ಸ್ವಾತಂತ್ರೋತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆ ಸಂಪರ್ಕಿಸಿ 9663700567

Get real time updates directly on you device, subscribe now.

ಸ್ವಾತಂತ್ರೋತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆ

ಕೊಪ್ಪಳ : ಸ್ವಾತಂತ್ರೋತ್ಸವದ ನಿಮಿತ್ಯ ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಭಾಗ್ಯನಗರದ ಅಂಬೇಡ್ಕರ್ ಸಮಗ್ರ ಶಿಕ್ಷಣ ಹಾಗೂ ಕ್ಷೇಮಾಭಿವೃದ್ಧಿ ಸಂಘ(ರಿ) ವತಿಯಿಂದ ಈ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಬಂಧ ಸ್ಪರ್ಧೆಯಲ್ಲಿ ಎರಡು ವಿಭಾಗಗಳಿದ್ದು ಒಂದರಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹಾಗೂ ಕಾಲೇಜ್ ವಿದ್ಯಾರ್ಥಿಗಳಾಗಿ ಎರಡು ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಜೊತೆಗೆ ಪುರಸ್ಕಾರವನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಚಂದ್ರು ಇಟ್ಟಂಗಿ ತಿಳಿಸಿದ್ದಾರೆ.

ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಿಷಯ *ನನ್ನ ನೆಚ್ಚಿನ ಸ್ವತಂತ್ರ ಹೋರಾಟಗಾರ*

ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಷಯ : *ನಮ್ಮ ಸಂವಿಧಾನ ನಮ್ಮ ಹೆಮ್ಮೆ*

ಪ್ರಬಂಧಗಳನ್ನು ಚಂದ್ರು ಇಟ್ಟಂಗಿ, ಅಧ್ಯಕ್ಷರು ಡಾ.ಬಿ.ಆರ್.ಅಂಭೇಡ್ಕರ ಸಮಗ್ರ ಶಿಕ್ಷಣ ಕ್ಷೇಮಾಭಿವೃದ್ಧಿ ಸಂಘ, ಅಂಬೇಡ್ಕರ್ ಸರ್ಕಲ್ ಭಾಗ್ಯನಗರ ಇವರಿಗೆ ತಲುಪುವಂತೆ ಪೋಸ್ಟ್ ಮುಖಾಂತರವಾಗಲಿ, ಕೋರಿಯರ್ ಮುಖಾಂತರ ಇಲ್ಲವೇ ಇಮೇಲ್ [email protected] ಅಥವಾ ವಾಟ್ಸಪ್ ಮೂಲಕವೂ ಕಳಿಸಬಹುದು. ನಿಮ್ಮ ಪ್ರಬಂಧಗಳನ್ನು ಕಳಿಸುವುದಕ್ಕೆ ಕೊನೆ ದಿನಾಂಕ 13 ಆಗಸ್ಟ್ 2023 ಆಗಸ್ಟ್ 15ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧ್ಯಕ್ಷರು 9663700567

Get real time updates directly on you device, subscribe now.

Comments are closed.

error: Content is protected !!
%d bloggers like this: