ರಾಜ್ಯದಲ್ಲಿ ಹೊಸದಾಗಿ 2 ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ- ಸಚಿವ ರಾಮಲಿಂಗಾರೆಡ್ಡಿ

ಅವರು ಸೋಮವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ ಹಾಗೂ ಲೋಕೋಪಯೋಗಿ ಇಲಾಖೆಯ ಸರ್ಕಿಟ್ ಹೌಸ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಬ್ಬ-ಹರಿ ದಿನಗಳ ಸಂದರ್ಭ ಹಾಗೂ ಶಾಲಾ-ಕಾಲೇಜುಗಳ ಮಕ್ಕಳಿಗೆ ಹೊಸದಾಗಿ ಬಸ್ ಖರೀದಿಸುವದರಿಂದ ಅವರು ದಿನಾಲು ಸಂಚಾರ ಮಾಡಲು ಅನುಕೂಲವಾಗುವದರ ಜೊತೆಗೆ ಬಸ್ಸುಗಳ ಕೊರತೆ ನೀಗಿಸಿದಂತಾಗುತ್ತದೆ. ಯಲಬುರ್ಗಾ ಕ್ಷೇತ್ರದಲ್ಲಿ 16 ಬಸ್ಸ ನಿಲ್ದಾಣಗಳನ್ನು ಕಟ್ಟುತ್ತಿದ್ದೆವೆ. ಇಂದು ಬೇವೂರು ಹಾಗೂ ಹಿರೇವಂಕಲಕುಂಟಾ ನೂತನ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸುತ್ತಿದ್ದೆನೆ. ಮಂಗಳೂರಿಗೆ ಬಸ್ ನಿಲ್ದಾಣ ಮಾಡಲು ಇಂದೇ ಆದೇಶ ನೀಡಿದ್ದೆನೆ ಎಂದರು.
ಕೊಪ್ಪಳ-ಬೆಂಗಳೂರು ಹಾಗೂ ಕೊಪ್ಪಳ-ಬೀದರ ಜಿಲ್ಲೆಗಳಿಗೆ ಬರುವ ಕೆಲವೆ ದಿನಗಳಲ್ಲಿ ನಾನ ಎಸಿ ಸ್ಲೀಪರ್ ಬಸ್ಸುಗಳನ್ನು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಈ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯನ್ನು ಓದಿ 15 ರಿಂದ 20 ದಿನಗಳು ಬಿಟ್ಟು ಹುಲಿಗೆಮ್ಮ ದೇವಸ್ಥಾನಕ್ಕೆ ಒಂದು ವರ್ಷದ ಹಿಂದೆ ಭೇಟಿ ನೀಡಿ, ಹುಲಿಗೆಮ್ಮ ದೇವಸ್ಥಾನ ಪ್ರಾಧಿಕಾರ ಮಾಡಲು ತೀರ್ಮಾನ ಮಾಡಿದೆ. 4 ರಿಂದ 5 ತಿಂಗಳ ಹಿಂದೆ ಪ್ರಾಧಿಕಾರ ಮಾಡಲು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಹುಣ್ಣುಮೆ ಸಂದರ್ಭದಲ್ಲಿ ಅಲ್ಲಿಗೆ ಒಂದು ಲಕ್ಷಕಿಂತ ಹೆಚ್ಚು ಜನರು ಭೇಟಿ ನೀಡುತ್ತಾರೆ. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಮಲಗುತ್ತಾರೆ. ಹಾಗಾಗಿ ಪ್ರಾಧಿಕಾರದಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಹೇಳಿದರು.
ಅಂಜನಾದ್ರಿಗೆ ಹಿಂದಿನ ಸರ್ಕಾರ 19 ಕೋಟಿ ಅನುದಾನ ನೀಡಿತ್ತು ನಮ್ಮ ಸರ್ಕಾರ ಬಂದಮೇಲೆ 100 ಕೋಟಿ ಅನುದಾನ ನೀಡಲಾಗಿದೆ. ಪ್ರವಾಸಿ ಮಂದಿರ, ಶಾಫಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣಾ ಪಥ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಲಿಸುವ ಮೂಲಕ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಿಸಿಲಿನಲ್ಲಿ ನಿಲ್ಲುತ್ತಿದ್ದರು ಅವರ ಕಷ್ಟ ನೋಡಿ ಎಲ್ಲಾ ಕಡೆ ಬಸ್ ನಿಲ್ದಾಣಗಳನ್ನು ಮಾಡುತ್ತಿದ್ದೆನೆ. ಇಂದು ಬೇವೂರ ಹಾಗೂ ಹಿರೇವಂಕಲಕುಂಟಾ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. 6 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ಹೊಸ ಬಸ್ ನಿಲ್ದಾಣ ಮಾಡಲಾಗುವುದು. ಇದಕ್ಕೆ ಸಾರಿಗೆ ಸಚಿವರು ಇಂದೇ ಅನುಮೋದನೆ ನೀಡಿದ್ದಾರೆ ಎಂದರು.
