‘ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಅರ್ಹ ರೈತರು, ಅಲುಮಿನಿ ಅಸೋಶಿಯೇಷನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ರವರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಏಪ್ರಿಲ್ 9ರ ಒಳಗೆ `ದಿ ಸೆಕ್ರೇಟರಿ, ಅಲುಮಿನಿ ಅಸೋಶಿಯೇಷನ್ ಯುಎಎಸ್ ಕನ್ವೆನ್‌ಷನ್ ಸೆಂಟರ್, ಹೆಬ್ಬಾಳ, ಬೆಂಗಳೂರು-560024′ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಪ್ರಶಸ್ತಿಯ ಮೊತ್ತವು ರೂ. 25000 ಗಳು ಇರುತ್ತದೆ. ಅರ್ಜಿ ನಮೂನೆಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.