ಪರಿಸರ ಜಾಗೃತಿ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿ – ನಜೀರ್ ಸಾಬ್ ಮೂಲಿಮನಿ

Get real time updates directly on you device, subscribe now.

Koppal ಕೊಪ್ಪಳದ ಸುತ್ತಮುತ್ತಲಿನ ಗ್ರಾಮಗಳ ಉಕ್ಕು ಕಾರ್ಖಾನೆಗಳ ವಾಯು ಮಾಲಿನ್ಯದಿಂದಾಗಿ ಕೃಷಿಕರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಜಾನುವಾರುಗಳಿಗೆ ರೋಗ ಹರಡಿ ಸಾಯುತ್ತಿವೆ, ಇತ್ತೀಚಿಗೆ ಕ್ಯಾನ್ಸರ್, ಟಿಬಿ ರೋಗ ಈ ಪ್ರದೇಶದಲ್ಲಿ ಅತಿ ಹೆಚ್ಚು ಕಂಡು ಬರುತ್ತಿವೆ ಕೊಪ್ಪಳದ ಸುತ್ತಮುತ್ತಲಿನ ಗ್ರಾಮದ ರೈತರ ಬದುಕು ದುಸ್ತರವಾಗಿದೆ.
ಸಾವಿರ ಎಕ್ರೆ ಪ್ರದೇಶದಲ್ಲಿ ವಿಸ್ತಾರಗೊಳ್ಳಲು ಹೊರಟಿರುವ ಬಳ್ದೋಟ ಕಂಪನಿ ಇಂದ ಅತಿ ಹೆಚ್ಚು ಹಾನಿ ಒಳಗಾಗಬಹುದು ಮುಂದಿನ ದಿನಗಳಲ್ಲಿ ಕೊಪ್ಪಳ ಹಾಗೂ ಗ್ರಾಮ ಸುತ್ತಮುತ್ತ ಗ್ರಾಮದಲ್ಲಿ ಬದುಕುವುದು ಕಷ್ಟವಾಗುತ್ತದೆ ಪರಿಸರದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಪರಿಸರ ಜಾಗೃತಿ ಅಧ್ಯಯನ ಶಿಬಿರ ದಿನಾಂಕ 23& 24ರ ಮಾರ್ಚ್ 2025 ರ ರವಿವಾರದಂದು 11:00 ಗಂಟೆಗೆ ತಾವರಗೇರೆಯ ಬುದ್ಧ ವಿಹಾರದಲ್ಲಿ ನಡೆಯುವುದು ಈ ಶಿಬಿರವನ್ನು ಭಾದಿತ ರೈತರ ಮಕ್ಕಳು ಉದ್ಘಾಟಿಸುವರು. ಅಧ್ಯಯನ ಶಿಬಿರದಲ್ಲಿ ಸಮಾಜ ಪರಿವರ್ತನಾ ಸಮುದಾಯದ   ಎಸ್ ಆರ್ ಹಿರೇಮಠ. ನಿವೃತ್ತ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ  ರಾಜೇಂದ್ರ ಪೋತದಾರ್. ಕೊಪ್ಪಳ ಜಿಲ್ಲಾ ಬಚಾವಂದೋಲ ಸಮಿತಿಯ ಅಲ್ಲಮಪ್ರಭು ಬೆಟದೂರ್, ಡಿಎಚ್ ಪೂಜಾರ್ ನಜೀರ್ ಸಾಬ ಮೂಲಿಮನಿ ಕೆಬಿ ಗೋನಾಳ್ ಶರಣು ಗಡ್ಡಿ ಮಾಂತೇಶ್ ಕೊತಬಾಳ ಶರಣು ಪಾಟೀಲ್ , ಬಸವರಾಜ್ ಶೀಲವಂತರ ಸುಖರಾಜ್ ತಾಳಕೇರಿ ಭಾಗವಹಿಸುವರು ಹೆಚ್ಚಿನ ಸಂಖ್ಯೆಯಲ್ಲಿ ರೈತರ ಮಕ್ಕಳು ಯುವಕರು ಭಾಗವಹಿಸಲು ಕೋರಿದೆ.
ನಜೀರ್ ಸಾಬ್ ಮೂಲಿಮನಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

Get real time updates directly on you device, subscribe now.

Comments are closed.

error: Content is protected !!