ವಕ್ಫ್ ತಿದ್ದುಪಡಿ ಮಸೂದೆ ೨೦೨೪ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿರೋಧ
ಕೊಪ್ಪಳ : ನಗರದ ದಿಡ್ಡಿಕೇರಿ ಮಸೀದಿಯಲ್ಲಿ ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆ ೨೦೨೪ ವಿರೋಧಿಸಿ ತಮ್ಮ ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿರೋಧ ವ್ಯಕ್ತಪಡಿಸಿ ಪೇಶ್ ಇಮಾಮ್ ಮೌಲಾನಾ ಹಾಫಿಝ್ ಮೊಹಮ್ಮದ್ ಮೊಯೀದ್ದೀನ್ ಬಡೆಘರ ಅವರ ನೇತೃತ್ವದಲ್ಲಿ ಶುಕ್ರವಾರದ ನಮಾಝ್ ನಿರ್ವಹಿಸಿದರು.
ವಕ್ಫ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕೊಪ್ಪಳದಲ್ಲಿ ಇಂದು ಮುಸ್ಲಿಂ ಮುಖಂಡರು ಕೈಗೆ ಕಪ್ಪು ರಿಬ್ಬನ್ ಕಟ್ಟಿಕೊಳ್ಳುವ ಮೂಲಕ ಮೌನ ಪ್ರತಿರೋಧದೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು.
ಇಂದು ಎಲ್ಲ ಮುಸ್ಲಿಂ ಬಾಂಧವರು ತಮ್ಮ ಕೈಗೆ ಕಪ್ಪು ರಿಬ್ಬನ್ ಕಟ್ಟಿಕೊಳೋ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಿದರು. ವಿವಿಧ ಮಸೀದಿಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕಪ್ಪು ರಿಬ್ಬನ್ ಕೈಗೆ ಕಟ್ಟಿಕೊಳ್ಳುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಎಸ್ ಆಸಿಫ್ ಅಲಿ, ಕೆಎಂ ಸೈಯದ್, ಕಾಟನ್ ಪಾಷಾ, ಸಲೀಂ ಅಳವಂಡಿ , ಮಾನ್ವಿ ಪಾಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.