ಗಿಡ ಗಿಡಕ ಕೂತು ಕೈಮಾಡಿ ಕರೀತಾವ….
ದಿನಾಂಕ 17-04-2025 ರ ಗುರುವಾರರಂದು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಬಿ.ಇಡಿ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 10 :00 ಘಂಟೆಗೆ ಗಿಡ ಗಿಡಕ ಕೂತು ಕೈಮಾಡಿ ಕರೀತಾವ…. ಎಂಬ ಜಾನಪದ ವಿಷಯದ ಕುರಿತಾದ ಉಪನ್ಯಾಸ ಹಾಗೂ ಜಾನಪದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸದರಿ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಉದ್ಘಾಟಿಸಲಿದ್ದು ಉಪನ್ಯಾಸಕ, ಸಾಹಿತಿ ಡಾ ಸಿದ್ಲಿಂಗಪ್ಪ ಕೊಟ್ನೆಕಲ್ ಅವರು ಕೊಪ್ಪಳ ಪರಿಸರದ ಜನಪದ ಭಾಷಾ ವೈಶಿಷ್ಟ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಸ್ ಬಿ ಕಂಬಾರ್ ಪ್ರಾಂಶುಪಾಲರು ಗವಿಸಿದ್ದೇಶ್ವರ ಬಿ ಇಡಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ವಹಿಸಿಕೊಳ್ಳಲಿದ್ದಾರೆ ಸದರಿ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಪದ್ಮಶ್ರೀ ಭೀಮವ್ವ ಸಿಳ್ಳಿಕ್ಯಾತರ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊಫೆಸರ್ ಅಲ್ಲಮಪ್ರಭು ಬೆಟ್ಟದೂರು, ಶ್ರೀ ಎಂ ಎಮ್ ಮದರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಕೊಪ್ಪಳ ಜಿಲ್ಲೆಯ ವಿವಿಧ ಜಾನಪದ ಕಲಾವಿದರಗಳಿಂದ ಜಾನಪದ ಗೀತ ಗಾಯನ ಕಾರ್ಯಕ್ರಮವು ನೆರವೇರುವದೆಂದು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಕೊಟ್ರೇಶ್ ಮರಬನಹಳ್ಳಿ , ಅಕಾಡೆಮಿ ಸದಸ್ಯ ಶ್ರೀ ಮೆಹಬೂಬ್ ಕಿಲ್ಲೆದಾರ, ಬಳ್ಳಾರಿಯ ಜಾನಪದ ಕಾವ್ಯ ಕಲಾವಿದ
ದಳವಾಯಿ ಚಿತ್ತಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಜಾನಪದ ಕಲಾವಿದರು ಹಾಗೂ ಸಾಹಿತಿಗಳು ಮುಂತಾದವರು ಭಾಗವಹಿಸಲಿದ್ದಾರೆ
*ವಂದನೆಗಳೊಂದಿಗೆ
ಸರ್ವರಿಗೂ ಸುಸ್ವಾಗತ*
🙏🙏🙏🙏🙏
ಡಾ ಜೀವನಸಾಬ್ ವಾಲಿಕಾರ್ ಬಿನ್ನಾಳ ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಅಂತಾರಾಷ್ಟ್ರೀಯ ಜಾನಪದ ಕಲಾವಿದರು ಕೊಪ್ಪಳ