ಕೊಪ್ಪಳ ಬಂದ್‌ಗೆ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘ ಸಂಪೂರ್ಣ ಬೆಂಬಲ: ಮುಸ್ತಫಾ ಪಠಾಣ್

Get real time updates directly on you device, subscribe now.

ಗಂಗಾವತಿ: ಕೊಪ್ಪಳದ ಸುತ್ತಮುತ್ತ ಈಗಾಗಲೇ ವಿವಿಧ ಕಾರ್ಖಾನೆಗಳಿಂದ ಹೊರಸೂಸುತ್ತಿರುವ ಧೂಳು, ಹೊಗೆ ಕೊಪ್ಪಳ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳನ್ನು ಸಂಪೂರ್ಣ ಅವರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ, ಕಾರ್ಖಾನೆಗಳ ವಿಸ್ತರಣೆಗೆ ನೀಡಿದ ಅನುಮತಿ ಸಾಕ? ಸಂಶಯವನ್ನುಂಟು ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಮುಸ್ತಫಾ ಪಠಾನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಫೆಬ್ರವರಿ-೨೪ ರಂದು ವಿವಿಧ ಸಂಘಟನೆಗಳು ಕೊಪ್ಪಳ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸದರಿ ಬಂದ್‌ಗೆ ತಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಿರುವದಾಗಿ ತಿಳಿಸುತ್ತಾ ಮಾತನಾಡಿದರು. ನಮ್ಮ ಸಂಘಟನೆ ಕೊಪ್ಪಳ ನಗರ ಸಮೀಪದಲ್ಲಿ ಎಂಎಸ್‌ಪಿಎಲ್‌ನಿಂದ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ವಿರೋಧಿಸುತ್ತಿದ್ದು, ಕಾರ್ಖಾನೆ ಸ್ಥಾಪಿಸುವುದರಿಂದಾಗುವ ಸಮಸ್ಯೆಗಳ ಕುರಿತು ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಎಲ್ಲಾ ಸಂಘಟನೆಗಳು, ಪ್ರಗತಿಪರರ, ಸಾಹಿತಿಗಳು, ಸಾರ್ವಜನಿಕರು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ತಿಳಿಸಲು ಹಾಗೂ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆಯನ್ನು ಕೂಡಲೇ ಸರ್ಕಾರ ಹಿಂಪಡೆಯಲು ಒತ್ತಾಯಿಸಿ ಕೊಪ್ಪಳ ಬಂದ್‌ಗೆ ಕರೆ ನೀಡಿದ್ದು, ಈ ಬಂದ್‌ಗೆ ನಮ್ಮ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!