ್ರವಲ್ಲ, ಸಂವಿಧಾನದ ಹಕ್ಕು ಕಸಿದುಕೊಳ್ಳುವ ಸರ್ವಾಧಿಕಾರಿ ಧೋರಣೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ಸಂವಿಧಾನ ಹಾಗೂ ಅದರ ಹಕ್ಕುಗಳನ್ನು ಕಾಪಾಡಿಕೊಳ್ಳಲು ನಾವು ಹೋರಾಟ ನಡೆಸುತ್ತೇವೆ ಎಂದರು.
ಸಂವಿಧಾನ ವಿರೋಧಿ ವಕ್ಪ್ ತಿದ್ದುಪಡಿ ಕಾಯಿದೆ ೨೦೨೫ ಜಾರಿ ವಿರೋಧಿಸಿ ಹಾಗೂ ಇದನ್ನು ವಾಪಸ್ ಪಡೆಯಲು ಆಗ್ರಹಿಸಿ ಮೇ. ೩ ಶನಿವಾರ ಜರುಗುವ ಹೋರಾಟಕ್ಕೆ ಅನೇಕ ಸಂಘ-ಸಂಸ್ಥೆಗಳ, ಮತ್ತು ವಿವಿಧ ಸಮುದಾಯದವರು ಬೆಂಬಲವನ್ನು ನೀಡಿದ್ದಾರೆ, ಸಮಸ್ತ ಮುಸ್ಲಿಂ ಭಾಂಧವರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿಯ ಮುಖಂಡರು ಜಂಟಿಯಾಗಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಎಂ.ಡಿ ಆಸಿಫ್ ಕರ್ಕಿಹಳ್ಳಿ ,ಸಮಾಜದ ಮುಖಂಡರಾದ ಹಾಗೂ ಕೊಪ್ಪಳ ನಗರಸಭೆ ಸದಸ್ಯರಾದ ಅಜೀಂ ಅತ್ತಾರ, ಮಾಜಿ ಸದಸ್ಯರಾದ ಮಾನ್ವಿ ಪಾಷಾ, ಯುವ ನಾಯಕರಾದ ಸಲೀಂ ಅಳವಂಡಿ ಸೈಯದ್ ನಾಸಿರ್ ಕಂಠಿ, ಫಕ್ರುದ್ದೀನ್ ಸಾಬ್ ನದಾಫ್, ಅಬ್ದುಲ್ ಅಜೀಜ್ ಮಾನ್ವಿ ಕರ್ , ಅಸೀಫ್ ಖಾನ್, ಸೇರಿದಂತೆ ಇತರರು ಇದ್ದರು.
ವಕ್ಫ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೊಪ್ಪಳದಲ್ಲಿ ಮೇ. 3 ರಂದು ಬೃಹತ್ ಪ್ರತಿಭಟನೆ
https://youtu.be/4K3-RlaN0i0
https://youtu.be/4K3-RlaN0i0
Comments are closed.