ಕವಿತೆಗಳಲ್ಲಿ ಹೊಸತನ ಮೂಡಬೇಕಿದೆ – ವಿಜಯ ಅಮೃತ್ ರಾಜ್

0

Get real time updates directly on you device, subscribe now.

ಕೊಪ್ಪಳ : ನಾವು ಹಳೆಯ ಸಾಹಿತ್ಯದ ಪ್ರಕಾರಗಳನ್ನು ಉಳಿಸುವುದರ ಜೊತೆಗೆ ಹೊಸ ರೀತಿಯ ಸಾಹಿತ್ಯ ಪ್ರಕಾರವನ್ನು ಅಳವಡಿಸಿಕೊಳ್ಳುವ ಮೂಲಕ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬರಹಗಾರ ವಿಜಯ್ ಅಮೃತ್ ರಾಜ್ ಹೇಳಿದರು.

ಯುಗಾದಿ ಹಾಗೂ ರಂಜಾನ್ ಹಬ್ಬದ ನಿಮಿತ್ತ ಕವಿ ಸಮೂಹ ಕೊಪ್ಪಳ ಬಹುತ್ವ ಭಾರತ ಬಳಗ ಕೊಪ್ಪಳದ ಸಂಯುಕ್ತ ಆಶಯದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕವಿತೆಗಳಲ್ಲಿ ಹೊಸತನ ಬರಬೇಕಿದೆ ಮತ್ತೊಮ್ಮೆ ಜನಪದ ಸಾಹಿತ್ಯ ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ. ಕನ್ನಡದಲ್ಲಿ ವಿಟ್ ಪ್ರಕಾರ ಇದುವರೆಗೆ ಬಂದಿಲ್ಲ. ಕೌಬಾಯ್ ಪದ್ಯಗಳು ಬರೆಯುವ ಪ್ರಯತ್ನ ನಡೆಯಬೇಕಿದೆ. ಜೊತೆಗೆ ನಿರಂತರವಾಗಿ ಸಾಹಿತ್ಯ ವಿಚಾರಗಳು ಚರ್ಚೆ ಆಗಬೇಕಿದೆ ಎಂದು ಕಿವಿಮಾತು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಯನ್ನು ವಾಚನ ಮಾಡಿದರು. ಅರುಣ ನರೇಂದ್ರ ರಂಜಾನ್ ಹಾಗೂ ಯುಗಾದಿ ಕುರಿತ ಕವಿತೆಯನ್ನು ವಾಚನ ಮಾಡಿದರು, ಪುಷ್ಪಲತಾ ಏಳುಭಾವಿ- ನನ್ನ ಕೊಂದುಬಿಡು ಹಾಗೂ ಅಂದು ಮತ್ತು ಇಂದು, ಶ್ರೀನಿವಾಸ್ ಚಿತ್ರಗಾರ್ – ಡುಬ್ಬ ಚಪ್ಪರಿಸುವವರು ಹಾಗೂ ಕಟ್ಟ ಕಡೆಯ ಹಾದಿ, ಜಿಎಸ್ ಗೋನಾಳ್ – ಶಾಂತಿ ಪ್ರೀತಿ ಸೌಹಾರ್ದತೆ ರಂಜಾನ್ ಮತ್ತು ಯುಗಾದಿ, ವಿಜಯ್ ಅಮೃತ್ ರಾಜ್ — ಯುಗಾದಿ ಹಾಗೂ ರಂಜಾನ್, ಪೀ ಎಸ್ ಅಮರದೀಪ್ – ಬೇವು ಬೆಲ್ಲ , ಖಾಲಿ ಬಿಳಿಹಾಳೆ, ಬಿಎಸ್ ವೀರಾಪುರ್ – ಕೊಪ್ಪಳ ಉಳಿಸೋಣ ಬನ್ನಿ, ಯುಗಾದಿ ಹರುಷ ತರಲಿ, ಬೀರಪ್ಪ ಅಂಡಗಿ – ಕಿವಿ , ಅನಸೂಯ ಜಾಗೀರ್ದಾರ್ – ಅಳಲಾರದ ಮಕ್ಕಳು ಹಾಗೂ ಯುಗಾದಿ ಚೈತ್ರಳ ಸ್ವಗತ ಕವಿತೆ, ಸಿರಾಜ್ ಬಿಸರಳ್ಳಿ – ದ್ವಿಪದಿಗಳು , ನನಗೆ ನಿನ್ನ ದರ್ಶನ ಭಾಗ್ಯವಿಲ್ಲ ಕವಿತೆ ಗಳನ್ನು ವಾಚನ ಮಾಡಿದರು.

ವಾಚನ ಮಾಡಿದ ಕವಿತೆಗಳ ಕುರಿತು ಮಾತನಾಡಿದ ಕವಿ ಪಿಎಸ್ ಅಮರದೀಪ್ ಎಲ್ಲರೂ ಸಾಂದರ್ಭಿಕ ಕವಿತೆಗಳನ್ನು ವಾಚನ ಮಾಡುವುದರ ಮೂಲಕ ಕವಿಗೋಷ್ಠಿಯ ಅಂದವನ್ನು ಹೆಚ್ಚಿಸಿದ್ದೀರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೌಲಾ ಹುಸೈನ್ ತಳಕಲ್, ಮಂಜು ತೋಟಗಾರ , ನರೇಂದ್ರ ಪಾಟೀಲ್ ಸೇರಿದಂತೆ ಇತರರು ಉಪಸಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!