ನೇತಾಜಿಯವರ ಜೀವನ ನಮಗೆ ಸ್ಪೂರ್ತಿದಾಯಕ : ಶರಣಪ್ಪ ಬಾಚಲಾಪುರ

ಕೊಪ್ಪಳ: ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನೇತಾಜಿ ಸುಭಾಷಚಂದ್ರ ಭೋಸರವರ 128ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶರಣಪ್ಪ ಬಾಚಲಾಪುರ ನ್ಯೂಸ್-18 ಜಿಲ್ಲಾ ವರದಿಗಾರರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತಕ್ಕೆ ಜೈಹಿಂದ್ ಎಂಬ ಘೋಷಣೆ ನೀಡಿದವರು, ಬ್ರಿಟಿಷರ ಸಿಂಹಸ್ವಪ್ನ ನೇತಾಜಿ ಸುಭಾಷಚಂದ್ರಭೋಸ್. ಬ್ರಿಟಿಷರು ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಹೊಂದಿದ್ದರು. ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸಿ, ಭಾರತ ಮಾತೆಯನ್ನು ಬಂಧನದಿAದ ಮುಕ್ತಗೊಳಿಸಬೇಕೆಂದು ಎರಡು ಬಣಗಳ ಅಂದರೆ ಉಗ್ರಗಾಮಿಗಳು ಮತ್ತು ಮಂದಗಾಮಿ ಉದ್ದೇಶವಾಗಿತ್ತು. ನೇತಾಜಿಯವರು ಉಗ್ರಗಾಮಿಗಳಾಗಿದ್ದರೆ ಗಾಂಧೀಜಿಯವರು ಮಂದಗಾಮಿಗಲಾಗಿದ್ದರು. ಆದರೂ ಇಬ್ಬರ ಉದ್ದೇಶ ಮಾತ್ರ ಭಾರತವನ್ನು ಸ್ವತಂತ್ರಗೊಳಿಸುವುದು. ನೇತಾಜಿಯವರ ಜೀವನ ಸದಾ ನಮಗೆ ಸ್ಪೂರ್ತಿದಾಯಕ ಹಾಗೂ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಏಕೆಂದರೆ “ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳು”.ಆದರೆ ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಅವರು ದಾರಿ ತಪ್ಪುತ್ತಿದ್ದಾರೆ. ಪಾಲಕರು ಕನಿಷ್ಠ ೧೦ನೇ ತರಗತಿ ಮುಗಿಯುವವರೆಗೆಯಾದರು ಮಕ್ಕಳನ್ನು ತಮ್ಮ ಪಾಲನೆಯಲ್ಲಿ ಬೆಳೆಸಿ ಅವರಿಗೆ ಸಂಸ್ಕಾರವನ್ನು ನೀಡಬೇಕು ಇಲ್ಲದಿದ್ದರೆ ತಂದೆ-ತಾಯಿ, ಅಣ್ಣ-ತಂಗಿ ಸಂಬAಧಗಳ ಬೆಲೆ ತಿಳಿಯುವುದಿಲ್ಲ. ತಂದೆ-ತಾಯಿ ಹಿರಿಯರ ಬಗ್ಗೆ ಗೌರವ ಮತ್ತು ಪ್ರೀತಿ ಬೆಳೆಯುವುದಿಲ್ಲ. ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಾದ ಅರ್ಪಿತಾ, ಸಂಗೀತಾ, ಶಿವಪ್ರಸಾದ ಹಾಗೂ ಪೃಥ್ವಿರಾಜ್ ಇವರುಗಳು ನೇತಾಜಿ ಸುಭಾಷಚಂದ್ರಬೋಸ್‌ರವರ ಜೀವನ ಚರಿತ್ರೆ ಹಾಗೂ ಹೋರಾಟದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಆರ್.ಹೆಚ್.ಅತ್ತನೂರರವರು ಮಾತನಾಡಿ ಶ್ರೇಷ್ಠ ಅಪ್ರತಿಮ ವೀರ ನೇತಾಜಿಯವರ ಸಾಧನೆ ಅವರ ತ್ಯಾಗ ಬಲಿಧಾನಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರೇಣುಕಾ ಅತ್ತನೂರರವರು ಶಾಲಾ ಶಿಕ್ಷಕರು ಹಾಗೂ ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕಿ ಅನೀಶ್ ನೆರವೇರಿಸಿದರು, ಶಿಕ್ಷಕಿ ಲಕ್ಷ್ಮಿಯವರು ನಿರೂಪಿಸಿದರು ಹಾಗೂ
ಶಿಕ್ಷಕಿ ತಮನ್ನಾ ವಂಧಿಸಿದರು. ಈ ಕಾರ್ಯಕ್ರಮದ ನಂತರ ಎಲ್ಲಾ ಮಕ್ಕಳಿಗೆ ಸಹಿ-ತಿಂಡಿಯನ್ನು ಹಂಚಿದರು.
Comments are closed.