ಏ. 20ರಂದು ಅಶೋಕ ಶಿಲಾಶಾಸನ & ಕೊಪ್ಪಳ ಕೋಟೆ ಚಾರಣ: ಹೆಸರು ನೋಂದಾಯಿಸಿ
- ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಅಶೋಕ ಶಿಲಾಶಾಸನ ಮತ್ತು ಕೊಪ್ಪಳ ಕೋಟೆ ಚಾರಣ ಸಾಹಸ ಕಾರ್ಯಕ್ರಮವನ್ನು ಏಪ್ರಿಲ್ 20 ರಂದು ಆಯೋಜಿಸಲಾಗಿದ್ದು, ಜಿಲ್ಲೆಯ ಆಸಕ್ತ ಯುವಕ/ಯುವತಿಯರು, ಯುವ ಉತ್ಸಾಹಿಗಳು ಹಾಗೂ ಎಲ್ಲಾ ವಯೋಮಾನದವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.
ಈ ಆಯೋಜನೆಗಾಗಿ ಕೆಲವು ನಿಭಂದನೆಗಳನ್ನು ಸೂಚಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರವೇಶ ಫೀ ರೂ.50 ಆಗಿರುತ್ತದೆ. ಚಾರಣ ಆಯೋಜನೆ ಸಮಯ ಬೆಳಿಗ್ಗೆ 6 ಗಂಟೆಯಿAದ ಬೆಳಿಗ್ಗೆ 9 ಗಂಟೆಯವರೆಗೆ ಆಗಿದ್ದು, ಚಾರಣ ಪ್ರಾರಂಭದ ಸ್ಥಳ ಕೊಪ್ಪಳ ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣ ಆಗಿದೆ. ಎಲ್ಲಾ ವಯೋಮಿತಿಯವರು ಭಾಗವಹಿಸಲು ಅವಕಾಶವಿರುತ್ತದೆ. 10 ವರ್ಷ ಒಳಗಿನ ವಯೋಮಿತಿಯ ಮಕ್ಕಳು ಇದ್ದರೆ ಅವರೊಂದಿಗೆ ಪಾಲಕರು ಕಡ್ಡಾಯವಿರಬೇಕು. ಚಾರಣಕ್ಕೆ ಬರುವವರು ಕಡ್ಡಾಯವಾಗಿ ನೀರಿನ ಬಾಟಲ್, ಕರವಸ್ತ್ರ ಮತ್ತು ತಮಗೆ ಅಗತ್ಯವಿರುವ ವಸ್ತುಗಳನ್ನು ತಾವೇ ತರಬೇಕು. ಮಾರ್ಗದರ್ಶಕರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಮಕ್ಕಳನ್ನು ಪ್ರಾರಂಭದ ಸ್ಥಳಕ್ಕೆ ಮತ್ತು ಅಂತ್ಯದ ಸ್ಥಳದಿಂದ ಕರೆದುಕೊಂಡು ಹೋಗುವ ಜವಾಬ್ದಾರಿ ಪಾಲಕರದ್ದಾಗಿರುತ್ತದೆ. ಉಚಿತ ಪೋಟೊ ಮತ್ತು ವಿಡಿಯೋ (ಸಾಪ್ಟ್ ಕಾಫಿ) ನೀಡಲಾಗುವುದು. ಚಾರಣಕ್ಕೆ ಹೊಂದಿಕೊಳ್ಳುವಂತ ಶ್ಯೂ ಮತ್ತು ಡ್ರೆಸ್ ಧರಿಸಿರಬೇಕು. ಭಾಗವಹಿಸುವರಿಗೆ ಉಪಹಾರದ ವ್ಯವಸ್ಥೆ ಇರುತ್ತದೆ.
*ಚಾರಣದ ಮಾರ್ಗ:* ಜಿಲ್ಲಾ ಕ್ರೀಡಾಂಗಣ, ಶೀಲ್ಪಾಗ್ರಾಂಡ್ ಹೋಟಲ್ ಹಿಂದುಗಡೆಯಿಂದ ಅಶೋಕ ಶಿಲಾಶಾಸನ, ಗುಡ್ಡದ ದಾರಿಯ ಮಾರ್ಗವಾಗಿ ಮರ್ದಾನಲಿ ದರ್ಗಾ ವರೆಗೆ ಹಾಗೂ ವಿಶ್ರಾಂತಿ ಉಪಹಾರದ ಬಳಿಕ ಅದೇ ಮಾರ್ಗವಾಗಿ ವಾಪಸ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಕಛೇರಿಯ ಸಿಬ್ಬಂದಿ ತುಕಾರಾಮ್, ಮೊ.ಸಂ: 8197398600, ವಿಶ್ವನಾಥ ಮೊ.ಸಂ: 8660455969 ಮತ್ತು ಕಛೇರಿ ದೂರವಾಣಿ ಸಂಖ್ಯೆ 08539-230121ಗೆ ಸಂಪರ್ಕಿಸಲು ಅಥವಾ ಕಛೇರಿಗೆ ಖುದ್ದಾಗಿ ಭೇಟಿ ನೀಡಿ, ಸಂಪರ್ಕಿಸುವಂತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.