ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿಲ್ಲಾ ಪಂಚಾಯತಿ ಸಿಇಓ
ಶಾಲಾ ಶೌಚಾಲಯಗಳು & ಸಂಜಿವಿನಿ ಶೆಡ್ ಕಾಮಗಾರಿ ಪರಿಶೀಲನೆ
: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಒಗ್ಗೂಡಿಸುವಿಕೆ ಮೂಲಕ ಅನುಷ್ಠಾನಿಸುತ್ತಿರುವ ಶಾಲಾ ಶೌಚಾಲಯ ಕಾಮಗಾರಿಗಳನ್ನು ಗುಣಮಟ್ಟದಿಂದ ಅನುಷ್ಠಾನಿಸಿರೆಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಕರೆ ನೀಡಿದರು.
ಅವರು ಸೋಮವಾರ ಕೊಪ್ಪಳ ತಾಲೂಕಿನ ಹಾಲವರ್ತಿ, ಗಿಣಿಗೇರಾ ಹಾಗು ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಂಡ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಶಾಲಾ ಶೌಚಾಲಯ ಹಾಗು ಸಂಜೀವಿನಿ ಸಂಘದ ಶೆಡ್ *ಕಾಮಗಾರಿಗಳ ಪರಿಶೀಲನೆ:* ಗ್ರಾಮ ಪಂಚಾಯತಿಯ ಕಿಡದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗು ಗಿಣಿಗೇರಾ ಗ್ರಾಮ ಪಂಚಾಯತಿಯ ಹಳೆಕನಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗು ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆಯ ಒಗ್ಗೂಡಿಸುವಿಕೆ ಮೂಲಕ ಅನುಷ್ಠಾನಿದ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿದರು. ಶೌಚಾಲಯವನ್ನು ಬಳಕೆಗೆ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ಇರುವ ಸೌಲಭ್ಯ ಕುರಿತು ಪರಿಶೀಲಸಿದರು.
ಮಕ್ಕಳಿಗೆ ಶೌಚಾಲಯ ಅವಶ್ಯವಿರುವದರಿಂದ ಇಲಾಖೆಯ ಒಗ್ಗೂಡಿಸುವಿಕೆ ಮೂಲಕ ಅನುದಾನ ಬಿಡುಗಡೆಯಾಗಿದ್ದು ಕೂಡಲೇ ಕಾಮಗಾರಿಯನ್ನು ಗುಣಮಟ್ಟದಿಂದ ಅನುಷ್ಠಾನಿಸಿ ಮಕ್ಕಳಿಗೆ ಬಳಕೆ ನೀಡಬೇಕೆಂದು ಸಿಇಓ ಅವರು ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯತಿಯ ಸಂಜಿವಿನಿ ಸಂಘದ ಮಹಿಳೆಯರಿಗೆ ತಮ್ಮ ಚಟುವಟಿಕೆಗಳನ್ನು ನಿರ್ವಹಿಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯತಿಯಿಂದ ಅನುಷ್ಠಾನಿಸಲಾದ ಸಂಜಿವಿನಿ ಕಾಮನವರ್ಕ ಶೆಡ್ ಕಾಮಗಾರಿ ಮುಕ್ತಾಯಗೊಂಡಿದ್ದು ಕೂಡಲೇ ಸಂಜಿವಿನಿ ಸಂಘಟದ ಮಹಿಳೆಯರಿಗೆ ಹಸ್ತಾಂತರಿಸಬೇಕೆಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ, ಆಡಳಿತ ಮಂಡಳಿ ಹಾಗು ಸೂಚಿಸಿದರು. ತಾಂತ್ರಿಕ ಸಹಾಯಕರಿಗೆ 2024-25ನೇ ಸಾಲಿನಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳು ತುರ್ತಾಗಿ ಮುಕ್ತಾಯಗೊಳಿಸುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಆಹಾರ ವಿತರಣೆ ಕುರಿತು ಪರಿಶೀಲಿಸಿದರು.
ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದ ಜಿಲ್ಲಾ ಪಂಚಾಯತಿ ಸಿಇಒ: ಚಿಕ್ಕಬೊಮ್ಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮೊಟ್ಟೆ, ಬಾಳೆಹಣ್ಣು, ಆಹಾರ ವಿತರಣೆ ಕುರಿತು ಚರ್ಚಿಸಿದರು. ಮಕ್ಕಳಿಗೆ ಸ್ವಚ್ಛತೆಯ ಕುರಿತು ಪಾಠ ಮಾಡಿದರು. ಎಲ್ಲಾ ಮಕ್ಕಳು ತಮ್ಮ ಮನೆಯಲ್ಲಿರುವ ಶೌಚಾಲಯ ಕಡ್ಡಾಯವಾಗಿ ಬಳಕೆ ಮಾಡುವಂತೆ ಕರೆ ನೀಡಿದರು.ಶಾಲೆಯ ಆವರಣದಲ್ಲಿದ್ದ ಕೂಸಿನ ಮನೆಗೆ ಭೇಟಿ ಕೂಸಿನ ಮನೆಯ ದಾಖಲಾತಿಗಳನ್ನು ಪರಿಶೀಲಿಸಿದರು. ಮಕ್ಕಳಿಗೆ ಆಹಾರ ವಿತರಣೆ ಕುರಿತು ಕೆರ್ ಟೆಕರ್ ಮಾಹಿತಿ ನೀಡಿದರು. ಕೂಸಿನ ಮನೆಗೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳಿಗೆ ಹೆಚ್ಚು ಹೆಚ್ಚು ಮಕ್ಕಳು ದಾಖಲಾಗುವಂತೆ ಕ್ರಮವಹಿಸಲು ಪಂಚಾಯತ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ್.ವಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಜಿಲ್ಲಾ ಪಂಚಾಯತಿ ಎಡಿಪಿಸಿ ಮಹಾಂತಸ್ವಾಮಿ, ಗಿಣಿಗೇರಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ ಪಾಟೀಲ್, ಸದಸ್ಯ ರವಿಕುಮಾರ ಹಲಗೇರಿ, ಪಿಡಿಓ ಮಂಜುಳಾದೇವಿ ಹೂಗಾರ, ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯತಿಯ ಪಿಡಿಓ ಅಂದಿಗಲ್ಲಪ್ಪ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿಗಳಾದ ಬಸಯ್ಯ ಕೆಂಬೊಡಿಮಠ, ಮಂಜುನಾಥ, ಯಮನೂರಪ್ಪ ತಾಂತ್ರಿಕ ಸಹಾಯಕರಾದ ಮುರುಳಿಧರ, ಅಕ್ಷತಾ, ಮಲ್ಲಿಕಾರ್ಜುನ ಮೆಗಳಮನಿ, ಗ್ರಾಮ ಪಂಚಾಯತಿ & ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.
Comments are closed.