ರಾಜ್ಯದಲ್ಲಿ ಸರ್ಕಾರ ಆರು ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ – ರಾಜಶೇಖರ್ ವಿ,ಎನ್.

Get real time updates directly on you device, subscribe now.

    ಕೊಪ್ಪಳ : ರಾಜ್ಯದಲ್ಲಿ ಸರ್ಕಾರ ಆರು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ,ಎನ್, ರಾಜಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
     ನಗರದ ಪ್ರವಾಸಿ ಮಂದಿರದಲ್ಲಿ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು 75 ರ ಸಭೆ ಬಳಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ,ಎನ್,ರಾಜಶೇಖರ್ ಮುಂದುವರೆದು ಮಾತನಾಡಿ ಶಾಲೆಗಳನ್ನು ಮರ್ಜ್ ಮಾಡಲು ನಿರ್ಧಾರ ತೆಗೆದುಕೊಂಡಿದೆ,ಮರ್ಜ್ ಅಂದರೆ ಇದು ವಾಸ್ತವ್ಯದಲ್ಲಿ ಆರು ಸಾವಿರ ಸರ್ಕಾರಿ ಶಾಲೆಗಳನ್ನು ಮಚ್ಚಲ್ಪಡುತ್ತದೆ, ಇದು ಬಹಳ ಅಘಾತಕಾರಿ ಹಾಗೂ ನೋವಿನ ವಿಷಯ, ಸರ್ಕಾರ ಹೇಳುತ್ತಿರುವುದು ಹತ್ತು ಮಕ್ಕಳಿಗಿಂತ ಕಡಿಮೆ ಸಂಖ್ಯೆ ಇರುವ ಪ್ರವೇಶಕ್ಕೆ ಬರುವ ನಿರೀಕ್ಷೆ ಇಲ್ಲದ್ದರಿಂದ ಶಾಲೆಗಳನ್ನು ಮರ್ಜ್ ಮಾಡಲಾಗುತ್ತಿದೆ, ಅದು ಅಲ್ಲ, ಮೂಲಭೂತ ಪ್ರಶ್ನೆಯಾಗಬೇಕಿರೋದು,ಯಾಕೆ ಹತ್ತು ವಿದ್ಯಾರ್ಥಿಗಳು ಇಲ್ಲ,ಯಾಕೆ ಶಿಕ್ಷಣ ಗುಣ ಮಟ್ಟ ಕುಸಿದಿದೆ ? ಅದು ಮುಖ್ಯ ಪ್ರಶ್ನೆ ಆಗಬೇಕು, ಸರ್ಕಾರಿ ಶಾಲೆಗಳ ಈ ದುಸ್ಥಿತಿಗೆ ಕಾರಣ ಸಾವಿರಾರು ಶಿಕ್ಷಕರ ಹುದ್ದೆಗಳ ಖಾಲಿ ಬಿದ್ದಿವೆ, ಆ ಹುದ್ದೆಗಳಿಗೆ ಶಿಕ್ಷಕರ ಭರ್ತಿ ಮಾಡಬೇಕು, ರಾಜ್ಯ ಸರ್ಕಾರವೇ ಹೇಳಿಕೊಳ್ಳುವ ಪ್ರಕಾರ ಸರಿಸುಮಾರು 59 ಸಾವಿರ ಶಿಕ್ಷಕರ ಹುದ್ದೆ ಖಾಲಿ ಬಿದ್ದಿವೆ ಅದನ್ನು ತುಂಬುತ್ತಿಲ್ಲ,ಈ ತಕ್ಷಣಕ್ಕೆ ಒಂದು ತರಗತಿಗೆ ಒಬ್ಬ ಶಿಕ್ಷಕ ಲೆಕ್ಕ ತಗೊಂಡರೆ ಕರ್ನಾಟಕದಲ್ಲಿ ಎರಡುವರೆ ಲಕ್ಷ ಶಿಕ್ಷಕರನ್ನು ಭರ್ತಿ ಮಾಡಬೇಕಾಗುತ್ತದೆ, ಅದನ್ನು ಮಾಡುತ್ತಿಲ್ಲ, ಅತಿಥಿ ಶಿಕ್ಷಕರು 30 ರಿಂದ 40,000 ಸಾವಿರ ಜನರಿದ್ದಾರೆ, ಅವರನ್ನು ಕ್ರಮಬದ್ಧಗೊಳಿಸುತ್ತಿಲ್ಲ, ಇದು ತುಂಬಾ ನೋವಿನ ವಿಷಯ, ಇವತ್ತಿನ ಸರ್ಕಾರ ಅಲ್ಲ,ಇನ್ನುವರೆಗೆ ಬಂದಂತಹ ಯಾವುದೇ ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬರಲಿ,ಇವರ ಶಿಕ್ಷಣ, ಆರೋಗ್ಯ ಆದ್ಯತೆ ಅಲ್ಲವೇ ಅಲ್ಲ, ಮೊನ್ನೆ ಹೋದ ವಾರ ವಿಧಾನ ಸಭೆಯಲ್ಲಿ ಚರ್ಚೆಗೆ ಬಂದಿತ್ತು, ಶಿಕ್ಷಣ ಸಚಿವರು ಹೇಳಿದ ಪ್ರಕಾರ 25 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳ ಸಂಖ್ಯೆ ಹದಿನೇಳು ಸಾವಿರ ಇದೆ ಎಂದು ಹೇಳಿದ್ದಾರೆ, ಒಂದೊಂದು ಹಳ್ಳಿಗೆ ಮಾದರಿಯ ಶಾಲೆ ಮಾಡಬೇಕಾದರೆ ಈ ಶಾಲೆಗಳನ್ನು ಮುಚ್ಚ ಬೇಕಾಗಿದೆ ಎಂದು ಹೇಳಿದ್ದಾರೆ, ಬಹಳ ನೋವಿನ ವಿಷಯ ಎಂದರೆ ಬಿಜೆಪಿಯ ಶಾಸಕರು,ಬೇರೆ ಪಕ್ಷಗಳ ಶಾಸಕರು ಎದ್ದು ನಿಂತು ದಯವಿಟ್ಟು ನಮ್ಮೂರಿಗೆ ಬನ್ರಿ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚೋಣ ಎಂದು ಪೈಪೋಟಿಯಲ್ಲಿ ಹೇಳುತ್ತಿದ್ದರು, ಇವರು ತಮ್ಮ ಖಾಸಗಿ ಆಸ್ತಿಯಂತೆ ಮಾತನಾಡುತ್ತಿದ್ದರು, ಇದು ಎಂಥಾ ದುರ್ಗತಿ ಬಂದಿದೆ ಎಂದು ತೋರಿಸುತ್ತದೆ, ಶಾಲೆ ಮುಚ್ಚುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ದಂತೆ ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಎಲ್ಲರೂ ಒಂದಾಗಿ ಬಿಟ್ಟಿದ್ದಾರೆ, ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿ 2020 ಏನಿದೆ ಅದರ ಪ್ರಮುಖ ಶಿಫಾರಸುಗಳಲ್ಲಿ ಒಂದು, ನಾನು ಶಿಕ್ಷಣ ಉಳಿಸಿ ಹೋರಾಟ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ಕೇಳಲು ಇಷ್ಟಪಡ್ತೀನಿ, ನೀವು ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುತ್ತೇವೆ ಅಂತ ಹೇಳುತ್ತೀರಿ, ರಾಜ್ಯಕ್ಕೊಂದು ಶಿಕ್ಷಣ ನೀತಿ ತರಬೇಕು ಅಂತ ಹೇಳುತ್ತೀರಿ, ಇನ್ನೊಂದು ಕಡೆ ನೀವು ಅದೇ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸು ಶಾಲೆಗಳನ್ನು ಮರ್ಜ್ ಮಾಡುವುದು ಅಂದರೆ ಶಾಲೆಗಳನ್ನು ಮುಚ್ಚಲು ಹೊರಟಿದ್ದೀರಿ, ಏನು ವಿರೋಧ ನಿಮ್ಮದು ? ಇದು ಬಾಯಿಯೊಪಚಾರಕ್ಕೆ ಅಷ್ಟೇ ಹೇಳುದಾ ? ಸರ್ಕಾರಿ ಶಾಲೆಗಳನ್ನು ಉಳಿಸಬೇಕು,ಸರ್ಕಾರಿ ಶಾಲೆಗಳನ್ನು ಬೆಳೆಸಬೇಕು ಅಂದರೆ ಶಿಕ್ಷಕರನ್ನು ನೇಮಕ ಮಾಡಬೇಕು,ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಶಿಕ್ಷಕರಿಗೆ ಶಿಕ್ಷಣೇತರ ಪಠ್ಯೇತರ ಕೆಲಸಗಳನ್ನು ಕೊಡಬಾರದು, ಒಂದನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಗಬೇಕು, ಮೌಲ್ಯಮಾಪನ ನಡೆಯಬೇಕು, 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಮಾಡಬಾರದೆಂಬ ನೀತಿ ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿದೆ, ಹೀಗಾಗಿ ಶಿಕ್ಷಕರಿಗೂ ಜವಾಬ್ದಾರಿ ಇಲ್ಲದಂತಾಗಿದೆ, ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬೇಕಂತಲ್ಲ, ಪರೀಕ್ಷೆಗಳನ್ನು ನಡೆಸಬೇಕು,ಗಂಭೀರತೆ ಇರಬೇಕು, ಅಂದಾಗ ಮಕ್ಕಳಿಗೆ,ಶಿಕ್ಷಕರಿಗೂ ಜವಾಬ್ದಾರಿ ಬರುತ್ತದೆ, ಇದಕ್ಕೆ ಪ್ರಮುಖವಾಗಿ ನಮ್ಮ ಶಿಕ್ಷಣ ಉಳಿಯ ಬೇಕೆಂದರೆ ರಾಜ್ಯ ಸರ್ಕಾರ ಬಜೆಟ್ಟಿನಲ್ಲಿ ಕನಿಷ್ಠ 30ರಷ್ಟು, ಕೇಂದ್ರ ಸರ್ಕಾರ 10% ರಷ್ಟು ಶಿಕ್ಷಣಕ್ಕೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
    ಈ ಸಂದರ್ಭದಲ್ಲಿ ಶಾಲಾ ಪಾಲಕರ ಹೋರಾಟ ಸಮಿತಿ ಸಂಚಾಲಕ ಎಸ್,ಎ,ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೋಲಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಮಖಬೂಲ್ ರಾಯಚೂರು, ಶಿವಪ್ಪ ಹಡಪದ್ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!