ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಅನುಭವಿಸುವಂತಾಗಬೇಕು – ಆಶಾ ವಿ.
ಕೊಪ್ಪಳ : ನಮ್ಮ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಸಿಗಬೇಕು. ಅದನ್ನು ಅವರು ಅನುಭವಿಸುವಂತಾಗಬೇಕು ಎಂದು ವಿಸ್ತಾರ ಸಂಸ್ಥೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಆಶಾ ವಿ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಸ್ತಾರ ಸಂಸ್ಥೆಯ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ” ಕಾರ್ಯಕ್ರಮದಲ್ಲಿ ವಿಸ್ತಾರ ಸಂಸ್ಥೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಆಶಾ. ವಿ ಅವರು ಮುಂದುವರೆದು ಗಂಡು-ಹೆಣ್ಣು ಎಂಬ ತಾರತಮ್ಯ, ಹೆಣ್ಣಿನ ಮೇಲಿನ ದೌರ್ಜನ್ಯ, ಹಿಂಸಾಚಾರ, ಹೆಣ್ಣಿನ ಮೇಲೆ ಆಗುತ್ತಿರುವ ಅತ್ಯಾಚಾರ, ಇವೆಲ್ಲ ನಡೆಯುವುದನ್ನು, ನಾವು ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಮೊದಲು ತಾರತಮ್ಯ ಎಂಬುವುದು ನಮ್ಮ ಮನೆಯಿಂದಲೇ ಶುರುವಾಗುತ್ತವೆ.ಮನೆಯಲ್ಲಾಗಲಿ, ಶಾಲಾ- ಕಾಲೇಜುಗಳಲ್ಲಾಗಲಿ , ತಾರತಮ್ಯ, ಹಿಂಸಾಚಾರ, ದೌರ್ಜನ್ಯ, ಎಲ್ಲವೂ ನಡೆಯುತ್ತವೆ. ಆದ್ದರಿಂದಲೇ, ಮನೆಯ ಒಂದು ಅಡುಗೆ ಕೆಲಸದಿಂದ ಹಿಡಿದು, ಶಿಕ್ಷಣ ಮತ್ತು ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ಹೆಣ್ಣಿಗೆ ಸಮಾನತೆ ಸಿಗ್ಬೇಕು. ಎಂಬುದು ಈ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಮುಖ್ಯ ಉದ್ದೇಶ ಎಂದರು.
ಕೆಕೆಎಸ್ ಸಂಘದ ಕಿಶೋರಿಯ ರೇಷ್ಮಾ ಮಾತನಾಡಿ ಹೆಣ್ಣು ಮಕ್ಕಳ ದೌರ್ಜನ್ಯ ನಮ್ಮ ಮನೆಯಿಂದಲೇ ಶುರುವಾಗುವುದು. ತಾರತಮ್ಯವು ಸಹ ಅಲ್ಲಿಂದಲೇ ಶುರುವಾಗುವುದು ಮತ್ತು ಹೆಣ್ಣು- ಗಂಡು ಎಂಬ ತಾರತಮ್ಯ ಮಾಡಬಾರದು. ಶಿಕ್ಷಣದಲ್ಲಾಗಲಿ, ಯಾವುದೇ ವಿಚಾರದಲ್ಲಾಗಲಿ, ಅವರಿಗೆ ಸ್ವಾತಂತ್ರ್ಯ ನೀಡಬೇಕು ಎಂದರು.
ಗಾಳೆಮ್ಮ ಪೂಜಾರ ಮಾತನಾಡಿ, 18 ವರ್ಷದ ಒಳಗಿನ ಮಕ್ಕಳು ಮಗು ಎಂದು ಹೇಳುತ್ತಾರೆ. ಬಾಲ್ಯ ವಿವಾಹದಿಂದಾಗುವ ಪರಿಣಾಮವನ್ನು ಸಮಾಜ ಅರ್ಥಮಾಡಿಕೊಳ್ಳಬೇಕು.ಸಮಾಜದಲ್ಲಿ ಜಾರಿಗೆ ಬಂದ ಕಾನೂನುಗಳನ್ನು ಅನುಸರಿಸಿತ್ತಿಲ್ಲ. ಮಕ್ಕಳಲ್ಲಿ ತಾರತಮ್ಯವನ್ನು ಮಾಡ್ತಾರೆ. ಅದು ನಮ್ಮ ಮನೆಯಿಂದ ಶುರುವಾಗುತ್ತೆ. ಸಾಮಾಜಿಕ ಜಾಲತಾಣದಳಾಗಲಿ, ಸಾಮಾಜಿಕ ಸ್ಥಳ ಗಳಲ್ಲಾಗಲಿ, ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ, ನಡೆಯುತ್ತಿವೆ. ಹಿಂಸಾಚಾರವನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಎಂದು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದರ ಮಾತನಾಡಿ ಹೆಣ್ಣು ಬ್ರೂಣ ಹತ್ಯೆ ನಿಲ್ಲಬೇಕು.ಬಾಲ್ಯ ವಿವಾಹ ತಡೆಯಲು ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳುತ್ತೇವೆ. ಆದರೂ ಸಹ ಯಲಬುರ್ಗಾ ತಾಲೂಕಿನಲ್ಲಿ ಹೆಚ್ಚಾಗಿ ಬಾಲ್ಯ ವಿವಾಹ ಕಾಣಿಸಿಕೊಳ್ಳುತ್ತಿವೆ. ಅತಿಯಾಗಿ ಮಹಿಳೆಯರಿಗೆ ಅನ್ವಯಿಸುವ ಯೋಜನೆಗಳು ಇವೆ. ನಮ್ಮ ಕಡೆಯಿಂದ ಬಾಲ್ಯ ವಿವಾಹ ತಡೆಗಟ್ಟಲು ನಾವೇಲ್ಲ ಹೋರಾಡೋಣವೆಂದು ಹೇಳಿದರು.
