ಬಂಜಾರ ಬಹುಮುಖಿ ಕಲಾ ಮಳಾವೋ ಕಾರ್ಯಕ್ರಮ: ಅರ್ಜಿ ಆಹ್ವಾನ

Get real time updates directly on you device, subscribe now.

: 2024-25ನೇ ಸಾಲಿನ ಬಂಜಾರ ಸಮುದಾಯದ ಬಹುಮುಖಿ ಕಾಲಾ ಪ್ರತಿಭಾನ್ವೇಷಣೆ-ಕಲಾ ಮಳಾವ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾಪ್ರದರ್ಶನ ನೀಡಲು ಅರ್ಹ ಬಂಜಾರ ಸಮುದಾಯದ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮವು ತಾಂಡಾಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವುದರ ಜೋತೆಗೆ ಬಂಜಾರ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷೆಣಿಕ, ಮತ್ತು ಸಾಂಸ್ಕೃತಿಕ, ಅಭಿವೃದ್ಧಿಗಾಗಿ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದೆ. ಬಂಜಾರರ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಿ ಪುನಶ್ಚೇತನ ಗೋಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿಧರ ಪ್ರತಿಭೆಯನ್ನು ಹೊರ ಹೊಮ್ಮಿಸಲು ಬಂಜಾರರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ–ಕಲಾ ಮಳಾವೋ, ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಂಜಾರ ಸಮುದಾಯದ ಬಹುಮೂಖಿ ಕಲಾ ಪ್ರಕಾರಗಳಾದ ವಾಜಾ ವಾದ್ಯ ಕಲೆ, ಕಥನ ಗಾಯನ (ಸಣ್ಣ ವಾಜಾ), ಲೆಂಗಿ ನೃತ್ಯ, ನಂಗಾರಾ ಠೋಳಿ ಬಿಡಿಸುವ ನೃತ್ಯ, ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಘೂಮರ್ ನೃತ್ಯ, ಮಹಿಳೆಯ ಜಾನಪದ ನೃತ್ಯ, ಮಹಿಳೆಯರ ಸಾಂಪ್ರದಾಯಿಕ ಗಾಯನ ಮತ್ತು ನೃತ್ಯ, ಬಂಜಾರ ಸುಗಮ ಸಂಗೀತ, ಬಾಲಕಿಯರ ನೃತ್ಯ, ಬಾಲಕರ ಲೆಂಗಿ ನೃತ್ಯ, ಬಾಲಕರ ಮತ್ತು ಬಾಲಕಿಯರ ಆದುನೀಕ ನೃತ್ಯ, ಮಹಿಳೆಯರ ಹವೆಲಿ & ಡಾವಲೋ ಪ್ರಕಾರಗಳಲ್ಲಿ ಬಂಜಾರ ಸಮುದಾಯದ ಕಲಾವಿಧರು ಭಾಗವಹಿಸಿ ತಮ್ಮಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಪೂರೈಸಿ ಪ್ರಶಸ್ತಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿಮಾಡಿ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ ವಲಯ ಕಛೇರಿ, ಕೊಪ್ಪಳ ಸರಸ್ವತಿ ವಿದ್ಯಾ ಮಂದಿರದ ಹತ್ತಿರ ಕೇಂದ್ರಿಯ ವಿದ್ಯಾಲಯ ರಸ್ತೆ ಜಿಲ್ಲಾ ಬಂಜಾರ ಭವನ ಬಹದ್ದೂರ ಬಂಡಿ ಕೊಪ್ಪಳ-583238, ಇಲ್ಲಿಗೆ ಜನವರಿ 30ರೊಳಗಾಗಿ ಸಲ್ಲಿಸಬೇಕು. ಈ ಹಿಂದೆ ನಿಗಮದಿಂದ ನಡೆದ ಎಲ್ಲಾ ಕಲಾ ಮಳಾವೋ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ, ಪಡೆದ ಕಲಾ ತಂಡಗಳ ಕಲಾವಿದರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಕೊಪ್ಪಳ ವಲಯ ಕಛೇರಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!