ಬಜೆಟ್ ಅಧಿವೇಶನದಲ್ಲಿ ನೂತನ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸುವೆ: ಶಾಸಕ ರೆಡ್ಡಿ
ಗಂಗಾವತಿ:
ಬಜೆಟ್ ಪೂರ್ವ ಅಥವಾ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾವಿತ ನೂತಕ ಕಿಷ್ಕಿಂಧಾ ಜಿಲ್ಲಾ ಹೋರಾಟದ ಬಗ್ಗೆ ಸಕರ್ಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಭರವಸೆ ನೀಡಿದರು.
ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ತಂಡ ಭಾನುವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ಶಾಸಕ ರೆಡ್ಡಿ ಅವರನ್ನು ಭೇಟಿಯಾಗಿ, ನೂತನ ಜಿಲ್ಲೆಯ ಹೋರಾಟದ ಬಗ್ಗೆ ಸಕರ್ರ್ಾರದ ಗಮನ ಸೆಳೆಯುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.
ಇದಕ್ಕೆ ಸ್ಪಂದಿಸಿದ ಶಾಸಕ ರೆಡ್ಡಿ, ಐತಿಹಾಸಿಕ ಅಂಜನಾದ್ರಿಯನ್ನು ಒಳಗೊಂಡ ಗಂಗಾವತಿ ನೂತನ ಜಿಲ್ಲೆಯಾದರೆ ಹಿಂದುಳಿದ ಕನಕಗಿರಿ, ತಾವರಗೇರೆ ಮಾತ್ರವಲ್ಲ, ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಕಾರಟಗಿ ಸೇರಿದಂತೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
ಜಿಲ್ಲೆಯ ಐತಿಹಾಸಿಕ, ಪ್ರವಾಸಿ ತಾಣ ಅಭಿವೃದ್ಧಿಯಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಅಧಿವೇಷನದಲ್ಲಿ ಖಚಿತವಾಗಿ ನೂತನ ಜಿಲ್ಲೆಯ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಅಲ್ಲದೇ ನೂತನ ಜಿಲ್ಲೆಯ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಹೇಳಿದರು.
ಪ್ರಸ್ತಾವಿತ ನೂತನ ಕಿಷ್ಕಿಂಧಾ ಜಿಲ್ಲೆಯ ವ್ಯಾಪ್ತಿಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕು ಸೇರಿಸಿಕೊಳ್ಳಲಾಗಿದ್ದು, ಆಡಳಿತಾತ್ಮಕವಾಗಿ ಇದು ಸಾಧ್ಯವೇ..? ಎಂಬುವುದನ್ನು ಒಮ್ಮೆ ತಜ್ಞರ ಮೂಲಕ ಸಾಧ್ಯತೆಯನ್ನು ಮನವರಿಕೆ ಮಾಡಿಕೊಳ್ಳ ಬೇಕು ಎಂದು ರೆಡ್ಡಿ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹೋರಾಟ ಸಮಿತಿ ಸಂಚಾಲಕ ಸಂತೋಷ್ ಕೆಲೋಜಿ, ಈಗಾಗಲೆ ಕಂಪ್ಲಿಯಲ್ಲಿ ಸಮಿತಿಯಿಂದ ಸಭೆ ನಡೆಸಿ ವಿವಿಧ ವಲಯದ ಗಣ್ಯರು ಮತ್ತು ಜನ ಸಾಮಾನ್ಯರ ಅಭಿಪ್ರಾಯ ಆಲಿಸಲಾಗಿದೆ. ನೂತನ ಜಿಲ್ಲೆಯ ವ್ಯಾಪ್ತಿಗೆ ನಮ್ಮನ್ನು ಸೇರಿಸುವಂತೆ ನಾವೇ ಮುಂದಾಳತ್ವ ವಹಿಕೊಂಡು ಹೋರಾಟ ಮಾಡುತ್ತೇವೆ ಎಂದು ಕಂಪ್ಲಿ ಜನ ಹೇಳಿದ್ದಾರೆ ಎಂದರು.
`ಸಕರ್ಾರದ ಕಟ್ಟಳೆಗಳು ಏನೇ ಇದ್ದರೂ ಅಂತಿಮವಾಗಿ ಜನರಿಗೆ ಬೇಕಿರುವ ಬೇಡಿಕೆಯನ್ನು ಈಡೇರಿಸಬೇಕಿರುವುದು ಸಕರ್ಾರದ ಆದ್ಯ ಕರ್ತವ್ಯ. ಹೀಗಾಗಿ ಗಂಗಾವತಿ ಜಿಲ್ಲೆ ಯಾಗಲು ದೊಡ್ಡ ಧನಾತ್ಮಕ ಅಂಶ ಕಂಪ್ಲಿ ಮೂಲಕ ಲಭಿಸಿದಂತಾಗಲಿದೆ. ಆದಾಗ್ಯೂ ಒಮ್ಮೆ ಕಂಪ್ಲಿಯ ಶಾಸಕರನ್ನು ಭೇಟಿಯಾಗಿ’ ಎಂದು ರೆಡ್ಡಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ನಾರಾಯಣಪ್ಪ ನಾಯಕ್, ಸುರೇಶ ಸಿಂಗನಾಳ, ಜಗನ್ನಾಥ ಆಲಂಪಲ್ಲಿ ಪ್ರಮುಖರಾದ ರಮೇಶ ಚೌಡ್ಕಿ, ದಳಪತಿ ದುರುಗಪ್ಪ, ಗವಿ ಕುಂಬಾರ, ಕೃಷ್ಣ ಅಲೆಮಾರಿ, ದೀಪಕ್ ಬಾಂಠಿಯಾ, ಆನಂದ್ ಕೋಟೆ, ಶ್ರೀನಿವಾಸ ಎಂ.ಜೆ, ಮಂಜುನಾಥ ಕಟ್ಟಿಮನಿ, ಮಂಜುನಾಥ ಗುಡ್ಲಾನೂರು, ವಿನಯ್ ಪಾಟೀಲ್, ರಾಜೇಶ ರೆಡ್ಡಿ ಇದ್ದರು.
Comments are closed.