ಗವಿಮಠದ ಬಾನಂಗಳದಲ್ಲಿ ಬಣ್ಣ-ಬಣ್ಣದ ಪಥಂಗಗಳ ಹಾರಾಟ
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗವಿಮಠದ ಬಾನಂಗಳದಲ್ಲಿ ಬಣ್ಣ-ಬಣ್ಣದ ಪಥಂಗಗಳು ಹಾರಾಡಿ ಸಾರ್ವಜನಿಕರ ಗಮನ ಸೆಳೆದವು.
ಗಾಳಿಪಟಗಳ ಪ್ರದರ್ಶನ ಸ್ಥಳಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಅವರು ಭೇಟಿ ನೀಡಿ, ಬಳಿಕ ಮಾತನಾಡಿ, ಗಾಳಿಪಟ ಉತ್ಸವವನ್ನು ಕೊಪ್ಪಳಕ್ಕೆ ಪರಿಚಯಿಸುವ ಉದ್ದೇಶದಿಂದ ಬೃಹತ್ ಗಾತ್ರದ ಗಾಳಿಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಗಾಳಿಪಟ ಪ್ರದರ್ಶನಗಳು ಹೆಚ್ಚಾಗಿ ಸಮುದ್ರ ತೀರದ ಪ್ರದೇಶಗಳಲ್ಲಿ ನಡೆಯುತ್ತದೆ. ಅಂತಹ ಉತ್ಸವಗಳಿಗೆ ಹೋಗಲಾಗದ ನಮ್ಮ ಗ್ರಾಮೀಣ ಭಾಗದ ಜನರಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟಗಳ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರದರ್ಶನದಲ್ಲಿ ಗುಜರಾತ, ಓಡಿಸ್ಸಾ, ಕೇರಳ ಮತ್ತು ನಮ್ಮ ಕರ್ನಾಕಟ ರಾಜ್ಯದ ತಂಡಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರು ಸಹ ಪಾಲ್ಗೊಂಡಿದ್ದಾರೆ. ರಾತ್ರಿಯೂ ಸಹ ಎಲ್.ಇ.ಡಿ ಗಾಳಿಪಟಗಳ ಪ್ರದರ್ಶನವು ನಡೆಯಲಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಿ ಆನಂದಿಸಬಹುದಾಗಿದೆ ಎಂದು ಹೇಳಿದರು.
ಭಾರತದ ಕೈಟ್ ಮ್ಯಾನ್ ಎಂದೇ ಪ್ರಸಿದ್ದರಾದ ವಿ.ಕೃಷ್ಣಜಿ ರಾವ್ ಅವರು ಮಾತನಾಡಿ, ಗಾಳಿಪಟಗಳನ್ನು ಮೊದಲು ಬಿದಿರಿನ ಮೂಲಕ ತಯಾರಿಸಿ ಹಾರಿಸುತ್ತಿದ್ದೇವು. ಈಗ ವಿಭಿನ್ನ ರೂಪದ ಬಟ್ಟೆಗಳಲ್ಲಿ ಸಿದ್ದಪಡಿಸಿ ಹಾರಿಸಲಾಗುತ್ತಿದೆ. ಫೈಲೆಟ್ ಕೈಟ್, ಹುಲಿ, ಕುದರೆ, ಮೀನು, ಹಸು, ಆಮೆ ಹೀಗೆ ಹಲವಾರು ಬಗೆಯ ಗಾಳಿಪಟಗಳನ್ನು ಮಾಡಿ ಹಾರಿಸಲಾಗುತ್ತಿದೆ. ಜಾತ್ರೆಯಲ್ಲಿ ಗಾಳಿಪಟ ಉತ್ಸವ ಹಮ್ಮಿಕೊಳ್ಳುವುದರಿಂದ ಹೆಚ್ಚಿನ ಜನರಿಗೆ ಮನರಂಜನೆ ಸಿಗುತ್ತದೆ. ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟಗಳ ಪ್ರದರ್ಶನ ಹಮ್ಮಿಕೊಂಡಿರುವುದರಿAದ ಜನರು ತುಂಬಾ ಉತ್ಸಾಹದಿಂದ ಇವುಗಳ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಸೇರಿದಂತೆ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ಗಾಳಿಪಟಗಳನ್ನು ಹಾರಿಸುವ ತಂಡಗಳ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ದೈಹಿಕ ಶಿಕ್ಷಕರು, ವಿವಿಧ ಶಾಲಾ ಕಾಲೇಜುನ ಮಕ್ಕಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.