ಯಲಬುರ್ಗಾ: ವಿವಿಧೆಡೆ ಫೆ.17 ಮತ್ತು 18 ರಂದು ವಿದ್ಯುತ್ ವ್ಯತ್ಯಯ

ರೈಲ್ವೆ ಇಲಾಖೆಯವರು ಗದಗ್-ವಾಡಿ ರೈಲು ಮಾರ್ಗ ನಿರ್ಮಿಸುತ್ತಿದ್ದು, ಈ ರೈಲು ಮಾರ್ಗವು 220 ಕೆವಿ ಕುಷ್ಟಗಿ ಸುಳೇಕಲ್ಲ ಮತ್ತು 220 ಕೆವಿ ಕುಷ್ಟಗಿ-ಲಿಂಗಸುಗೂರು ಮಾರ್ಗದಡಿಯಲ್ಲಿ ಹಾಯ್ದು ಹೋಗುತ್ತಿರುವುದರಿಂದ, ಸುರಕ್ಷಿತ ದೃಷ್ಟಿಯಿಂದ ರೈಲ್ವೆ ಹಳಿಗಳ ಮತ್ತು ವಿದ್ಯುತ್ ತಂತಿಗಳ ಅಂತರವನ್ನು ಹೆಚ್ಚಿಸಬೇಕಾಗಿರುತ್ತದೆ. ಇದಕ್ಕಾಗಿ ರೈಲ್ವೆ ಮಾರ್ಗದ ಪಕ್ಕದಲ್ಲಿ ದೊಡ್ಡ ವಿದ್ಯುತ್ ಗೋಪುರಗಳನ್ನು ನಿರ್ಮಿಸಿ, ವಿದ್ಯುತ್ ಪ್ರಸರಣ ಮಾರ್ಗವನ್ನು ಮರು ಸ್ಥಾಪಿಸಬೇಕಾಗಿರುತ್ತದೆ. ಈ ಕಾರ್ಯವು ಫೆ. 17ರಂದು ಬೆಳಿಗ್ಗೆ 8 ಗಂಟೆಯಿಂದ ಫೆ.18ರ ರಾತ್ರಿ 9 ಗಂಟೆಯವರೆಗೆ ನಡೆಯುತ್ತದೆ. ಇದರಿಂದ 220 ಸ್ವೀಕರಣ ಕೇಂದ್ರ ಕುಷ್ಟಗಿಗೆ 220 ಕೆವಿ ಪ್ರಸನ್ನ ಮಾರ್ಗಗಳು ವಿದ್ಯುತ್ ಸರಬರಾಜು ಇಲ್ಲದ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಬದಲಾವಣೆಯಾಗುತ್ತದೆ. ಇದರಿಂದ ಯಲಬುರ್ಗಾ ತಾಲೂಕಿನ 110ಕೆವಿ ಯಲಬುರ್ಗಾ, ವಜ್ರಬಂಡಿ, ಬೇವೂರ, ಗಾಣದಾಳ ಹಾಗೂ 33ಕೆವಿ ಹಿರೇಮ್ಯಾಗೇರಿ, ಬಂಡಿ, ಹಿರೇವಂಕಲಕುಂಟಾ ಮತ್ತು ಹಿರೇಬೊಮ್ಮನಾಳ ವಿದ್ಯುತ್ ಕೇಂದ್ರಗಳಿಗೆ ಬರುವ ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ತಾಂತ್ರಿಕ ತೊಂದರೆಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಬದಲಾವಣೆಯ ಸಮಯ ಸಂಭವಿಸುತ್ತದೆ. ಮೇಲ್ಕಾಣಿಸಿದ ದಿನಾಂಕಗಳಲ್ಲಿ ನೀರಾವರಿ ಪಂಪ್ ಶೆಟ್ಟಿಗಳಿಗೆ 7 ತಾಸು ವಿದ್ಯುತ್ ಪಾಳೆಯಲ್ಲಿ ಸಮಯ ಬದಲಾವಣೆ ಆಗಬಹುದಾಗಿರುತ್ತದೆ.
ಇದಕ್ಕಾಗಿ ಸಾರ್ವಜನಿಕರು ಹಾಗೂ ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕು. ವಿದ್ಯುತ್ ನಿರ್ವಹಣೆ ಕೆಲಸವನ್ನು ನಿರ್ಮಿಸುವಾಗ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಅಥವಾ ತೆಗೆದು ಹಾಕಬಹುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರದ ವಿದ್ಯುತ್ ದುರಸ್ತಿ ಕೆಲಸಗಳನ್ನು ಮತ್ತು ಕಾರ್ಯಗಳನ್ನು ಮಾಡಬಾರದು ಈ ಮೂಲಕ ಸೂಚಿಸಲಾಗಿದೆ ಎಂದು ಜೆಸ್ಕಾಂ ಯಲಬುರ್ಗಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅನ್ವಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.