ಗ್ರಾಮ ಪಂಚಾಯತ್‌ಗಳು ಮಕ್ಕಳ ಆಯವಯ್ಯ ಮಂಡಿಸಿ: ಶೇಖರಗೌಡ ಜಿ ರಾಮತ್ನಾಳ

Get real time updates directly on you device, subscribe now.

): ಗ್ರಾಮ ಪಂಚಾಯತ್‌ಗಳು 2025-26ನೇ ಸಾಲಿನಲ್ಲಿ ಕಡ್ಡಾಯವಾಗಿ “ಮಕ್ಕಳ ಆಯವಯ್ಯ”ವನ್ನು ಮಂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕುಷ್ಟಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕುಷ್ಟಗಿ ತಾ.ಪಂ ಸಭಾಂಗಣದಲ್ಲಿ ಕುಷ್ಟಗಿ ತಾಲೂಕಿನ, ತಾಲೂಕು ಮಟ್ಟದ ಮಕ್ಕಳ ರಕ್ಷಣೆಯ ವಿವಿಧ ಸಮಿತಿಯ ಸದಸ್ಯರುಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಾಗುವ ಯಾವುದೇ ರೀತಿಯ ಅಪರಾಧಗಳನ್ನು ತಡೆಗಟ್ಟಲು ಮಕ್ಕಳು ಶಾಲೆಯಲ್ಲಿರುವುದು ಅತ್ಯವಶ್ಯಕವಾಗಿದೆ. ಈ ಕಾಯ್ದೆಯು ಜಾರಿಯಾಗಿ 15 ವರ್ಷಗಳು ಗತಿಸಿದರು, ಶಾಲೆಯಿಂದ ಮಕ್ಕಳು ಹೂರಗುಳಿಯುತ್ತಿರುವುದು ಕಂಡುಬರುತ್ತಿದ್ದು, ಈ ರೀತಿಯಲ್ಲಿ ಶಾಲೆಯಿಂದ ಹೊರಗುಳಿದ, ಬಿಟ್ಟು ಹೋದ ಮಕ್ಕಳೇ ಬಾಲ್ಯವಿವಾಹ, ಬಾಲಕಾರ್ಮಿಕ ಅಥವಾ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಇಲಾಖೆ, ಸ್ಥಳೀಯ ಸರಕಾರಗಳು ಮಕ್ಕಳನ್ನು ಮರಳಿ ಶಾಲೆ ದಾಖಲಿಸಲು ಕ್ರಮವಹಿಸಬೇಕು ಎಂದರು.
ಗ್ರಾಮ ಪಂಚಾಯತ್‌ಗಳನ್ನು ಮಕ್ಕಳ ಸ್ನೇಹಿಯನ್ನಾಗಿಸಲು ಹಾಗೂ ಮಕ್ಕಳ ಭಾಗವಹಿಸುವ ಹಕ್ಕುಗಳನ್ನು ಖಾತ್ರಿಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2024ರ ನವೆಂಬರ್ 14 ರಿಂದ 2025ರ ಜನೆವರಿ 24 ರವರೆಗೆ “ಮಕ್ಕಳಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಹಾಗೂ ಒಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು” ಆಯೋಜಿಸಲು ಆದೇಶಿಸಿದ್ದು, ಆದರೆ ಕುಷ್ಟಗಿ ತಾಲೂಕಿನ ಬೆರಳೆಣಿಕೆ ಗ್ರಾಮ ಪಂಚಾಯತ್‌ಗಳಲ್ಲಿ ಮಾತ್ರ ಕೇವಲ ‘ಮಕ್ಕಳ ಹಕ್ಕುಗಳ ಗ್ರಾಮ ಸಭೆ’ಯನ್ನು ಆಯೋಜಿಸಿರುವುದಕ್ಕೆ ವಿಷಾಧನಿಯ. ಆದಷ್ಟು ಶೀಘ್ರದಲ್ಲಿ ಇನ್ನೂಳಿದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿಯೂ “ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಕಸ ವಿಲೇವಾರಿ ವಾಹನ’ಗಳ ಮೂಲಕ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ಎಂದು ಪ್ರಚುರಪಡಿಸುವ ಮೂಲಕ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಬಾಲ್ಯವಿವಾಹ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಸಮುದಾಯದಲ್ಲಿ ಇನ್ನೂ ಸಾಕಷ್ಟು ಜಾಗೃತಿಯನ್ನು ಮೂಡಿಸಬೇಕಾಗಿರುತ್ತದೆ. ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ದೇವಸ್ಥಾನಗಳಲ್ಲಿ, ಶಾದಿ ಮಹಲ್, ಖಾಸಗಿ ಕಲ್ಯಾಣ ಮಂಟಪ ಮತ್ತು ಪಂಕ್ಷನ ಹಾಲ್‌ಗಳಲ್ಲಿ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ಎಂಬ ಗೋಡೆ ಬರಹವನ್ನು ಬರೆಯಿಸಿದಲ್ಲಿ ಮಾತ್ರವೇ ಸಾಮೂಹಿಕ ವಿವಾಹ ಅಥವಾ ವಿವಾಹ ಆಯೋಜನೆಗೆ ಅನುಮತಿಯನ್ನು ನೀಡಲು ಕ್ರಮವಹಿಸುವಂತೆ ಸಂಬAಧಿಸಿದ ಎಲ್ಲಾ ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯತ್ ಹಾಗೂ ಪಟ್ಟಣ, ಪುರಸಭೆಯ ಮುಖ್ಯಸ್ಥರುಗಳಿಗೆ ಸೂಚಿಸಿದರು.
ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಿ ಪುನರವಸತಿಯನ್ನು ಕಲ್ಪಿಸಲು ವಿವಿಧ ಭಾಗೀದಾರರ ಇಲಾಖೆಗಳಾದ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಅಬಕಾರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ನಿಯಮಿತವಾಗಿ ಜಂಟಿ ‘ಅನಿರೀಕ್ಷಿತ ದಾಳಿ’ಗಳನ್ನು ಕೈಗೊಳ್ಳಬೇಕು. ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಡ್ಡಾಯವಾಗಿ “ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023”ನ್ನು ಅನುಷ್ಠಾನಗೊಳಿಸಬೇಕು, ಒಂದು ವೇಳೆ ಶೈಕ್ಷಣಿಕ ಸಂಸ್ಥೆಗಳ ಅಧಿಕಾರಿ, ಸಿಬ್ಬಂಧಿಗಳು ಮಕ್ಕಳ ಮೇಲೆ ಯಾವುದೇ ರೀತಿಯ ಅಪರಾಧಗಳನ್ನು ಎಸಗಿದಲ್ಲಿ, ಕಾನೂನು ರೀತ್ಯಾ ಮತ್ತು ನಿಯಮಾನುಸಾರ ಕ್ರಮಗಳನ್ನು ನಿರ್ದಾಕ್ಷಿö್ಯಣವಾಗಿ ಜರುಗಿಸಬೇಕು. ಒಂದು ವೇಳೆ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾದಲ್ಲಿ ಸಂಬAಧಿಸಿದ ಸಂಸ್ಥೆಯ ಮುಖ್ಯಸ್ಥರುಗಳನ್ನು ಹೊಣಿಗಾರರನ್ನಾಗಿಸಲಾಗುವುದು ಎಂದರು.
ಕರ್ನಾಟಕ ಅಬಕಾರಿ ಕಾಯ್ದೆ-1965 ಕಲಂ(20)(1)ರನ್ವಯ ಬಾರ್, ವೈನ್ ಶಾಪ್, ಲಿಕ್ಕರ್ ಮಾರಾಟ ಕೇಂದ್ರ/ಮಳಿಗೆಗಳಲ್ಲಿ 18 ವರ್ಷದೊಳಗಿನ ಯಾರೇ ಮಕ್ಕಳನ್ನು ಕಡ್ಡಾಯವಾಗಿ ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ, ನೇಮಿಸಿಕೊಂಡಿದ್ದೇ ಆದಲ್ಲಿ ಅಂತAಹ ವೆಂರ‍್ಸ್ಗಳ ಸನ್ನದನ್ನು ರದ್ದುಪಡಿಸಬಹುದಾಗಿದೆ, ಆದ್ದರಿಂದ ಎಲ್ಲಾ ವೆಂರ‍್ಸ್ಗಳಿಗೆ ಈ ಬಗ್ಗೆ “ನೊಟೀಸ್”ನ್ನು ನೀಡಿ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಹೇಳಿದರು.
ಕೃಷಿ ಹೊಂಡಗಳಲ್ಲಿ ಮಕ್ಕಳು ಬಿದ್ದು ಮೃತಪಟ್ಟಿರುವ ಘಟನೆಗಳು ಜಿಲ್ಲೆಯಲ್ಲಿ ವರದಿಯಾಗಿರುತ್ತವೆ. ಆದ್ದರಿಂದ ಎಲ್ಲಾ ಕೃಷಿ ಹೊಂಡಗಳಿಗೆ ಇಲಾಖೆಯ ನಿಯಮಾನುಸಾರ ಬೇಲಿ ವ್ಯವಸ್ಥೆ, ಎಚ್ಚರಿಕೆ ಫಲಕ ಹಾಗೂ ಜೀವ ರಕ್ಷಕ ಸಾಧನಗಳನ್ನು ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಈ ಕುರಿತು ಕ್ರಮವಹಿಸುವುದು. ಯಾವುದೇ ಅವಘಡ ಸಂಭವಿಸಿದಲ್ಲಿ ಇಲಾಖೆಯ ನಿಯಮಾನುಸಾರ ಪೊಲೀಸ್ ಠಾಣೆಗಳಲ್ಲಿ ಅಂತAಹ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅವಕಾವಿದ್ದು ಯಾವುದೇ ಅವಘಡ ಸಂಭವಿಸಿದಲ್ಲಿ ಆಯೋಗವು ಕ್ರಮಕ್ಕೆ ಶಿಪ್ಪಾರಸು ಮಾಡುತ್ತದೆಂದು ಹೇಳಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತ ಸ್ವಾಮಿ ಪೂಜಾರ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!