ಕೆರೆ ತುಂಬಿಸುವ ಯೋಜನೆ, ಸಿಮೆಂಟ್ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಕುಕನೂರಿನಲ್ಲಿ 100 ಬೆಡ್ ಆಸ್ಪತ್ರೆ, ಯಲಬುರ್ಗಾದಲ್ಲಿ ಬರುವ ಕೆಲವೆ ದಿನಗಳಲ್ಲಿ ರೈಲು ಉದ್ಘಾಟನೆ ನೆರವೇರಲಿದೆ. ಇನ್ನೂ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳು ನನ್ನ ಕ್ಷೇತ್ರದಲ್ಲಿ ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ, ರೈಲು ಮಾಡಿಸಿದ ಉದ್ದೇಶ ನಮ್ಮ ತಾಲೂಕಿನ ಅಭಿವೃದ್ಧಿ ಯಾಗಿದೆ. ಈ ಬೇಸಿಗೆಯಲ್ಲಿ ಜನರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಆಗಬಾರದು.ಒಂದು ವೇಳೆ ಯಾವುದೇ ಸಮಸ್ಯೆಯಾದರೆ, ಸಂಬAಧಿಸಿದ ಇಲಾಖೆಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವುದರ ಜೊತೆಗೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಸಿದ್ರಾಮಯ್ಯನವರ ಸರ್ಕಾರ ಜನತೆಗೆ ಪ್ರತಿವರ್ಷ ಒಂದು ಲಕ್ಷ ಮೂರು ಸಾವಿರ ಕೋಟಿ ಹಣವನ್ನು ನೇರವಾಗಿ ಜನರಿಗೆ ಕೊಡುತ್ತಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ 52 ಸಾವಿರ ಕೋಟಿ ಹಣವನ್ನು ಜನರಿಗೆ ಕೊಡುತ್ತಿದ್ದೆವೆ. ಶಕ್ತಿ ಯೋಜನೆ ಅಡಿ ಮಹಿಳೆಯರು ರಾಜ್ಯದಲ್ಲಿ ಪ್ರತಿದಿನ 60 ರಿಂದ 62 ಲಕ್ಷ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೊಂದು ಜಾಗತಿಕ ದಾಖಲೆ ಯಾವ ರಾಜ್ಯದಲ್ಲಿ ಈ ರೀತಿಯ ಉಚಿತ ಯೋಜನೆ ಕೊಟ್ಟಿಲ್ಲ. ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ನಮ್ಮ ಸರ್ಕಾರ ಸಾರಿಗೆ ನಿಗಮಗಳಿಗೆ ಇಲ್ಲಿಯವರೆಗೆ 10 ಸಾವಿರ 500 ಕೋಟಿ ಹಣವನ್ನು ಕೊಟ್ಟಿದ್ದು, ಇದಕ್ಕಾಗಿ ಈ ವರ್ಷದ ಬಜೆಟನಲ್ಲಿ 6000 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಪ್ರಯಾಣಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಹೊಸ ಬಸ್ಸುಗಳನ್ನು ಖರೀದಿಮಾಡಲಾಗುತ್ತಿದೆ ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿ, ಯಲಬುರ್ಗಾ ಕ್ಷೇತ್ರದಲ್ಲಿ ಬಸ್ ನಿಲ್ದಾಣ. ಶಾಲಾ-ಕೊಠಡಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಷ್ಟು ಇರಬೇಕು ಅದಕ್ಕಿಂತ ಹೆಚ್ಚು ಆಗಿವೆ. ಜಿಲ್ಲಾ ಕೇಂದ್ರದಲ್ಲಿ ಇರುವ ಸೌಲಭ್ಯಗಳನ್ನು ಇಲ್ಲಿನ ಜನರಿಗೆ ಸಿಗಬೇಕೆಂದು ರಾಯರೆಡ್ಡಿ ಸಾಹೇಬರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈಗ ಜನರು ನಾಲ್ಕು ಪಟ್ಟು ತಿರುಗಾಡುತ್ತಿದ್ದಾರೆ. ಒಂದೇ ಒಂದು ಸಮಸ್ಯೆಗಳಾಗದಂತೆ ಸಾರಿಗೆ ಸಚಿವರು ಅದನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ. ಅವರು ಮುಜರಾಯಿ ಸಚಿವರಾಗಿ ಮೊದಲ ಬಾರಿಗೆ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಗರ್ಭ ಗುಡಿಗೆ 10 ಕೋಟಿ ಹಣ ನೀಡಿದ್ದರು. ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಪೋಷಲ್ ಒಂದೇ ಸಲಕ್ಕೆ ತನ್ನ 100 ಕೋಟಿ ಅನುದಾನವನ್ನು ಹುಲಿಗೆಮ್ಮ ದೇವಸ್ಥಾನಕ್ಕೆ ನೀಡುತ್ತೆನೆ ಎಂದು ರಾಮಲಿಂಗಾರೆಡ್ಡಿ ಸಾಹೇಬರು ಹೇಳಿದ್ದರು ಎಂದರು.
ಈ ಕಾರ್ಯಕ್ರಮದಲ್ಲಿ ಬೇವೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂದಮ್ಮ ಗವಿಸಿದ್ದಪ್ಪ ಬಳಿಗಾರ, ಜಿಲ್ಲಾಧಿಕಾರಿ ನಲಿನ್ ಅತುಲ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವ್ಯವಸ್ಥಾಪಕ ನಿರ್ದೆಶಕರಾದ ರಾಚಪ್ಪ ಎಮ್., ಕಲಬುರಗಿ ಮುಖ್ಯ ಕಾಮಗಾರಿ ಅಭಿಯಂತರಾದ ಚನ್ನನ ಬೋರಯ್ಯ. ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಮ್.ವೆಂಕಟೇಶ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರಾದ ಹೇಮಂತ್, ಕೊಪ್ಪಳ ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ, ಇತರೆ ಗಣ್ಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.