ಗಮನ ಸೆಳೆದ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಮಳಿಗೆ
.![]()

ಗಂಗಾವತಿ: ಜಿಲ್ಲೆಯಾಧ್ಯಂತ ಏಕಬಳಕೆ ಪ್ಲಾಸ್ಟಿಕ್ ಕಟ್ಟುನಿಟ್ಟಾಗಿ ನಿಷೇಧಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನದ ವತಿಯಿಂದ ಒತ್ತಾಯಿಸಲಾಯಿತು.
ಸಮ್ಮೇಳನದಲ್ಲಿ ಎರಡು ದಿನಗಳ ಸ್ಟಾಲ್ (ಮಳಿಗೆ) ಹಾಕಿ ಜನರಿಗೆ ಮಾರಕ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪ್ಲಾಸ್ಟಿಕ್ ರಹಿತ (ಕಾಂಪೋಸ್ಟೇಬಲ್) ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಮಾರಾಟ ಮಳಿಗೆಗೆ ಮಾಜಿ ವಿಧಾನಪರಿಷತ್ ಸದಸ್ಯರಾದ ಹೆಚ್.ಆರ್. ಶ್ರೀನಾಥ್ ಅವರು ಆಗಮಿಸಿ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ, ನೈಸರ್ಗಿಕವಾಗಿ ತಯಾರಿಸಿದ ಬ್ಯಾಗ್‌ಗಳನ್ನು ಉಪಯೋಗಿಸಬೇಕು ಎಂದು ಕರೆಕೊಟ್ಟರು.
ಅಲ್ಲದೇ ಹುಲಿಕಲ್ ನಟರಾಜ, ಗಂಗಾವತಿ ಪ್ರಾಣೇಶ, ನರಸಿಂಹ ದರೋಜಿ, ಓಂ ಶಾಂತಿ ಬ್ರಹ್ಮಕುಮಾರಿ ವಿದ್ಯಾಲಯದ ಸುಲೋಚನಾ ಅಕ್ಕನವರು, ಶೈಲಜಾ ಹಿರೇಮಠ, ಡಾ. ಶರಣಬಸಪ್ಪ ಕೋಲ್ಕಾರ, ಜಾಜಿ ದೇವೆಂದ್ರಪ್ಪ, ರಮೇಶ ಗಬ್ಬೂರು, ಟಿ. ಆಂಜನೇಯ, ರಾಘವೇಂದ್ರ ಶ್ರೇಷ್ಠಿ, ಚಂದ್ರಪ್ಪ ಉಪ್ಪಾರ, ಸಹಕಾರ ಸಂಘದ ಸುಧಾಕರ ಕಲ್ಮನಿ, ಕಾರ್ಮಿಕ ಬಳಗದ ಪಂಪಾಪತಿ ಇಂಗಳಗಿ, ಶಿವಕುಮಾರಗೌಡ, ಬಸಪ್ಪ ನಾಗೋಲಿ, ಶ್ರೀಧರ ಕೇಸರಹಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಸೇರಿದಂತೆ ಇತರ ಪರಿಸರ ಪ್ರೇಮಿಗಳು ಭೇಟಿ ನೀಡಿ ಪ್ಲಾಸ್ಟಿಕ್ ಮುಕ್ತ ಅಭಿಯಾನದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿಯಾನದ ಸಂಚಾಲಕರಾದ ಡಾ|| ಶಿವಕುಮಾರ ಮಾಲಿಪಾಟೀಲ್, ಮಂಜುನಾಥ ಗುಡ್ಲಾನೂರು, ಮೈಲಾರಪ್ಪ ಬೂದಿಹಾಳ, ಹರನಾಯಕ, ಸೌಮ್ಯ, ಶ್ರೀಹರಿ ಭಂಡಾರಕರ್, ರಾಘವೇಂದ್ರ ತೂನ, ವಿಶ್ವನಾಥ ಸೋನಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
dr shivakumar_malipatil_plastic
shailaja_hiremath, shivaraj_tangadagi_gangavati_