ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ: ಪದ್ಮಶ್ರೀ ಜಾದವ್ ಪಾಯಂಗ್

0

Get real time updates directly on you device, subscribe now.

ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಪದ್ಮಶ್ರೀ  ಜಾದವ್ ಪಾಯಂಗ್ ಹೇಳಿದರು.   ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಯ ಒಳಗಡೆ ಕೂತು ಶಿಕ್ಷಣ ಕಲಿಯಬಾರದು, ಪ್ರಾಯೋಗಿಕವಾಗಿ ಕಲಿಯಬೇಕು ಎಂದು ಕರೆ ನೀಡಿದರು ಇದರ ಜೊತೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಗಿಡವನ್ನು ನೆಟ್ಟುವುದರ ಬಗ್ಗೆ ಗಮನಹರಿಸಬೇಕೆಂದು ಕರೆ ನೀಡಿದರು. ಕಾಲೇಜಿನ ಪ್ರಚಾರದ ಡಾ. ಚನ್ನಬಸವ ಎ. ಮಾತನಾಡಿ ವಿದ್ಯಾರ್ಥಿಗಳು ಭವ್ಯ ಭಾರತದ ನಿರ್ಮಾಣ ಮಾಡುವ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.
ನಂತರ ಮಹಾವಿದ್ಯಾಲಯದ ಆವರಣದಲ್ಲಿ ಜಾದವ್ ಪಾಯಂಗ್ ಅವರು ಸಸಿ ನಟ್ಟು ನಿರುಣಿಸಿದರು. ಈ ಕಾರ್ಯಕ್ರಮದಲ್ಲಿ ಏನ್.ಸಿ.ಸಿ ಅಧಿಕಾರಿ ದಯಾನಂದ ಸಾಳವಂಕಿ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಜಾಲಿಹಾಳ ಶರಣಪ್ಪ ಮತ್ತು ಶರಣಪ್ಪ ಚೌಹಾಣ್, ಐಕ್ಯೂಎಸಿ ಸಂಯೋಜಕರಾದ ಡಾ. ಅರುಣ್ ಕುಮಾರ್ ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ವೆಂಕಟೇಶ್ ಬೋವಿ, ಮಂಜುನಾಥ್ ಹಿರೇಮಠ್ ಅಮರೇಶ್ ತಳುವಗೇರಿ, ಕನಕರಾಯ ಗೊಂಡಬಾಳ್, ಮಂಜುನಾಥ ಹಿರೇಮಠಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್ ಎನ್‌ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!