ಕಾಂಗ್ರೆಸ್ ಅಂದರೆ ನುಡಿದಂತೆ ನಡೆಯುವ ಪಕ್ಷ. –ಶಾಸಕ ಕೆ ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

* ಬಡವರಿಗೆ ಶಕ್ತಿ ತುಂಬುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ.

* ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ದ.

*ಗಿಣಗೇರಾ ಹಾಗೂ ಹಿಟ್ನಾಳ ಜಿ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಭಾಗಿ

ಕೊಪ್ಪಳ : ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು  ಗಿಣಗೇರಾ ಹಾಗೂ ಹಿಟ್ನಾಳ ಜಿ.ಪಂ ವ್ಯಾಪ್ತಿಯ ಗಬ್ಬೂರು, ಗುಳದಲ್ಲಿ ಕೆರೆಹಳ್ಳಿ ಲಿಂಗದಹಳ್ಳಿ, ಶಹಾಪುರ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯನ್ನ ಹಮ್ಮಿಕೊಂಡು ಜನರ ಸಮಸ್ಯೆ ಆಲಿಸಿದರು.

 

ನಂತರ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರು ಕಾಂಗ್ರೆಸ್ ಅಂದರೆ ನುಡಿದಂತೆ ನಡೆಯುವ ಪಕ್ಷ.ಚುನಾವಣೆ ಪ್ರಣಾಳಿಕೆ ಘೋಷಣೆ ಮಾಡಿದ್ದ 5 ಭರವಸೆಗಳ ಪೈಕಿ ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆ ಎಂಬ 3 ಭರವಸೆಗಳನ್ನು ಈಡೇರಿಸಿದ್ದೇವೆ ಗೃಹಲಕ್ಷ್ಮಿ ಯೋಜನೆಗೂ ಕೂಡ ಇದೇ ತಿಂಗಳ 19ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಿದ್ದೇವೆ. ಯುವನಿಧಿ ಯೋಜನೆಯನ್ನ ಡಿಸೆಂಬರ್ ತಿಂಗಳಲ್ಲಿ ಜಾರಿ ಮಾಡಲಾಗುವುದು.ಕೆಲವೊಬ್ಬರು ಈ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಆದರೆ ಈ ಯೋಜನೆಗಳನ್ನ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ.ನುಡಿದಂತೆ ನಡೆಯುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಯೋಜನೆಗಳಿಂದ ಬಡವರಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಈ ಯೋಜನೆಗಳಿಂದ ಪ್ರತಿ ಮನೆಗೆ 4 ರಿಂದ 5 ಸಾವಿರ ಹಣ ಸಂದಾಯವಾಗುತ್ತಿದೆ ಈ ಮೂಲಕ ಬಡತನ ನಿರ್ಮೂಲನೆಯ ಕನಸು ಹೊತ್ತು ದಿಟ್ಟ ಹೆಜ್ಜೆಯ ಕನಸು ನನಸಾಗುತ್ತಿದೆ ಎಂದರು.

 

ಮಾದರಿ ಕ್ಷೇತ್ರ : ಕೊಪ್ಪಳ ವಿಧಾನಸಭ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನ ಹೊಂದಿ ಹೆಚ್ಚಿನ ಅನುಧಾನವನ್ನು ತಂದು ಶೈಕ್ಷಣಿಕ, ಅರೋಗ್ಯ, ನೀರಾವರಿ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ನಂ.1 ಕ್ಷೇತ್ರವನ್ನಾಗಿ ಮಾಡುವೆ ಎಂದರು.

 

ಮೊಟ್ಟೆ ವಿತರಣೆ : ಗುಳದಲ್ಲಿ ಗ್ರಾಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು,ಶೇಂಗಾಚಕ್ಕಿ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

ಬೋರವೆಲ್ ಪಂಪ್ ಮೋಟಾರ್ ವಿತರಣೆ : ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ 2022-23ನೇ ಸಾಲಿನ ಎಸ್. ಸಿ . ಪಿ ಹಾಗೂ ಟಿ. ಎಸ್. ಪಿ ಯೋಜನೆಡಿಯಲ್ಲಿ ಮಾನ್ಯ ಶಾಸಕರ ಅನುದಾನದಲ್ಲಿ ಆಯ್ಕೆ ಆದ ಫಲಾನುಭವಿಗಳಿಗೆ  ಪಂಪ್ ಮೋಟಾರ್ ಹಾಗೂ ಪೂರಕ ಸಾಮಾಗ್ರಿಗಳ ವಿತರಣೆ ಮಾಡಿದರು.

 

ಈ ಸಂಧರ್ಭದಲ್ಲಿ ಜಿ. ಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ರಡ್ಡಿ,ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡುಂದೇಶ ತುರಾದಿ, ಮುಖಂಡರಾದ ಅಲಿ ಸಾಬ್, ಗಿರೀಶ್ ಹಿರೇಮಠ,ನಿಂಗಜ್ಜ ಶಹಾಪುರ,ಸಿದ್ದರಾಮಪ್ಪ ಕೆರೆಹಳ್ಳಿ,ಅಣ್ಣಪ್ಪ ಗಬ್ಬುರು, ಕುಬೇರಪ್ಪ ಗಬ್ಬೂರು, ಹನಮಂತಪ್ಪ ಹುಲಿಗಿ, ಗುಡದಪ್ಪ ಗುಳದಳಿ, ರಮೇಶ ಹೊಳೆಯಾಚಿ,ಮುರಳಿ ಲಿಂಗದಳ್ಳಿ, ಮುದ್ದಪ್ಪ ಬೇವಿನಳ್ಳಿ,ನಾಗರಾಜ ಬಹದ್ದೂರ್ ಬಂಡಿ, ಶಿವಮೂರ್ತಿ ಬೇವಿನಳ್ಳಿ, ನಗರಸಭ ಸದಸ್ಯ ವಕ್ತಾರ ಅಕ್ಬರ್ ಪಲ್ಟಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!