ಮಹಿಳೆ ಅಬಲೆ ಅಲ್ಲ ಸಬಲೆ – ನ್ಯಾ. ಸಿ.ಚಂದ್ರಶೇಖರ್

Get real time updates directly on you device, subscribe now.

: ಇಂದಿನ ಮಹಿಳೆ ಅಬಲೆ ಅಲ್ಲ ಸಬಲೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ್ ಹೇಳಿದರು.
 ಅವರು ಸೋಮವಾರ ಕಿನ್ನಾಳ ಗ್ರಾಮದಲ್ಲಿ ಕಿನ್ನಾಳ ಗ್ರಾಮ ಪಂಚಾಯತ ವತಿಯಿಂದ ಆಯೋಜಿಸಿದ ಮಹಿಳಾ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮನವಿಯ ಮೇರೆಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ದತ್ತು ಗ್ರಾಮ ಕಿನ್ನಾಳಕ್ಕೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 1.56 ಕೊಟಿ ಸಾಮಗ್ರಿ ಆದಾರಿತ ಕಾಮಗಾರಿ ಮಂಜುರಾಗಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನರೇಗಾ ಯೊಜನೆಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರದಲ್ಲಿ ಡೆಲ್ ಸಹಯೋಗದಲ್ಲಿ ಪ್ರಾರಂಭವಾದ ಉಚಿತ ಕಂಪ್ಯೂಟರ್ ತರಭೇತಿ ಕೇಂದ್ರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ್, ಕಿನ್ನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ವೇತಾ ರಾಘವೇಂದ್ರ ಡಂಬಳ, ಉಪಾಧ್ಯಕ್ಷರಾದ ದುರಗಪ್ಪ ಡಂಬರ, ಸದಸ್ಯರಾದ ಕಾಳಪ್ಪ ಬಿದರೂರ, ಹನುಮೇಶ ಕೋವಿ, ಪ್ರಶಾಂತ ಕುಲಕರ್ಣಿ, ಮಂಜುನಾಥ ಕುರಬರ, ಮೈಲಾರಪ್ಪ ಉದ್ದಾರ, ಧರ್ಮಣ್ಣ ಮೇಟಿ, ಮಂಜುನಾಥ ಉದ್ದಾರ, ಸಣ್ಣೆಪ್ಪ, ಮಾರುತಿ ಹಂಚಿನಾಳ, ಶಕುಂತಲಾ, ಮೇಗಾ ಹಿರೇಮಠ, ಕಮಲಮ್ಮ, ಪೂರ್ಣಿಮಾ, ಶಶಿರೆಕಾ, ದೀಪಾ, ಕಸ್ತೂರೆಮ್ಮ, ಶಿಲ್ಪಾ ಉಪ್ಪಾರ, ವೈದ್ಯಾಧಿಕಾರಿಗಳು ,ಸಿಡಿಪಿಓ, ಎಲ್ಲಾ ಪ್ರಾಥಮಿಕ & ಪ್ರೌಡ ಶಾಳಾ ಮುಖ್ಯೊಪಾದ್ಯಯರು, ಪಾಲ್ಗೊಂಡಿದ್ದರು. ಪಂಚಾಯತ ಅಭಿವೃಧ್ಧಿ ಅಧಿಕಾರಿ ಪರಮೇಶ್ವರಯ್ಯ ಉಪಸ್ಥಿತರಿದ್ದರು,
ಗ್ರಾ.ಪಂ ಕಾರ್ಯದರ್ಶಿ ನೀಲಮ್ಮ ಪ್ರಾಸ್ಥಾವಿಕವಾಗಿ ಮಾತನಾಡಿದರೆ, ದ್ವಿ.ದ.ಲೇ. ಸಹಾಯಕರಾದ ತಾಜುದ್ದಿನ್ ಕಾರ್ಯಕ್ರಮವನ್ನು ನಿರುಪಿಸಿದರು.

Get real time updates directly on you device, subscribe now.

Comments are closed.

error: Content is protected !!