ಇನ್ನರ್ ವೀಲ್ ಕ್ಲಬ್ ಕೊಪ್ಪಳ ಜಿಲ್ಲಾ ಐಎಸ್ಓ ಯಾಗಿ ಶರಣಮ್ಮ ಪಾಟೀಲ್ ಆಯ್ಕೆ

ಕೊಪ್ಪಳ, ಜ 30, ಸಮಾಜ ಸೇವಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ಇನ್ನರ್ ವೀಲ್ ಕ್ಲಬ್ ನ ಕೊಪ್ಪಳ ಜಿಲ್ಲಾ ಘಟಕಕ್ಕೆ ಜಿಲ್ಲಾ ಐಎಸ್ಒ ಯಾಗಿ ಕೊಪ್ಪಳದ ಶ್ರೀಮತಿ ಶರಣಮ್ಮ ಪಾಟೀಲ್ ಆಯ್ಕೆಗೊಂಡಿದ್ದಾರೆ,
ತಿರುಪತಿಯಲ್ಲಿ ಜರುಗಿದ ಇನ್ನರ್ ವೀಲ್ ಕ್ಲಬ್ ರಾಜ್ಯಮಟ್ಟದ ಸಮಾವೇಶದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಐ ಎಸ್ ಓ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಶರಣಮ್ಮ ಪಾಟೀಲ್ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ ಎಂದು ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ತಿಳಿಸಿದ್ದಾರೆ, ಹಾಗೂ ಜಿಲ್ಲಾ ಐಎಸ್ಒ ಯಾಗಿ ಶರಣಮ್ಮಾ ಪಾಟೀಲ್ ರವರು ಜಯ ಸಾಧಿಸಿರುವದಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರ ಆಯ್ಕೆ ನಮ್ಮ ಕ್ಲಬ್ ಗೆ ಹೆಮ್ಮೆಯ ವಿಷಯ ವಾಗಿದೆ ಎಂದು ನೂತನವಾಗಿ ಆಯ್ಕೆಗೊಂಡ ಆವರಿಗೆ ಅಭಿನಂದಿಸಿ ಶುಭ ಕೋರಿದ್ದಾರೆ, ಶರಣಮ್ಮ ಪಾಟೀಲ್ ರವರು ಈ ಹಿಂದೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದು ಈಗ ಜಿಲ್ಲಾ ಮಟ್ಟದಲ್ಲಿ ಕ್ಲಬ್ಬಿನ ಐ ಎಸ್ ಓ ಯಾಗಿ ಆಯ್ಕೆಗೊಂಡಿದ್ದು ಇನ್ನಷ್ಟು ಉತ್ತಮ ಸೇವೆ ಇವರಿಂದ ದೊರಕಲಿ ನಮ್ಮ ಜಿಲ್ಲೆಯ ಹೆಸರಿಗೆ ಕೀರ್ತಿ ತರುವಂತಾಗಲಿ ಎಂದು ಉಮಾ ಮಹೇಶ್ ತಂಬ್ರಹಳ್ಳಿ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