ಮನವಿ ಪತ್ರ: ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುಲು ಮಕ್ಕಳು ಮನವಿ ಸಲ್ಲಿಸಿದರು. ಇದಕ್ಕೆ ಸ್ಪದಿಸಿದ ಶಾಸಕರು, ಕಾನೂನು ರೀತಿಯಲ್ಲಿ ನಾನು ಎನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತೆನೆ, ನಮ್ಮ ಕಡೆಯಿಂದ ಕಾನೂನಾತ್ಮಕವಾಗಿ, ಏನು ಬೆಂಬಲ ಬೇಕು ನಾವು ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಮಾನವ ಸರಪಳಿ : ವಿಸ್ತಾರ ರಂಗಶಾಲೆಯ ಕಲಿಕಾರ್ಥಿಗಳು ಕೋಲಾಟ, ಜಾಗೃತಿ ಹಾಡುಗಳನ್ನು ಹಾಡಿದರು ನಂತರ ಕಿತ್ತೂರಾಣಿ ಚೆನ್ನಮ್ಮ ಸರ್ಕಲ್ ನಿಂದ, ತಹಶೀಲ್ದಾರ ಕಚೇರಿವರೆಗೆ ಘೋಷಣೆ ಕೂಗುವುದರ ಮುಖಾಂತರ ಬಂದು ಸೇರಲಾಯಿತ್ತು.
ಈ ಕಾರ್ಯಕ್ರಮದಲ್ಲಿ ಕಿಶೋರಿ ಮತ್ತು ಮಕ್ಕಳ ಸಂಸತ್ತಿನ ಸದಸ್ಯರಾದ ಮಹಮ್ಮದ್ ರಫಿ, ದಾಮಿನಿ, ಪುಟ್ಟರಾಜ, ಸ್ಪೂರ್ತಿ, ಭೀಮವ್ವ, ಮಮತಾ ಹಾಗೂ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಕ್ತರ್ ಸಾಬ್ ಖಾಝಿ, ವಿಸ್ತಾರನ ಸಹನಿರ್ದೇಶಕರಾದ ಡಾ. ನಾಸರ್ ಪಿಎಸ್, ಆಡಳಿತಧಿಕಾರಿ ಯೊಸೇಫ ಡಿಜೆ, ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಜಾಸ್ಮಿನ್ ಬೇಗಂ, ಜಯಶ್ರೀ, ಇಮಾಸಾಬ್ ಕರಮುಡಿ, ಬಸವರಾಜ ಬಳಿಗೇರ್, ಧರ್ಮರಾಜ ಗೋನಾಳ, ಶೀವಲಿಲಾ, ಅಲಿಸಾಬ್ ಶಿರೂರ್, ಅನ್ವರ ಪಾಷ, ಪ್ರಕಾಶ್ ಹಳ್ಳಿ, ಅನುಸುಯಾ, ಗಾಳೆಪ್ಪ ಗುಳದಳ್ಳಿ ರೈತ ಸಂಘಟನೆ, ಮಹಿಳಾ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಸುಜಾತ ಮತ್ತು ಜಯಶ್ರೀ ಅವರು ಸ್ವಾಗತಿಸಿದರು. ಧರ್ಮರಾಜ ಗೋನಾಳ ಸಂವಿಧಾನ ಪೀಠಿಕೆ ಪ್ರಸ್ತಾವನೆ ವಾಚಿಸಿದರು. ಅನ್ವರ್ ಬಾಷಾ ವಂದನಾರ್ಪಣೆ ಮಾಡಿದರು.
Comments are closed.