ಏಪ್ರಿಲ್ ೩೦ ರಂದು ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ

Get real time updates directly on you device, subscribe now.

ಕೊಪ್ಪಳ ಏಪ್ರಿಲ್ ೨೯: ಕೊಪ್ಪಳ ನಗರದ ಈಶ್ವರ ಪಾರ್ಕ್ ಈಶ್ವರ್ ದೇವಸ್ಥಾನದಿಂದ ನಗರದ ವಡ್ಡರ ಓಣಿಯ ಶ್ರೀ ತಿಮ್ಮಪ್ಪನ ದೇವಸ್ಥಾನದವರೆಗೆ ಭೋವಿ ಸಮಾಜದ ವತಿಯಿಂದ ಶ್ರೀ ತಿಮ್ಮಪ್ಪನ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಜರಗಿತು. ಸಮಾಜದ ವತಿಯಿಂದ ಕುಂಭ ಕಳಶ ದೊಂದಿಗೆ ಈಶ್ವರ ಪಾರ್ಕ್ ನಲ್ಲಿ ತಿಮ್ಮಪ್ಪನ ಮೂರ್ತಿಗೆ ಪೂಜೆ ಸಲ್ಲಿಸಿ ನಮ್ಮ ನಾಲ್ಕನೇ ವಾರ್ಡ್ ನಲ್ಲಿರುವ ತಿಮ್ಮಪ್ಪನ ದೇವಸ್ಥಾನದವರೆಗೆ ಮೂರ್ತಿ ಮೆರವಣಿಗೆ ಇದೆ. ನಂತರ ಏಪ್ರಿಲ್ ೨೯ರಂದು ಮಂಗಳವಾರ ತಿಮ್ಮಪ್ಪನ ಮೂರ್ತಿಗೆ ವಿಶೇಷ ಪೂಜೆ ಹೋಮ ಮತ್ತು ಹವನ ಮೀಸಲಾಗುವುದು ಮಧ್ಯಾಹ್ನ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಸಂಜೆ ಪೂಜಾ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸಭೆ. ಏಪ್ರಿಲ್ ೩೦ರಂದು ಬುದುವಾರ ಬೆಳಗ್ಗೆ ೦೮:೦೫ ಯಿಂದ ೮:೪೫ರ ವರೆಗೆ ಸಲುವ ವೈಭವ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ತಿಮ್ಮಪ್ಪನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಭಿಷೇಕ ಮಹಾಮಂಗಳಾರತಿ ಜರಗಲಿದೆ. ಅಂದು ಮಧ್ಯಾಹ್ನವು ಬರುವ ಭಕ್ತಾದಿಗಳಿಗೆ ಮಹಾಪ್ರಸಾದ, ಸಂಜೆ ೬:೦೦ಗೆ ಶ್ರೀ ತಿಮ್ಮಪ್ಪನ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ತಿಮ್ಮಪ್ಪನ ನೂತನ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭವು ನಡೆಯಲಿದೆ. ಈ ಸಂದರ್ಭದಲ್ಲಿ ಭೋವಿ ಸಮಾಜದ ಗುರು ಹಿರಿಯರು, ಮಹಿಳೆಯರು, ಯುವಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!