ಶ್ರೀ ಮಠದ ಅಂಗಳದಲ್ಲಿ ತೇಲಾಡಿದ ಬಣ್ಣ ಬಣ್ಣದ ಪಟಗಳು
ಕೊಪ್ಪಳ . ನಗರದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದ ಆವರಣದ ಮೈದಾನದಲ್ಲಿ ಅತ್ಯಾಕ?ಕ ಗಾಳಿಪಟಗಳ ಪ್ರದರ್ಶನ ನಡೆಯಿತು. ಶ್ರೀ ಗವಿಮಠದ ಅಂಗಳದಲ್ಲಿನ ಗಾಳಿಯಲ್ಲಿ ತೇಲಾಡುವ ಹತ್ತು ಹಲವು ಬಣ್ಣ ಬಣ್ಣದ ಪಟಗಳು ಜಾತ್ರೆಯಲ್ಲಿ ಸೇರಿದ ದೊಡ್ಡವರ ಹಾಗೂ ಚಿಕ್ಕ ಮಕ್ಕಳ ಮತ್ತು ಜಾತ್ರೆಗೆ ಆಗಮಿಸಿದ ಭಕ್ತರ ಮನಸ್ಸಿಗೆ ಸಂತಸದ ಕ್ಷಣಗಳನ್ನು ತಂದಿತು.
ಬೆಳಗ್ಗೆ ೧೧ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ನಡೆದ ಗಾಳಿಪಟ ಪ್ರದರ್ಶನದಲ್ಲಿ ಬೆರೇ ರಾಜ್ಯದ ಕೇರಳ, ಗುಜರಾಜ, ಒರಿಸ್ಸಾ ಮತ್ತು ಕರ್ನಾಟಕದ ದೊಡ್ಡಬಳ್ಳಪುರ ಹಾಗೂ ಬೆಂಗಳೂರಿ ಹವ್ಯಾಸಿ ಗಾಳಿಪಟ ಪ್ರದರ್ಶನ ತಂಡಗಳು ಭಾಗವಸಿದ್ದರು. ಸಾಲುಪಠ, ರಿಂಗ್, ಡ್ರಾಗನ್, ಅಕ್ಟೋಪಸ್, ಸ್ಟಂಟ್ ಕ್ಯ್ರಾಕ್, ಪೈಲೆಟ್, ಹುಲಿ, ಚಿರತೆ, ಬಾತುಕೋಳಿ ಮುಂತಾದ ಗಾಳಿಪಟಗಳು ಗಾಳಿಯಲ್ಲಿ ತೇಲಾಡುತ್ತ ನೈಜತೆಯಂತೆ ಗೋಚರಿಸಿ ನೋಡುಗರಿಗೆ ಆತ್ಯಾಕರ್ಷಕವಾಗಿ ಕಂಡುಬಂದವು. ಗಾಳಿಪಟ ಪ್ರದರ್ಶನವು ಈ ವರ್ಷದ ಜಾತ್ರಾ ಮಹೋತ್ಸವದ ಆಕರ್ಷಣೆಗಳಲ್ಲಿ ಒಂದಗಿದೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.