ರಾಷ್ಟ್ರೀಯ ಸೇವಾ ಯೋಜನೆ ಉಪನ್ಯಾಸ

Get real time updates directly on you device, subscribe now.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಕೊಪ್ಪಳದ ಬಾಲಕರ ಸರಕಾರ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕೊಪ್ಪಳ ದಲ್ಲಿ ಪ್ರೌಢಶಿಕ್ಷಣ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಿಗೆ  ಸ್ಥಳೀಯ ಮುಖ್ಯ ಅಂಚೆ ಕಚೇರಿಯಿಂದ ಆಗಮಿಸಿದ  ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಯಿತು. 
ರಾಷ್ಟ್ರೀಯ ಸೇವಾ ಯೋಜನೆ ಘಟಕದ  ಮಕ್ಕಳಿಗೆ  ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಭಾಸ್ ಅವರು ಮಾತಾನಾಡಿ ಅಂಚೆ ಕಛೇರಿಯ ಉಪಯೋಗಗಳನ್ನು ಕುರಿತು ಮಾತಾನಾಡುತ್ತಾ ಹವ್ಯಾಸವಾಗಿ ಅಂಚೆಚೀಟಿ ಸಂಗ್ರಹ ಮಾಡುವ ಸಾಕಷ್ಟು ಜನರು ಇದ್ದಾರೆ. ಅವರಂತೆ ನೀವು ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಹೆಡ್ ಪೋಸ್ಟ್‌ ಮಾಸ್ಟರ್ ಶ್ರೀ ನಾಗರಾಜ್ ಅವರು ಮಾತನಾಡುತ್ತಾ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ದೃಷ್ಟಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ತಿಳಿಸುತ್ತಾ ಆರ್ಥಿಕವಾಗಿ ಸದೃಢವಾದ ಬದುಕನ್ನು ನೀವು ನಡೆಸಬಹುದು ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾದ ಶ್ರೀ ಗುರುರಾಜ ಎಲ್ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ,  ಶಿಸ್ತು, ಸಮಯ, ಸಹಬಾಳ್ವೆ, ಶ್ರಮದ ಮಹತ್ವದ ಅರಿವು ನಮ್ಮ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ಧ್ಯೇಯ ಹಾಗೂ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಇಂದು ಅಂಚೆ ಇಲಾಖೆಯ ಕಾರ್ಯಗಳನ್ನು ನಾವು ದೇಶಾದ್ಯಂತ ಕಾಣುತ್ತೇವೆ. ಆದರೆ ಅಂಚೆ ಇಲಾಖೆಯ ಕಾರ್ಯವ್ಯಾಪ್ತಿಯನ್ನು ಇನ್ನೂ ಹತ್ತಿರದಿಂದ ಕಾಣಲು ನಮ್ಮ ಅತಿಥಿಗಳು ತಿಳಿಸಿಕೊಡುವರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಶ್ರೀ ಮಹ್ಮದ್ ಅಬ್ದುಲ್ ಖಯುಂ ಅವರು ವಹಿಸಿಕೊಂಡಿದ್ದರು.  ಅತಿಥಿಗಳಾದ ಶ್ರೀ ಮೌನೇಶ, ಸರ್ವೋತ್ತಮ, ಮೈಲಾರಪ್ಪ ಕುರಿ, ಮಂಜುನಾಥ ಸವಡಿ, ರಾಮಣ್ಣ ಚಲವಾದಿ, ಗಂಗಾಧರ ಸ್ವಾಮಿ, ಹುಲಗಪ್ಪ, ಸುಜಾತಾ ಎಂ, ಅನ್ನಪೂರ್ಣ, ಭಾಗ್ಯಲಕ್ಷ್ಮೀ, ನಾಗರಾಜ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಿದ್ದಪ್ಪ ಮೇಟಿ ಗುರುಗಳು ನಡೆಸಿಕೊಟ್ಟರು.

Get real time updates directly on you device, subscribe now.

Comments are closed.

error: Content is protected !!