ನಾಡು ನುಡಿ ಸಂಸ್ಕೃತಿ ಪರಂಪರೆಯ ಉಳಿವಿಗೆ ಎಲ್ಲಾರೂ ಶ್ರಮಿಸೋಣ : ಸಂಸದ ಯದುವೀರ ಶ್ರೀಕಂಠದತ್ತ ಒಡೆಯರ್
ಕೊಪ್ಪಳ/ಮೈಸೂರು: ಕೊಪ್ಪಳ ಜಿಲ್ಲೆ ಕುಕನೂರಿನ ಕನ್ನಡ, ಸಾಹಿತ್ಯ,ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಏಪ್ರಿಲ್ 20ರಂದು ಮೈಸೂರಿನ ವಿಜಯ ನಗರ ಮೊದಲನೆಯ ಹಂತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ 12ನೆಯ ಸಾಹಿತ್ಯ ,ಸಾಂಸ್ಕೃತಿಕ ಸಮ್ಮೇಳನ ಉದ್ಘಾಟನೆಗೆ ಆಗಮಿಸುವಂತೆ ಮೈಸೂರಿನ ಮಹಾರಾಜರು ಹಾಗೂ ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ ಶ್ರೀಕಂಠದತ್ತ ಚಾಮರಾಜ ಒಡೆಯರ್ ಅವರಿಗೆ ಆಹ್ವಾನಿಸಲಾಯಿತು. ಸಮ್ಮೇಳನದ ಆಯೋಜಕರಾದ ರುದ್ರಪ್ಪ ಭಂಡಾರಿ, ಟಿ.ತ್ಯಾಗರಾಜ್ , ಸಮ್ಮೇಳನ ನಿಯೋಜಿತ ಅಧ್ಯಕ್ಷರಾದ ಲಯನ್ ಗೋಲ್ಡನ್ ಟಿ ಸುರೇಶ್ ಹಾಗೂ ಸಮಾಜ ಸೇವಕ ಡಾ.ಲಯನ್ ಕುಮಾರ್ ಅವರು ಇದೆ ವೇಳೆ ಸಂಸದರನ್ನು ಸನ್ಮಾನ ಗೌರವ ಸ್ವೀಕರಿಸಿದ ಯದುವೀರ ಒಡೆಯರ್ ಅವರು ಮಾತನಾಡಿ, ಮೈಸೂರಿನ ನೆಲ ಪಾವಿತ್ರ್ಯತೆ ಯ ಸಂಕೇತವಾಗಿದ್ದು, ಇಲ್ಲಿ ಆಳ್ವಿಕೆ ನಡೆಸಿದ ಹಲವಾರು ರಾಜ ಮಹಾರಾಜರು ಜನಕಲ್ಯಾಣದ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಬೆಂಬಲ ನೀಡಿದ್ದಾರೆ. ಇಂಥ ನೆಲದಲ್ಲಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕ ನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಜೊತೆಗೂಡಿ ಮೈಸೂರು ಪ್ರಾಂತ್ಯದ ಜನರು ಸಮ್ಮೇಳನ ಆಯೋಜನೆ ಮಾಡಿದ್ದು ಸ್ತುತ್ಯಾರ್ಹ. ಸಮಾರಂಭಕ್ಕೆ ಖುಷಿಯಿಂದ ಭಾಗವಹಿಸುವುದಾಗಿ ಹೇಳಿದರು. ಇಲ್ಲಿಯ ಜನರು ಸರಳ ಸಜ್ಜನಿಕೆಯಿಂದ ಹಿರಿಯರು ಹಾಕಿ ಕೊಟ್ಟ ಮಾಗ೯ದಲ್ಲಿ ಮುಂದಿನ ಪೀಳಿಗೆಗೆ ಸಹಕರಿಸುತ್ತ ಪ್ರೋತ್ಸಾಹಿಸುತ್ತಾರೆ ಇದು ಉತ್ತಮ ಬೆಳವಣಿಗೆ ಇದು ನಿರಂತರವಾಗಿರಿಸಲು ಎಲ್ಲ ಕನ್ನಡಿಗರು ಒಗ್ಗಟ್ಟಾಗಿ ನಾಡಿನ ನೆಲ ಜಲ ಭಾಷೆ ಸಂಸ್ಕೃತಿ ಪರಂಪರೆಯ ಉಳಿವಿಗೆ ಶ್ರಮಿಸಬೇಕಾದ ಹೊಣೆ ಎಲ್ಲರ್ದಾಗಿದೆ ಎಂದು ತಿಳಿಸಿದರು.