ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಕೊಪ್ಪಳ : ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 76 ನೇ ಗಣರಾಜ್ಯೋತ್ಸವ ದಿನಾಚರಣೆಯ ನಿಮಿತ್ಯ ಪ್ರಾಂಶುಪಾಲರಾದ ಡಾ ಡಿ.ಎಚ್. ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಂವಿಧಾನದ ಪೂರ್ವ ಪೀಠಿಕೆ ಅನ್ವಯ ರಾಷ್ಟ್ರವು ಸಾಗಬೇಕಾದ ಅನಿವಾರ್ಯ ತೆಯನ್ನು ಮನನ ಮಾಡಿದರು. ವಿಶ್ವದಲ್ಲಿಲ್ಲದ ವಿಶೇಷ ಸಂವಿಧಾನಿಕ ನಿಯಮಗಳು ಭಾರತದ ಸಂವಿಧಾನದಲ್ಲಿ ಅಡಗಿವೆ ಅವುಗಳನ್ನು ಪರಿಪಾಲಿಸುವ ಜವಾಬ್ದಾರಿಯು ಪ್ರತಿಯೊಬ್ಬ ಭಾರತೀಯರಿಗಿದೆ. ಆ ನಿಟ್ಟಿನಲ್ಲಿ ಯುವ ಸಮೂಹ ಸಾಗಬೇಕೆಂದರು. ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ ಪೂಜಾರ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ದೈಹಿಕ ನಿರ್ದೇಶಕರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Comments are closed.