ಕೊಪ್ಪಳದ ಹಿರಿಮೆ ದೇಶಾದ್ಯಂತ ಪಸರಿಸಿದ ಭೀಮಜ್ಜಿ: ಸಿವಿಸಿ
Koppal : ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಅವರು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಶತಾಯುಷಿ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳಿಕ್ಯಾತರ ಅವರನ್ನು ರವಿವಾರ ಮೊರನಾಳ ಗ್ರಾಮದ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದರು.
“ನಶಿಸಿ ಹೋಗುತ್ತಿರುವ ಕಲೆಗೆ ಮರು ಜೀವ ತುಂಬಿ ದಂತಕತೆಯಾದ ಶತಾಯುಷಿ ಜೀವ ಕೊಪ್ಪಳದ ಹಿರಿಮೆಯನ್ನು ದೇಶಾದ್ಯಂತ ಪಸರಿಸಿದೆ. ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ,” ಎಂದು ಹೇಳಿದರು.
ತೊಗಲು ಗೊಂಬೆ ಆಟವನ್ನು ಇನ್ನಷ್ಟು ಪ್ರಚುರಪಡಿಸುವ ಅಗತ್ಯವಿದೆ. ಇದಕ್ಕಾಗಿ ಈ ಕಲಾ ಪ್ರಕಾರದ ಕಲಾವಿದರಿಗೆ ಸರಕಾರ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ತಮ್ಮ ಕೈಲಾದಷ್ಟು ಮಟ್ಟಿಗೆ ಈ ಕಲಾ ಪ್ರಕಾರದಲ್ಲಿ ತೊಡಗಿರುವ ಕಲಾವಿದರಿಗೆ ಸಹಾಯ ಮಾಡುವುದಾಗಿ ಅವರು ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಜೆ ಡಿ (ಎಸ್) ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಜಡಿ, ನಾಯಕರುಗಳಾದ ದೇವಪ್ಪ ಕಟ್ಟಿಮನಿ, ಅಳವಂಡಿ, ಭೀಮರಡ್ಡೆಪ್ಪ ಗದ್ದಿಕೇರಿ, ಶರಣಪ್ಪ ಮತ್ತುರ, ಬೆಟಗೇರಿ, ಹಾಗೂ ಇತರ ನಾಯಕರು ಹಾಜರಿದ್ದರು.
Comments are closed.