ಲಕ್ಷಾಂತರ ಭಕ್ತರ ಜನಸಾಗರದ ಜಾತ್ರೆ
ಕೊಪ್ಪಳ
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗವಿಸಿದ್ದೇಶ್ವರ ಮಹಾ ರಥೋತ್ಸವ ಜರಗಿತು. ಬೆಳಗಿನಿಂದಲೇ ನಾಡಿನ ನಾನಾ ಭಾಗಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಸಂಜೆ ಗೋಧೂಳಿ ಸಮಯದಲ್ಲಿ ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕ ವೆಂಕಟೇಶ್ ಕುಮಾರ್ ಷಟಸ್ತಲ ಧ್ವಜವನ್ನು ಏರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಪಾದಗಟ್ಟೆಯತ್ತ ರಥ ಹೊರಟಾಗ ಜನ ಭಕ್ತಿಯಿಂದ ಕೈ ಮುಗಿದು ಪುಳಕಿತರಾದರು. ಪಾ ಮರಳಿ ಸ್ವಸ್ಥಾನಕ್ಕೆ ಬಂದ ಬಳಿಕ ನೆರೆದ ಜನಸ್ತೋಮ ಪುಲಕಿತರಾಗಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ, ಶಾಸಕರಾದ ರಾಘವೇಂದ್ರ ಹಿಟ್ನಾಳ್ ಪಾಟಿಲ್, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ , ಸಿ ವಿ ಚಂದ್ರಶೇಖರ್ ಡಾಕ್ಟರ್ ಬಸವರಾಜ , ಮಾಜಿ ಸಂಸದ ಕರಡಿ ಸಂಗಣ್ಣ, ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಇತರರು ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು.