ಕುಷ್ಟಗಿ ರೈಲ್ವೇ ಮೆಲ್ಸೇತುವೆ ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ಕಲ್ಪಿಸಿ- ಶಾಸಕ ಕೆ ರಾಘವೇಂದ್ರ ಹಿಟ್ನಾಳ
* ಕುಷ್ಟಗಿ ರೈಲ್ವೇ ಮೆಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಹಿಟ್ನಾಳ ಭೇಟಿ.
ಕೊಪ್ಪಳ : ಇಂದು ಕೊಪ್ಪಳದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರು ಗೇಟ್ 66 ಕುಷ್ಟಗಿ ರೈಲ್ವೇ ಮೆಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದ ವಂಟಗೋಡಿ ಜೊತೆ ಭೇಟಿ ನೀಡಿ ಕಾಮಗಾರಿ ವೀಕ್ಷಿದರು.
ನಂತರ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರು ಮೆಲ್ಸೇತುವೆ ಕಾಮಗಾರಿ ಜೊತೆಯಲ್ಲಿ ಸಾರ್ವಜನಿಕರಿಗೂ ಈ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡುವಂತೆ ಗುತ್ತಿಗೆದಾರನಿಗೆ ತಿಳಿಸಿದರು.ಸದ್ಯ ಬೈಕ್ ಸವಾರರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿದ್ದು ಆಂಬುಲೆನ್ಸ್ ವಾಹನಕ್ಕೆ, ಕಾರ್ ಮತ್ತು ಬಂಡಿ ಸವಾರರಿಗೆ ಸಂಚರಿಸಲು ನಾಳೆಯಿಂದಲೇ ಅವಕಾಶ ನೀಡುವಂತೆ ತಿಳಿಸಿದರು.ಒನ್ ಸೈಡ್ ಕಾಮಗಾರಿ ಮಾಡಿ ಇನ್ನೊಂದು ಸೈಡ್ ವಾಹನ ಸವಾರರಿಗೆ ಸಂಚರಿಸಲು ಅವಕಾಶ ಒದಗಿಸಿ ಕೊಡಿ ಎಂದು ಸೂಚಿಸಿದರು.ಇದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಶಾಸಕರು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದ ವಂಟಗೋಡಿ, ಎಸಿ ಮಹೇಶ ಮಾಲಗಿತ್ತಿ, ನಗರಸಭೆಯ ಸದಸ್ಯರಾದ ವಿರುಪಣ್ಣ ಮೋರನಾಳ, ಅಕ್ಬರ್ ಪಲ್ಟನ್, ಜಿಲ್ಲಾ ವಕ್ತರಾ ಕುರಗೋಡ್ ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments are closed.