ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಸಂದರ್ಭದಲ್ಲಿ ಬಾಳೆಹಣ್ಣು ಎಸೆಯದಿರಲು ಸದ್ಭಕ್ತರಲ್ಲಿ ಮನವಿ
ಕೊಪ್ಪಳ – ಶ್ರೀ ಗವಿಮಠದಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ದಿನಾಂಕ ೧೫.೦೧.೨೫ ರಂದು ಜರುಗುವ ಮಹಾರಥೋತ್ಸವ ಸಾಗುವ ಸಂಧರ್ಭದಲ್ಲಿ ಭಕ್ತರುತಮ್ಮ ಭಕ್ತಿಯಿಂದಉತ್ತತ್ತಿ iಹಾರಥೋತ್ಸವಕ್ಕೆಅರ್ಪಿಸುವುದು ಸಂಪ್ರದಾಯ. ಆದರೆ ಬಾಳೆಹಣ್ಣನ್ನು ಎಸೆಯುವುದು ಜಾಸ್ತಿ ಆಗಿದ್ದು, ಅದರಿಂದಜಾತ್ರಾಆವರಣದಲ್ಲಿನ ಮಕ್ಕಳು, ಮಹಿಳೆಯರು, ವೃದ್ಧರು, ಭಕ್ತರು ಕಾಲು ಜಾರಿ ಬೀಳುವ ಸಂದರ್ಭವಿರುತ್ತವೆ. ಅಲ್ಲದೆ ಶ್ರೀಮಠದ ಆವರಣದಲ್ಲಿಯೂ ಸ್ವಚ್ಚತೆಕಾಪಾಡಲುತೊಂದರೆಯಾಗುವುದು, ಆದಕಾರಣ ಮುನ್ನಚ್ಚೆರಿಕೆಯಕ್ರಮವಾಗಿ ಸಧ್ಭಕ್ತಾಧಿಗಳು ಬಾಳೆಹಣ್ಣು ರಥೋತ್ಸವಕ್ಕೆಎಸೆಯಬಾರದೆಂದು ಹಾಗೂ ಬಾಳೆಹಣ್ಣನ್ನು ಮಾರಾಟ ಮಾಡುವವರು ಸಹ ಶ್ರೀ ಮಹಾರಥೋತ್ಸವ ನಡೆಯುವಆವರಣದಲ್ಲಿ ಬಾಳೆಹಣ್ಣನ್ನು ಮಾರಾಟ ಮಾಡಬಾರದೆಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.