ರಾಷ್ಟ್ರಮಟ್ಟದಉತ್ತಮಎನ್.ಎಸ್.ಎಸ್. ಸ್ವಯಂ ಸೇವಕಿ ಪ್ರಶಸ್ತಿ
ಕೊಪ್ಪಳ ಏ. ೦೩:ಕರ್ನಾಟಕರಾಜ್ಯಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರದಲ್ಲಿಒಂದು ವಾರದ’ರಾಷ್ಟ್ರೀಯ ಭಾವೈಕ್ಯತೆ ಶಿಬಿರ’ವು ಕಳೆದ ಮಾರ್ಚ ತಿಂಗಳಿನಲ್ಲಿ ಜರುಗಿತ್ತು. ಈ ಶಿಬಿರದಲ್ಲಿ ರಾಷ್ಟ್ರದ ಸುಮಾರು ೩೨ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಎನ್.ಎಸ್.ಎಸ್. ಸ್ವಯಂ ಸೇವಕಿಯರು ಭಾಗವಹಿಸಿದ್ದರು. ಸದರಿ ಶಿಬಿರಕ್ಕೆ ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಮೂರುಎನ್.ಎಸ್.ಎಸ್. ಸ್ವಯಂ ಸೇವಕಿಯರು ಭಾಗವಹಿಸಿದ್ದರು. ಅವರಲ್ಲ್ಲಿ ಬಿ.ಎಸ್ಸಿ ೪ನೇ ಸೆಮ್ ವಿದ್ಯಾರ್ಥಿನಿ ಕು. ಸಹನಾ ಅವರು ’ಉತ್ತಮಎನ್.ಎಸ್.ಎಸ್. ಸ್ವಯಂ ಸೇವಕಿ’ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಜೊತೆಗೆಬಿ.ಎ. ೪ನೇ ಸೆಮ್ ವಿದ್ಯಾರ್ಥಿನಿಕು. ಕಾವೇರಿ ಮತ್ತುಬಿ.ಕಾಮ್. ೪ನೇ ಸೆಮ್ ವಿದ್ಯಾರ್ಥಿನಿ ಕು. ಅಮೃತಇವರಿಗೆ ’ಉತ್ತಮ ಶಿಸ್ತಿನ ಎನ್.ಎಸ್.ಎಸ್. ಸ್ವಯಂ ಸೇವಕಿಯರು’ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದರಿ ಸ್ವಯಂ ಸೇವಕಿಯರಿಗೆ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ. ಆರ್. ಮರೇಗೌಡ, ಪ್ರಾಚಾರ್ಯರಾದಡಾ. ಚನ್ನಬಸವ, ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಶರಣಪ್ಪಚೌವ್ಹಾಣ ಮತ್ತುಡಾ. ಜಾಲಿಹಾಳ ಶರಣಪ್ಪ, ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.