ಕಸಾಪ ಜಿಲ್ಲಾಧ್ಯಕ್ಷ, ತಾಲ್ಲೂಕು ಅಧ್ಯಕ್ಷ ನೇತೃತ್ವ ಸಹಕಾರ ನೀಡಿದ ಇಲಾಖಾ ಅಧಿಕಾರಿಗಳಿಗೆ ಗೌರವ

0

Get real time updates directly on you device, subscribe now.


ಗಂಗಾವತಿ:
ನಗರದ ಸಕರ್ಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಚರ್್ 27 ಮತ್ತು 28ರಂದು ನಡೆದ ಕೊಪ್ಪಳ ಜಿಲ್ಲಾಮಟ್ಟದ 13ನೇ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಿದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಬುಧವಾರ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕನ್ನಡದ ಶಾಲು ಹೊದಿಸಿ, ಹೂವಿನ ಹಾರ ಹಾಕಿ, ಸ್ಮರಣಿಕೆ ಮತ್ತು ಪುಸ್ತಕ ನೀಡಿ ಗೌರವಿಸಲಾಯಿತು.
ಗಂಗಾವತಿ ಉಪ ಪೊಲೀಸ್ ವಿಭಾಗಾಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ್, ಸಂಚಾರಿ ಠಾಣೆಯ ಪಿಎಸ್ಐ ಶಾರದಮ್ಮ, ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮಾಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಊಷಾ ಮುಜುಂದಾರ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಆರೋಗ್ಯ ಇಲಾಖೆಯ ಆಯುಷ್ ಅಧಿಕಾರಿ ಗುರುರಾಜ ಹುಮಚಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕಿ ಡಾ. ಶೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಯಶ್ರೀ,
ತಾಲ್ಲೂಕು ಪಂಚಾಯಿತಿ ನರೇಗಾ ವಿಭಾಗದ ಸಹಾಯಕ ನಿದರ್ೇಶಕ ಮಹಾಂತಗೌಡ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಸಾಪದ ತಾಲ್ಲೂಕು ಅಧ್ಯಕ್ಷ ರುದ್ರೇಶ ಮಡಿವಾಳ, ನಗರದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನಕ್ಕೆ ಸಿಕ್ಕಿದ್ದು ಅತ್ಯಲ್ಪ ಅವಧಿ. ಎಲ್ಲಾ ಮುನಿಸುಗಳನ್ನು ಬಿಟ್ಟು ಎಲ್ಲಾ ಕನ್ನಡದ ಮನಸ್ಸುಗಳು ಹಗಲಿರುಳು ಶ್ರಮಿಸಿದ್ದಾರೆ.
ಮುಖ್ಯವಾಗಿ ಸಮ್ಮೇಳನದ ಸಂದರ್ಭದಲ್ಲಿ ನಾನಾ ಇಲಾಖೆಯಿಂದ ಮಳಿಗೆಗಳನ್ನು ಹಾಕುವ ಮೂಲಕ ಮೆರಗು ತಂದಿದ್ದಾರೆ. ಹೀಗಾಗಿ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಿದವರಿಗೆ ಗೌರವಿಸಲಾಗುತ್ತಿದೆ ಎಂದು ರುದ್ರೇಶ ಹೇಳಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದಶರ್ಿಗಳಾದ ಶ್ರೀನಿವಾಸ ನಾಯ್ಡು, ಶರಣಪ್ಪ ಮಟ್ಟಿ, ಮಾಧ್ಯಮ ಪ್ರತಿನಿಧಿ ಶ್ರೀನಿವಾಸ ಎಂ.ಜೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಮಲ್ಲಿಕಾಜರ್ುನ ಸುಂಕದ, ಮಲ್ಲಿಕಾಜರ್ುನ ಪೊಲೀಸ್ ಪಾಟೀಲ್, ನಾಗಲಕ್ಷ್ಮಿ, ಮರಿದೇವಿ ಇತರರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!