ರಂಜಾನ್ ಮತ್ತು ಯುಗಾದಿ ಹಬ್ಬದ ನಿಮಿತ್ಯ ಕೆ.ಎಂ.ಸಯ್ಯದ್ ರಿಂದ ಕಿಟ್ ವಿತರಣೆ
ಕೊಪ್ಪಳ : ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಳೆ ಬಂಡಿಹಾರ್ಲಪುರ . ಹೊಸ ಬಂಡಿಹರ್ಲಾಪುರ ಅಗಳಕೇರಾ. .ಹುಲಿಗಿ. ಹಿಟ್ನಾಳ. ನಿಂಗದಳ್ಳಿ. ಮುನಿರಾಬಾದ್ ಸುತ್ತಮುತ್ತಲ ಗ್ರಾಮಗಳಲ್ಲಿ ಕೆ.ಎಂ.ಎಸ್. ಫೌಂಡೇಶನ್ ವತಿಯಿಂದ ಹಬ್ಬದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಕಿಟ್ ಗಳನ್ನು ವಿತರಿಸುತ್ತಾ ಬಂದಿರುವ ಕೆ.ಎಂ.ಎಸ್ ಪೌಂಡೇಷನ್ ನ ಕೆ.ಎಂ.ಸಯ್ಯದ್ ಇಂದೂ ಸಹ ಕಿಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಬದಲ್ಲಿ ಇರ್ಪಾನ್ ಪಾಷಾ,ಸೇರಿದಂತೆ ಹಾಗೂ ಊರಿನ ಹಿರಿಯರು ಯುವಕರು ಇನ್ನಿತರರು ಪಾಲ್ಗೊಂಡಿದ್ದರು.