ಗಂಗಾವತಿ: ಆರೋಪಿತರ ಜಾಮೀನು ಅರ್ಜಿಗಳ ವಜಾ
: ಜಾಮೀನು ಕೋರಿ ಆರೋಪಿತರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.ಈ ಆರೋಪಿತರು ಜಾಮೀನು ಕೋರಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಂಗಾವತಿ ಅವರಲ್ಲಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದು, ಅದಕ್ಕೆ ಅಭಿಯೋಜನೆ ಪರವಾಗಿ ತಕಾರರುಗಳನ್ನು ಸಲ್ಲಿಸಿದ್ದು, ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಇವರು 2025ರ ಜನವರಿ 15ರಂದು ಆರೋಪಿತರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿರುತ್ತಾರೆ. ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಕರಾದ ನಾಗಲಕ್ಷ್ಮೀ ಎಸ್ ಇವರು ವಾದ ಮಂಡಿಸಿರುತ್ತಾರೆ ಎಂದು ಗಂಗಾವತಿ ಸರ್ಕಾರಿ ಅಭಿಯೋಕರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.
Comments are closed.