ಭಾಗ್ಯನಗರ: ಉದ್ದಿಮೆದಾರರು ಹಾಗೂ ಆಸ್ತಿಗಳ ಮಾಲೀಕರು ತೆರಿಗೆ ಭರಿಸಿ-ಮುಖ್ಯಾಧಿಕಾರಿ
ನಾಲ್ಕುದಿಕ್ಕು ಸುದ್ದಿ
ಕೊಪ್ಪಳ ಮಾರ್ಚ್ ೨೮ : ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ಹಾಗೂ ಆಸ್ತಿಗಳ ಮಾಲೀಕರು ತೆರಿಗೆ ಭರಿಸುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಪ್ರತಿಯೊಬ್ಬ ಉದ್ದಿಮೆದಾರರು ಪುರಸಭೆ ಅಧಿನಿಯಮ ೧೯೬೪ ರ ಕಲಂ ೨೫೬ ರಡಿ ಉದ್ದಿಮೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಸನ್ ೨೦೨೫-೨೬ನೇ ಸಾಲಿನ ಉದ್ದಿಮೆ ಪರವಾನಿಗೆ ಪಡೆಯಬೇಕು ಮತ್ತು ಪ್ರತಿವರ್ಷ ಪರವಾನಿಗೆಯನ್ನು ನವೀಕರಣ ಮಾಡಿಸಿಕೊಳ್ಳಬೇಕು. ಅದರೊಂದಿಗೆ ನೀರಿನ ಕರ ಹಾಗೂ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಭರಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.