ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ
ಕೊಪ್ಪಳ : ತಾತ್ವಿಕ ನಿಲುವುಗಳ ಮೂಲಕ ಸಂಘಟನೆಯನ್ನು ಕಟ್ಟಬೇಕು.ಸಾಮಾಜಿಕ ಪರಿವರ್ತನೆಗಾಗಿ ಏನಾದರೂ ಸೇವೆಯನ್ನು ಮಾಡಬೇಕು. ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಮಾತ್ರ ಅಂಬೇಡ್ಕರ್ ರವರ ಕನಸು ನನಸು ಮಾಡಲು ಸಾಧ್ಯ. ಎಂದು ಕರ್ನಾಟಕ ರಾಜ್ಯ ಪರಿಶಿ? ಜಾತಿ/ಪರಿಶಿ? ಪಂಗಡಗಳ ನೌಕರರ ಒಕ್ಕೂಟದ ಸಂಸ್ಥಾಪಕರಾದ ಸಿ.ಕೆ. ಮಹೇಶ.
ಕೊಪ್ಪಳ ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿ? ಜಾತಿ ಪರಿಶಿ? ಪಂಗಡಗಳ ನೌಕರರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ, ಉಪನ್ಯಾಸ ನೀಡಿದ ಸಿ.ಕೆ.ಮಹೇಶ ಅವರು ತಾವು ಕೂಡ ಧರ್ಮ ಹಾಗೂ ಆಚರಣೆಯ ವಿ?ಯದಲ್ಲಿ ಅರಿತು ನಡೆಯಬೇಕು. ತಾವು ಹುಟ್ಟಿ ಬೆಳೆದು ಬಂದ ದಾರಿ, ಸಂಸ್ಕೃತಿಯನ್ನು ಮರೆತು ನಗರೀಕರಣಕ್ಕೊಳಗಾಗಿ, ಇಲ್ಲದ ಆಚರಣೆಗಳನ್ನು ಮಾಡಬೇಡಿ. ಇತರರಿಗಿಂತಲೂ ನಿಮಗೆ ಸಾಕ? ಸವಾಲು, ಜವಾಬ್ದಾರಿಗಳು ಎದುರಾಗುತ್ತವೇ, ಆ ಎಲ್ಲ ಸವಾಲುಗಳಿಗೂ ನಿಮಗೆ ಉತ್ತರ ಸಂವಿಧಾನ ಹಾಗೂ ನಿಮ್ಮ ನಡೆ ಅಮಬೇಡ್ಕರ್ ದಾರಿಯಲ್ಲಿದ್ದಾಗ ಮಾತ್ರ ಸುಗಮವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಮಲ್ಲೇಶ ಹಾಗೂ ತಂಡದವರ ಕ್ರಾಂತಿಗೀತೆಯೊಮದಿಗೆ ಪ್ರಾರಂಭಿಸಿದರು, ಶಶಿಧರ ಸಂವಿಧಾನ ಪೀಠಿಕೆ ವಾಚಿಸಿದರು. ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪು?ನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಬಾಬಾಸಾಹೇಬರ ಸಂವಿಧಾನದ ಅಡಿಯಲ್ಲಿ ಸೌಲಭ್ಯ ಗಳು,ವಸತಿನಿಲಯಗಳ ವ್ಯವಸ್ಥೆ ಇಲ್ಲದೇ ಹೋಗಿದ್ದರೆ ನಮ್ಮಂತವರಿಗೆ ಶಿಕ್ಷಣ ದೂರಾನೇ ಇರುತಿತ್ತು. ಬಾಬಾಸಾಹೇಬ ಅಂಬೇಡ್ಕರ ರವರ ದೂರದೃಷ್ಟಿಯಿಂದ ನಾವಿಂದು ಸೌಲಭ್ಯಗಳನ್ನು ಅನುಭವಿಸುತ್ತಿದ್ದೇವೆ. ಮೀಸಲಾತಿಯಲ್ಲಿ ನೌಕರಿ ಪಡೆದಿರುವವರು, ತಾವು ಹುಟ್ಟಿ ಬೆಳೆದ ಸಮಾಜ, ವರ್ಗಗಳಿಗೆ ಸಹಾಯ, ಸಹಕಾರ ನೀಡುವ ಮನೋಭಾವವನ್ನು ಹೊಂದಬೇಕು ಎಂದು ಮುಖ್ಯ ಅಭಿಯಂತರರಾದ ಶಿವಾನಂದ ನಾಯ್ಕ ಮಾತನಾಡಿದರು.
ಕೊಪ್ಪಳದ ಚರ್ಮ ವಿಭಾಗದ ವೈದ್ಯ ಡಾ ಸರ್ವೇಶ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಹೇಮಂತರಾಜ, ಕಾರಟಗಿ ತಾಲೂಕ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ, ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹನುಮೇಶ ಕಡೇಮನಿ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕ್ರಯ್ಯ ಮಾತನಾಡಿದರು.
ಕರ್ನಾಟಕ ರಾಜ್ಯ ಪರಿಶಿ? ಜಾತಿ ಪರಿಶಿ? ಪಂಗಡಗಳ ಜಿಲ್ಲಾ ಘಟಕಕ್ಕೆ ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಮ್ಯಾಗಳಮನಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಣೇಶ ಪೂಜಾರ, ಖಚಾಂಚಿಯಾಗಿ ರಾಮಣ್ಣ ಕಳ್ಳಿಮನಿ, ಸಹ ಕಾರ್ಯದರ್ಶಿಯಾಗಿ ಮಂಜುನಾಥ ಬುಲ್ಟಿ, ಹೇಮಣ್ಣ ಕವಲೂರ ಮಂಜುಳಾ ಶ್ಯಾವಿ, ಶಂಕರಪ್ಪ ಚಾಗಿ ನೂತನ ಪದಾಧಿಕಾರಿಗಳು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಾಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿ.ವೆಂಕಟೇಶ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲೋಕೋಪಯೋಗಿ ಕೊಪ್ಪಳ ದೇವೆಂದ್ರಪ್ಪ ಇಟ್ಟಂಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಣ್ಣ ನೀರಾವರಿ ಇಲಾಖೆ ಕುಷ್ಟಗಿ, ಗ್ರೇಡ್ ೨ ತಹಶೀಲ್ದಾರ ಗವಿಸಿದ್ಧಪ್ಪ ಮಣ್ಣೂರ, ಶಿಕ್ಷಕ ಡಿ.ರಾಮಣ್ಣ ಆಲ್ಮರಸಿಕೇರಿ, ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ, ಅಣ್ಣಪ್ಪ ಹಳ್ಳಿ ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೊಳಿಬಸಯ್ಯ, ರಾಮಣ್ಣ ಶ್ಯಾವಿ ಬಾಲನಾಗಮ್ಮ, ರೇಣುಕಾ, ಮಾರುತಿ ಮಂಗಳಾಪುರ, ಡಿ.ಸುಧಾಕರ ಮತ್ತಿತ್ತರರು ಉಪಸ್ಥಿತರಿದ್ದರು. ಹನುಮಂತಪ್ಪ ಚಲವಾದಿ ಪ್ರಸ್ತಾವಿಕ ನುಡಿಗಳನ್ನಾಡಿದರು, ಹೇಮಣ್ಣ ಕವಲೂರ ಸ್ವಾಗತಿಸಿದರು, ನಾಗರಾಜನಾಯಕ ಡಿ.ಡೊಳ್ಳಿನ ನಿರೂಪಿಸಿದರು. ಮಹಾವೀರ ವಂದಿಸಿದರು.