ಸರ್ಕಾರಿ ಶಾಲೆಗಳ ನಿರ್ವಹಣೆಯನ್ನು, ಕಾರ್ಪೊರೇಟ್ ದಾನಿಗಳಿಗೆ ನೀಡುವ ಸರ್ಕಾರದ ನಡೆಗೆ ಎಐಡಿಎಸ್ಓ ಖಂಡನೆ

Get real time updates directly on you device, subscribe now.

ಪತ್ರಿಕೆಗಳಲ್ಲಿ ವರದಿಯಾದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಖಾಸಗಿ ಕಂಪನಿಗಳು ನೀಡುವ ಸಿ.ಎಸ್‌.ಆರ್ ಅನುದಾನ ಹೆಚ್ಚಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಶಿಕ್ಷಣ ಸಚಿವ   ಮಧು ಬಂಗಾರಪ್ಪ ನೇತೃತ್ವದಲ್ಲಿ ಸರಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಉನ್ನತೀಕರಿಸಿ ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸಮಿತಿ ರಚಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾರ್ಪೊರೇಟ್ ದಾನಗಳ ಮೇಲೆ ಅವಲಂಬಿತರಾಗಿ ಸರ್ಕಾರಿ ಶಾಲೆಗಳಿಗೆ ಹಣಕಾಸು ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರದ ಈ ಧೋರಣೆಯನ್ನು ಎಐಡಿಎಸ್ಓ ಅತ್ಯುಗ್ರವಾಗಿ ಖಂಡಿಸುತ್ತದೆ.
ದೇಶದ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿ. ಶಿಕ್ಷಣಕ್ಕೆ ಹಣಕಾಸು ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಕಳೆದ ತಿಂಗಳು ಮಳೆಯ ಪ್ರಭಾವಕ್ಕೆ ಮತ್ತಷ್ಟು ದಯನೀಯ ಸ್ಥಿತಿ ತಲುಪಿದೆ. ಶಾಲೆಗಳ ದುರಸ್ತಿಗೆ ಹಣ ಬೇಕು, ನಿಜ. ಆದರೆ ಕಾರ್ಪೋರೇಟ್ ಕಂಪನಿಗಳು ಕೊಡುವ ದಾನದ ಹಣವಲ್ಲ. ಈ ರಾಜ್ಯದ ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದ ಸರ್ಕಾರಿ ಶಾಲೆಗಳ ನಿರ್ವಹಣೆ ನಡೆಯಬೇಕು.
ಕಾರ್ಪೋರೇಟ್ ಕಂಪನಿಗಳು ಹಣ ನೀಡಿ ಸರ್ಕಾರಿ ಶಾಲೆಗಳ ಮೇಲೆ ಹಕ್ಕು ಸಾಧಿಸುವ ಕನಿಷ್ಟ ಅವಕಾಶವನ್ನೂ ರಾಜ್ಯ ಸರ್ಕಾರ ನೀಡಬಾರದು. ಸರ್ಕಾರಿ ಸಂಸ್ಥೆಗಳಿಗೆ ನೀಡುವ ಹಣಕಾಸನ್ನು ಕ್ರಮೇಣವಾಗಿ ಕಡಿತಗೊಳಿಸಿ ಸ್ವಯಂ-ಹಣಕಾಸು ಸಂಸ್ಥೆಗಳನ್ನಾಗಿ ಮಾಡುವುದು ಎನ್.ಇ.ಪಿ-2020ಯ ಮುಖ್ಯ ಶಿಫಾರಸ್ಸುಗಳಲ್ಲೊಂದು. ಎನ್.ಇ.ಪಿ 2020ನ್ನು ರಾಜ್ಯದಲ್ಲಿ ತಿರಸ್ಕರಿಸುತ್ತಿರುವ ಸರ್ಕಾರ ಈ ನೀತಿಯನ್ನೂ ಕೈಬಿಡಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ‌ endu ಗಂಗರಾಜ ಅಳ್ಳಳ್ಳಿ ಜಿಲ್ಲಾ ಸಂಚಾಲಕರು ಎಐಡಿಎಸ್ಓ ಕೊಪ್ಪಳ

Get real time updates directly on you device, subscribe now.

Comments are closed.

error: Content is protected !!
%d bloggers like this: