ಕಾರ್ಖಾನೆಯನ್ನು ಹಿಮ್ಮೆಟ್ಟಿಸುವ ಕಾರ್ಯಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ- ಸಿವಿಸಿ

Get real time updates directly on you device, subscribe now.


ಬೆಂಗಳೂರು : ಸರ್ವ ಪಕ್ಷಗಳ ಮುಖಂಡರು ಮಾನ್ಯ ಸಚಿವರಾದ ಶಿವರಾಜ್ ತಂಗಡಿಗೆ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾದರು. ನಾನು ಕೂಡ ಆ ನಿಯೋಗದಲ್ಲಿದ್ದೆ.
ಕೊಪ್ಪಳಕ್ಕೆ ಬಲ್ದೋಟ ಸಮೂಹದ ಉದ್ದೇಶಿತ ಕಾರ್ಖಾನೆ ಏಕೆ ಬೇಡ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಫ್ಯಾಕ್ಟರಿ ಕೆಲಸವನ್ನು ನಿಲ್ಲಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ. ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶಯದಂತೆ ಸಾಮೂಹಿಕ ನಾಯಕತ್ವದಲ್ಲಿ ಇತ್ತೀಚೆಗೆ ಕೊಪ್ಪಳ ಬಂದ್ ಆಚರಿಸಲಾಗಿತ್ತು. ಕಾರ್ಖಾನೆಯನ್ನು ಕೊಪ್ಪಳದಿಂದ ಹೆಮ್ಮೆಟ್ಟಿಸುವ ಕಾರ್ಯಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ.
ಎಲ್ಲರೂ ಸಂಪೂರ್ಣ ಜಯ ಸಿಗುವ ತನಕ ಒಗ್ಗಟ್ಟಿನಿಂದ ಹೋರಾಡೋಣ. ಕೊಪ್ಪಳವನ್ನು ಉಳಿಸೋಣ.
ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!